2009-2012ರ ವರೆಗು ತಿಪಟೂರು ತಾಲ್ಲೂಕು ಕೊನೇಹಳ್ಳಿಯ ಬಿದಿರಮ್ಮನಗುಡಿ ಅಮೃತ್‍ಮಹಲ್ ಕಾವಲಿನಲ್ಲಿ, ಮೈತ್ರಯ ಪರಿಸರ ಅಧ್ಯಯನ ಕೇಂದ್ರವು ನೆಡೆಸಿದ ರ್ಯಾಪಿಡ್ ಬಯೋಡೈವರ್ಸಿಟಿ ಸರ್ವೆಯಲ್ಲಿ 247 ವಿವಿಧ ಸಸ್ಯ ಸಂಕುಲಗಳು, 40ಕ್ಕೂ ಹೆಚ್ಚು ಚಿಟ್ಟೆ ಪ್ರಭೇದಗಳು, 74ಕ್ಕೂ ಹೆಚ್ಚು ಹುಲ್ಲುಗಾವಲು ಪಕ್ಷಿ ಸಂಕುಲಗಳು ಕಂಡು ಬಂದಿರುತ್ತದೆ. ಹಾಗೆ ಅಳಿವಿನ ಅಂಚಿನಲ್ಲಿರುವ ಅಪರೂಪದ 240ಕ್ಕೂ ಹೆಚ್ಚು ಕೃಷ್ಣಮೃಗಗಳು, ತೋಳ, ನರಿ, ಕತ್ತೆಕಿರುಬ, ಚಿರತೆ ಹಾಗು 5ಕ್ಕು ಹೆಚ್ಚು ವಿಧದ ಸರಿಸೃಪಗಳಿಗೆ ಆಶ್ರಯ ತಾಣವಾಗಿರುತ್ತದೆ.
ಇವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆಯು ಇಲ್ಲಿ ಬೇಟೆ ನಿರ್ಮೂಲನಾ ಪಡೆಯನ್ನು ಸ್ಥಾಪಿಸಿದೆ. ಇತ್ತೀಚೆಗೆ ಇಲ್ಲಿನ ಸಂಶೋಧನಾ ಕೇಂದ್ರವು ಕೃಷ್ಣಮೃಗ ಮತ್ತು ನರಿಗಳು ಬಳಸುವ ಕಾವಲಿನ ಅವರಣದಲ್ಲಿ ವಿದ್ಯುತ್ ಮತ್ತು ತಂತಿ ಬೇಲಿಗಳುನ್ನು ನಿರ್ಮಿಸಿರುತ್ತದೆ. ಬಹುಸೂಕ್ಮ ಸ್ವಭಾವ ಹೊಂದಿರುವ ಕೃಷ್ಣಮೃಗಗಳ ಮರಿಗಳು, ನರಿಗಳು, ಮುಂಗಸಿ, ನವಿಲು ಮತ್ತು ಸರಿಸೃಪಗಳು ಈ ಬೇಲಿಗಳಿಗೆ ತಾಕಿದರೆ ಸಾವನ್ನಪ್ಪುವ ಅಥವಾ ತೀವ್ರ ಘಾಸಿಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು ಅರಣ್ಯ ಇಲಾಖೆಯು ಕೂಡಲೆ ಮಧ್ಯ ಪ್ರವೇಶಿಸಿ ವಿದ್ಯುತ್ ಬೇಲಿಯನ್ನು ತೆರವುಗೊಳಿಸಿ ಅಪರೂಪದ ಈ ಹುಲ್ಲುಗಾವಲ್ಲನ್ನು ಮತ್ತು ಇಲ್ಲಿನ ಕೃಷ್ಣಮೃಗಗಳನ್ನು ಸಂರಕ್ಷಿಸಲು ಬಿದಿರಮ್ಮನಗುಡಿ ಅಮೃತ್‍ಮಹಲ್ ಕಾವಲನ್ನು “ಕೃಷ್ಣಮೃಗÀ ಸಂರಕ್ಷಿತ ತಾಣ” ಎಂದು ಘೋಷಿಸಬೇಕು.
ಶ್ರೀಕಾಂತ್ ಹೆಚ್. ಎಸ್.
ಮುಖ್ಯಸ್ಥರು, ಮೈತ್ರಯ ಪರಿಸರ ಅಧ್ಯಯನ ಕೇಂದ್ರ, ತಿಪಟೂರು.
No comments:
Post a Comment