Wednesday, August 15, 2012

Vultures - Environment Steward at Stake..!!!



ಪರಿಸರ ನೈರ್ಮಲ್ಯದ ಮೇಲ್ವಿಚಾರಕ : ರಣಹದ್ದುಗಳು..


   ಒಂದು ಕಾಲದಲ್ಲಿ ಹತ್ತು ಹಲವು ಲಕ್ಷಗಳಲ್ಲಿ ಎಣಿಸಲ್ಪಡುತ್ತ್ತಿದ್ದ ಬೂದು ಬಣ್ಣದ ರಣಹದ್ದುಗಳು ಇತ್ತೀಚಿನ ಕೆಲವೇ ಹತ್ತು ವರ್ಷಗಳಲ್ಲಿ ಅವಸಾನದ ಹಾದಿ ತಲುಪಿರುವುದು ನಿಜಕ್ಕೂ ಶೋಚನಿಯ. ರಣಹದ್ದುಗಳ ಸಂಖ್ಯೆ 1990 ರಿಂದ ಈಚೆಗೆ ಗಣನೀಯವಾಗಿ ಇಳಿಮುಖವಾಯಿತು. ಅದರ ಸಂಖ್ಯೆಯನ್ನು ಹೆಚ್ಚಿಸಲು ತೆಗೆದುಕೊಂಡ ಎಲ್ಲಾ ಪ್ರಯತ್ನಗಳು ವಿಫಲವಾದವು.ಇದಕ್ಕೆ ಮುಖ್ಯ ಕಾರಣ ಮನುಷ್ಯನ ಪ್ರಕೃತಿ ವಿರೋಧಿ ಕಾರ್ಯಚಟುವಟಿಕೆಗಳು ಮತ್ತು ಪರಿಸರ ಹಾಳಾಗುತ್ತಿರುವುದು ಎಂದು ವಿಜ್ಞಾನಿಗಳು ಹತಾಶÀರಾಗಿ ಪದೇ ಪದೇ ಹೇಳುತ್ತಿದ್ದಾರೆ.

2004 ರಲ್ಲಿ ಅಮೆರಿಕಾದ ವಿಜ್ಞಾನಿಗಳು ಪಾಕಿಸ್ತಾನ ಮತ್ತು ಭಾರತದ ಪ್ರಾಂತ್ಯಗಳಲ್ಲಿ ಕಂಡು ಬರುವ ಸತ್ತ ರಣಹದ್ದುಗಳ ಅಂಗಾಂಶಗಳನ್ನು ತೆಗೆದು ಪ್ರಯೋಗಾಲಯದಲ್ಲಿ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿದರು. ಈ ವಿಶ್ಲೇಷಣೆಯಿಂದ ಬೆಳಕಿಗೆ ಬಂದ ವಿಚಾರವೇನೆಂದರೆ ಇವುಗಳ ದೇಹದಲ್ಲಿ ಸೇರಿಕೊಂಡಿದ್ದಂತಹ ವಿಷಪದಾರ್ಥಗಳೇ ಇವುಗಳ ಸಾವಿಗೆ ಕಾರಣವಾಗಿರುವುದು. ಪ್ರಮುಖವಾಗಿ ಡೈಕ್ಲೋಫಿನಾಕ್ ಪಶು ನೋವು ನಿವಾರಕ. ಸತ್ತಂತಹ ಸಾಕು ಪ್ರಾಣಿಗಳ ದೇಹವನ್ನು ಇವುಗಳು ತಿನ್ನುವುದರಿಂದ ಆ ಸಾಕು ಪ್ರಾಣಿಗಳ ದೇಹದಲ್ಲಿದ್ದಂತಹ ವಿಷ ರಾಸಾಯನಿಕಗಳು ರಣಹದ್ದುಗಳ ದೇಹವನ್ನು ಸೇರಿತ್ತವೆ. ರಣಹದ್ದುಗಳ ದೇಹದಲ್ಲಿ ಈ ರಾಸಾಯನಿಕವು ತ್ವರಿತಗತಿಯಲ್ಲಿ ಪರಿಣಾಮವುಂಟುಮಾಡಿ, ಹಕ್ಕಿಗಳ ದೇಹ ತೀವ್ರ ಬಳಲಿಕೆಗೊಂಡು ಸಾವನ್ನಪ್ಪುತ್ತದೆ.ಹಾಗಾಗಿ ಡೈಕ್ಲೋಫಿನಾಕ್ ಪಶು ನೋವು ನಿವಾರಕ  ರಣಹದ್ದುಗಳ ವಿನಾಷಕ್ಕೆ ಕಾರಣವಾಗಿರುವುದು ಕಟು ಸತ್ಯ. ಸಾಕು ಪ್ರಾಣಿಗಳ ಖಾಯಿಲೆ ಗುಣಪಡಿಸಲು ಬಳಸುತ್ತಿದ್ದ ಈ ರಾಸಾಯನಿಕ ರಣಹದ್ದುಗಳಿಗೆ ವಿಷವಾಗಿ ಪರಿಣಮಿಸಿತು. ಅಂದಿನಿಂದ ಭಾರತ ಸರ್ಕಾರ 2006 ರಲ್ಲಿ ಪಶುಗಳಿಗೆ ಬಳಸುವ ಡೈಕ್ಲೋಫಿನಾಕ್ ಪಶು ನೋವು ನಿವಾರಕ ಔಷಧಿ ತಯಾರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇಷ್ಟಾದರೂ ಅಂಡ್ರೂ ಕನ್ನಿಂಗ್ ಹ್ಯಾಮ್ (Andrew Cunningham: Zoological Society of London) ಬಿ.ಎನ್.ಹೆಚ್.ಎಸ್ ಜೊತೆ ರಣಹದ್ದುಗಳ ಮೇಲೆ ಅಧ್ಯಯನ ನಡೆಸುತ್ತಿದ್ದ ಸಂದರ್ಭದಲ್ಲಿ ತಿಳಿದು ಬಂದ ವಿಚಾರವೇನೆಂದರೆ ಇಂದಿಗೂ ಕೂಡ  ಡೈಕ್ಲೋಫಿನಾಕ್ ಸೋಡಿಯಂ ಅನ್ನು ಪಶು ನೋವು ನಿವಾರಕವಾಗಿ ಬಳಸುತ್ತಿರುವುದು ಕಂಡುಬಂದಿದೆ.

ಪರಿಸರದ ಸ್ವಚ್ಚತೆಯನ್ನು ಕಾಪಾಡುವ ಕರ್ತವ್ಯವನ್ನು ಚಾಚುತಪ್ಪದೆ ನಿಭಾಯಿಸುತ್ತಿದ್ದ ರಣಹದ್ದುಗಳು ತಮಗರಿವಿಲ್ಲದೆಯೆ ಸಾಯುತ್ತಿವೆ. ಅದರಲ್ಲೂ ಬಿಳಿ- ರಣಹದ್ದುಗಳು (oriental white-rumped vultures) 2000 ಇಸವಿಯಿಂದೀಚೆಗೆ ವರ್ಷಕ್ಕೆ ಶೇಕಡ 44 ರಷ್ಟು ಮರಣಿಸುತ್ತಿವೆ. ಪ್ರಪಂಚದ ಯಾವುದೇ ಹಕ್ಕಿಗಳ ಮರಣಿಸುವ ಸಂಖ್ಯೆಯ ದರ ಇಷ್ಟೋಂದು ಪ್ರಮಾಣದಲ್ಲಿರಲಿಲ್ಲ.   ಇಷ್ಟು ವೇಗವಾಗಿ ಕಣ್ಮರೆಯಾಗುತ್ತಿರುವ ರಣಹದ್ದುಗಳು ಪುನಶ್ಚೇತನಗೊಳ್ಳುವುದು ದೊಡ್ಡ ಅನುಮಾನವೇ ಸರಿ. ಒಂದು ಪಕ್ಷ ಡೈಕ್ಲೋಫಿನಾಕ್ ಪಶು ನೋವು ನಿವಾರಕದ ಬಳಕೆ ಸಂಪೂರ್ಣವಾಗಿ ನಿಂತರೂ ಕೂಡ ರಣಹದ್ದುಗಳು ತಮ್ಮ ಮೊದಲಿನ ಸಂಖ್ಯೆ ತಲುಪಲ ಅನೇಕ ನೂರು ವರ್ಷಗಳೇ ಬೇಕಾಗಬಹುದು. ಏಕೆಂದರೆ ಇವುಗಳ ಸಂತಾನೊತ್ಪತ್ತಿ ಕ್ರಿಯೆ ಬಹಳ ನಿಧಾನ. ಗುಂಪುಗಳಲ್ಲಿ ಆಹಾರ ಹುಡುಕುವ , ಒಂದು ಹಕ್ಕಿಗೆ ಆಹಾರ ಕಂಡರೂ ಮಿಕ್ಕ ಹಕ್ಕಿ ಗಳನ್ನು ಕರೆಯುವ ಸ್ವಭಾವ, ಗುಂಪಿನ ಸಂಖ್ಯೆ ಕಡಿಮೆಯಾದಂತೆ ಆಹಾರ ಹುಡುಕುವ ಸಾಮಥ್ರ್ಯ ಕಡಿಮೆಯಾಗುವುದು.ಆಹಾರದ ಕೊರತೆಯುಂಟಾದರೆ ಹಸಿವಿನಿಂದ ಸಾಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಅವುಗಳು ಅಳಿಯುವ ದರ ಹೆಚ್ಚಾಗುತ್ತಲೆ ಹೋಗುತ್ತದೆ. ರಣಹದ್ದುಗಳನ್ನು ಹಿಡಿದು ಸೂಕ್ತ ವಾತಾವರಣದಲ್ಲಿ ಬೆಳೆಸಿ ಅವುಗಳನ್ನು ಉಳಿಸುವ ಪ್ರಯತ್ನ ಮಾಡಬಹುದಾದರೂ ಪುನಃ ಅವುಗಳನ್ನು ಸ್ವತಂತ್ರಗೊಳಿಸಿದಾಗ ಅದೇ ಡೈಕ್ಲೋಫಿನಾಕ್ ಪಶು ನೋವು ನಿವಾರಕಯುಕ್ತ ಮಾಂಸ ತಿಂದು ಸಾಯುತ್ತವೆ.

ಭಾರತದಲ್ಲಿ ಪ್ರಮುಖವಾಗಿ ಆರು ಬಗೆಯ ರಣಹದ್ದುಗಳು ಕಂಡು ಬರುತ್ತವೆ. ಕೆಂಪು ತಲೆಯ ರಣಹದ್ದು (Red-Headed Vulture) ಬೂದು ಬಣ್ಣದ ರಣಹದ್ದು (Cinereous Vulture) AiÀÄÄgÉöAiÀÄ£ï gÀtºÀzÀÄÝ (Euratian Griffon) ಉದ್ದ ಕೊಕ್ಕಿನ ರಣಹದುÝ (Long-Billed Vulture) ಈಜಿಪ್ಷಿಯನ್ ರಣಹದ್ದು (Egyptian Vultureಮತ್ತು ಬಿಳಿ ಬೆನ್ನಿನ ರಣಹದ್ದು (Indian White-Backed Vulture)


ಇವುಗಳಲ್ಲಿ ಬೂದು ಬಣ್ಣದ ರಣಹದ್ದುಗಳು ಮತ್ತು ಉದ್ದ ಕೊಕ್ಕಿನ ರಣಹದ್ದುಗಳು ಹಿಮಾಲಯದ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ.ಮಿಕ್ಕ ರಣಹದ್ದುಗಳು ಭಾರತದೆಲ್ಲೆಡೆ ಕಂಡು ಬಂದರೂ ದಕ್ಷಿಣ ಭಾರತದ ಕಾಡುಗಳಲ್ಲಿ ವಿರಳವಾಗಿವೆ. ಈ ಎಲ್ಲಾ ರಣಹದ್ದುಗಳ ಗಾತ್ರ ನಮ್ಮಲ್ಲಿ ಸಾಮಾನ್ಯವಾಗಿ ಕಂಡು ಬರುವ ಹದ್ದುಗಳಿಗಿಂತ ಕೊಂಚ ದೊಡ್ಡದಿರುತ್ತವೆ ಆದರೆ ಕೆಂಪು ತಲೆಯ ರಣಹದ್ದು ಮತ್ತು ಬಿಳಿ ಬೆನ್ನಿನ ರಣಹದ್ದು ಗಳು ನವಿಲಿನಷ್ಟೆ ಗಾತ್ರವನ್ನು ಹೊಂದಿರುತ್ತವೆ.

ಶತಶತಮಾನಗಳಿಂದಲೂ ಪರಿಸರ ಶುಚಿತ್ವದ ರೂವಾರಿಗಳಾಗಿ ಗುರುತಿಸಿಕೊಂಡಿದ್ದ ಈ ರಣಹದ್ದುಗಳು ಕಾಡು-ಮೇಡು ಎನ್ನದೆ ಸತ್ತ ಪ್ರಾಣಿಗಳ ದೇಹವನ್ನು ಹುಡುಕಿಕೊಂಡು ಹೋಗಿ ಭಕ್ಷಿಸುತ್ತವೆ.ಈ ಮೂಲಕ ಸತ್ತ ಪ್ರಾಣಿಗಳ ದೇಹದಿಂದ ಹರಡಬಹುದಾಗಿದ್ದ ರೋಗ-ರುಜಿನಗಳನ್ನು ತಡೆಗಟ್ಟಿದಂತಾಗುತ್ತದೆ ಮತ್ತು ರಣಹದ್ದುಗಳಿಗೆ ಆಹಾರ ದೊರಕಿ ಅವು ಬದುಕುತ್ತವೆ. ಹೀಗಾಗಿ ಕಾಡಿನ ಮತ್ತು ನಾಡಿನ ಪರಿಸರಗಳ ನೈರ್ಮಲ್ಯ ಕಾಪಾಡಿದಂತಾಗುತ್ತದೆ. ಕಾಡಿನ ಪರಿಸರದ ಶುಚಿತ್ವದಿಂದ, ಕಾಡು ಸದಾ ಕಂಗೊಳಿಸುತ್ತದೆ. ಬೇರೆ ಪ್ರಾಣಿಗಳು ಯಾವುದೇ ರೋಗ-ರುಜಿನಗಳ ತೊಂದರೆ ಇಲ್ಲದೆ ಆರೋಗ್ಯವಾಗಿ ಬದುಕುತ್ತವೆ.

1990 ಕ್ಕಿಂತ ಹಿಂದೆ ಇವುಗಳು  ದೊಡ್ಡ ದೊಡ್ಡ ಹಿಂಡುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ರಸ್ತೆ ಬದಿಗಳಲ್ಲಿ, ರೈಲ್ವೆ ಕಂಬಿಗಳ ಪಕ್ಕ, ಮೈದಾನ ಪ್ರದೇಶಗಳಲ್ಲಿ, ಕಾಡುಗಳಲ್ಲಿ, ಗುಡ್ಡ ಪ್ರದೇಶಗಳಲ್ಲಿ ಕಂಡುಬರುತ್ತಿದ್ದವು.ಆದರೆ ಈಗ ಅವುಗಳನ್ನು ನೋಡುವುದೇ ಅಪರೂಪವಾಗಿದೆ. ಎಲ್ಲಾ ಡೈಕ್ಲೋಫಿನಾಕ್ ಪಶು ನೋವು ನಿವಾರಕದ ಮಹಿಮೆ. ಮನುಷ್ಯನ ಕೆಲವು ವರ್ತನೆಗಳು  ತಾನೊಬ್ಬನೆ ಬದುಕಬೇಕು, ಭೂಮಿಯ ಮೇಲಿನ ಎಲ್ಲಾ ವಸ್ತುಗಳೂ ತನ್ನದೆ ಎನ್ನವ ಆತನ ಅಂತರಾಳದ ಮಾತನ್ನು ಹೊರಹಾಕಿದಂತೆ ಭಾಸವಾಗುತ್ತದೆ. ತನ್ನ ಒಂದೇ ಒಂದು ವಿವೇಚನಾ ರಹಿತ ನಡೆಯಿಂದ ಜೀವವೈವಿಧ್ಯತೆಯಲ್ಲಿನ ಒಂದು ಬಹು ಮುಖ್ಯ ಕೊಂಡಿ ಕಳಚಿ ಬೀಳಬಹುದೆಂಬ ಪ್ರಜ್ಞೆಯ ಕೊರತೆಯೊ, ಇಲ್ಲಾ ಪರಿಸರ ಸ್ನೇಹಿಯಾದ ಒಂದು ಜೀವಿ ತನ್ನಂತೆ ಬದುಕಲಿ ಎಂಬ ಭಾವನೆಯ ಕೊರತೆಯ ಕಾರಣವೊ ಗೊತ್ತಾಗುತ್ತಿಲ್ಲ. ಅಂತು ಒಂದು ಪರಿಸರ ಸ್ನೇಹಿ ಜೊತೆಗಾರನ ಮಾರಣಹೋಮ ನಡೆದೇ ಹೋಯ್ತು.

ರಣಹದ್ದುಗಳು ಬಹಳ ಆಕರ್ಷಕ ಹಕ್ಕಿಗಳು. ಅವುಗಳ ನಡೆ, ಗಾಂಭೀರ್ಯತೆ, ಎತ್ತರದಲ್ಲಿ ಹಾರುತ್ತ ವೃತ್ತಾಕಾರದಲ್ಲಿ ಸುತ್ತುವುದು, ಗಾಳಿಯಲ್ಲಿ ರೆಕ್ಕೆ ಬಡಿಯದೆ ರೆಕ್ಕೆಯನ್ನು ಅಗಲಿಸಿಕೊಂಡು ತೇಲುವ ರೀತಿ ಮನಮೋಹಕ. ಎಷ್ಟೇ ಎತ್ತರದಲ್ಲಿದ್ದರೂ ತನ್ನ ದೂರದರ್ಶಕ ಕಣ್ಣುಗಳಿಂದ ನೆಲವನ್ನು ಇಂಚಿಂಚು ಬಿಡದೆ ಶೋಧಿಸುತ್ತಾ ಆಹಾರ ಹುಡುಕುವ ಪರಿ ಆಶ್ಚರ್ಯವನ್ನುಂಟುಮಾಡುತ್ತದೆ.

ಇವುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಡೈಕ್ಲೋಫಿನಾಕ್‍ನ ಪರ್ಯಾಯ ಔಷಧಿ ಕಂಡುಹಿಡಿಯಬೇಕು ಇಲ್ಲವೆ ಪಶುಗಳಿಗೆ ಗಿಡಮೂಲಿಕೆ ಔಷಧಿ ಮಾತ್ರ ಬಳಸಬೇಕು. ಡೈಕ್ಲೋಫಿನಾಕ್ ಪಶು ನೋವು ನಿವಾರಕ ನೀಡಿರುವ ಪಶು ಮರಣಿಸಿದ ನಂತರ ಅವುಗಳನ್ನು ಕಡ್ಡಾಯವಾಗಿ ನೆಲದಲ್ಲಿ ಹೂತು ಬಿಡಬೇಕು. ಇವಿಷ್ಟೆ ಈಗ ನಮ್ಮಲ್ಲಿರುವ ಮಾರ್ಗೋಪಾಯಗಳು.ಒಟ್ಟಾರೆ ವಿನಾಶಕಾರಿ ಡೈಕ್ಲೋಫಿನಾಕ್ ಪಶು ನೋವು ನಿವಾರಕ ಮುಕ್ತ ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ. ಒಬ್ಬ ಮನುಷ್ಯನ ಔಷಧಿ ಇನ್ನೊಬ್ಬ ಮನುಷ್ಯನ ವಿಷ ಎನ್ನುವಂತಾಗಿದೆ.

ಲಿಂಗರಾಜ್. ಹೆಚ್.ಸಿ 
ಹಾಸನ ಜಿಲ್ಲಾ ವಿಜ್ಞಾನ ಕೇಂದ್ರ, ಅರಸೀಕೆರೆ.

Coir Pith


ತೆಂಗು ನಾರಿನ ಈದಿ (Coir pith) :

ಅದ್ಭುತ “ಜೈವಿಕ ಪದರ”

ಆರೋಗ್ಯಕರ ಭವಿಷ್ಯದೊಂದಿಗೆ,

    ತೋಟಗಾರಿಕೆಯಲ್ಲಿ ಮಣ್ಣಿನ ಆರೋಗ್ಯ ಬಹುಮುಖ್ಯ. ನಾವು ಬಳಸುವ ತೋಟಗಾರಿಕೆ ಉತ್ಪನ್ನಗಳಾದ ಹೂ-ಹಣ್ಣು, ತರಕಾರಿ ಮುಂತಾದ ಆಹಾರದ ಮೇಲೆ ಮಣ್ಣಿನ ಆರೋಗ್ಯ ಬೀರುವ ಪರಿಣಾಮ ಕೂಡ ಅನನ್ಯ. ಆದರೆ ಇಂದು ನಾವು ಎಲ್ಲಾ ನಮೂನೆಯ ರಾಸಯನಿಕ ಪದಾರ್ಥಗಳನ್ನು ಮಣ್ಣಿನಲ್ಲಿ ಬೆರಸಿ ಅದರ ಆರೋಗ್ಯ ಕಾಪಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಕೊಟ್ಯಾಂತರ ಜೀವ ಕಣಗಳನ್ನು ನಾಶಮಾಡುತ್ತಿದ್ದೆವೆ. ಪರಿಣಾಮ ನಮ್ಮ ಬದುಕಿನ ಸತ್ವವಾಗಿರುವ ಮಣ್ಣು ಬಂಜೆಯಾಗುವ ದಿಕ್ಕಿನಲ್ಲಿ ಸಾಗುತ್ತಿದೆ. ಇದನ್ನು ಮನಗೊಂಡ ಹಲವು ರಾಷ್ಠ್ರಗಳು, ಮಣ್ಣನ್ನು ಬಂಜೆಯಾಗಿಸುತ್ತಿರುವ ಎಲ್ಲಾ ಕೃಷಿ ಪದ್ದತಿಗಳನ್ನು ನಿಷೇಧಿಸಿದವು. ಇದರ ಪರಿಣಮ ಪ್ರಥಮವಾಗಿ ಅಂತರಾಷ್ಠಿಯ ಗುಲಾಬಿ ಉದ್ಯಮದ ಮೇಲೆ ಬೀರಿತು. ಆದರೆ ನಿಷೇಧವನ್ನು ಚಲವಾಗಿ ಸ್ವೀಕರಿಸಿದ ಗುಲಾಬಿ ಹೂ ಉದ್ಯಮವು ಮಣ್ಣಿನ ಜೀವೋನ್ಮುಕ ಸಂಶೋಧನೆಗೆ ಒತ್ತು ನೀಡಿದವು. ಆಗ ಮಣ್ಣಿಗೆ ಪರ್ಯಯಾವಾಗಿ, ಮರದ ಹೊಟ್ಟು, ಕಲ್ಕಂಬಳಿ (ರಾಕ್ ವೂಲ್), ಸೀಸ ನಾರು (ಗ್ಲಾಸ್ ವೂಲ್), ತೆಂಗು ನಾರು, ನಾರಿನ ಈದಿ (ಪೀತ್), ಮುಂತಾದ ಎಲ್ಲಾ ರೀತಿಯ ತ್ಯಾಜ್ಯಗಳು ಸಂಶೋಧನೆಗಳಿಗೆÉ ತುತ್ತಾದವು. ಪರಿಣಾಮ ತೋಟಗಾರಿಕೆಯ ಉದ್ಯಮದ ಕಣ್ಮಣಿಯಾಗಿ ಹಾಗು ಮಣ್ಣಿನ ಪರ್ಯಯಾವಾಗಿ ತೆಂಗು ನಾರಿನ ಈದಿಯು (ಕಾಯರ್ ಪೀಟ್) ಹೊರ ಹೊಮ್ಮಿತು.


ಸುಮಾರು ಎಂಬತ್ತರ ದಶಕದಲ್ಲಿ ನೇದರ್ ಲ್ಯಾಂಡ್ ನ ಡಚ್ಚ್ ಪ್ಲಾಂಟೀನ್ ಕಂಪನಿಯು ತನ್ನ ಗುಲಾಬಿ ಹೂ ತೋಟದಲ್ಲಿ ತೆಂಗುನಾರಿನ ಈದಿಯನ್ನು ಜೈವಿಕ ಪದರವಾಗಿ ಯಶ್ಸವಿಯಾಗಿ ಬಳಸಿತು. ಕ್ರಮೇಣ ಇದರ ಬಳಕೆಯು ಸಂಶೋಧನ ಕೇಂದ್ರ ಹಾಗು ಸಣ್ಣ ಪುಟ್ಟ ಹಸಿರು ಅನಿಲ ಮನೆಗಳಿಂದ ಹೊರಬಂದು ಇಂದು, ತೋಟಗಾರಿಕೆ ಕ್ಷೇತ್ರವನ್ನು ಮೀರಿ ಹೊಲದಲ್ಲಿ ಜೈವಿಕ ಪದರವಾಗಿ, ಹಿಂಗು ಗುಂಡಿ ನಿರ್ಮಿಸಲು, ಮಣ್ಣು ಸವಕಳಿ ತಡೆಯಲು, ನೆರೆ ತಡಯಲು, ತೊರೆ ದಂಡೆಗಳಲ್ಲಿ ಹಾಗು ಸಮುದ್ರ ಕೊರತೆ ತಡೆಯಲು, ನೀರಿನ ಕಲ್ಮಷವನ್ನು ಸೊಸಲು ಮುಂತಾದ  ವಿವಿಧ ಕ್ಷೇತ್ರಗಳಲ್ಲಿ ತನ್ನ ಬಳಕೆಯ ಸಾಧ್ಯತೆಗಳನ್ನು ವಿಸ್ತರಿಸಿ ಕೊಂಡಿದೆ. ಸಮಾನ್ಯವಾಗಿ ಇದನ್ನು ಹೂ-ತರಕಾರಿ ಕುಂಡಗಳಿಗೆ ಮಿಶ್ರಣವಾಗಿ, ನರ್ಸರಿಗಳಲ್ಲಿ ಬೀಜ ಮೊಳಕೆ ಬರಿಸಿ ಬೆಳಸಲು, ಗಾಲ್ಫ ಮತ್ತು ಇತರೆ ಆಟದ ಮೈದಾನಗಳಲ್ಲಿ ಹಾಗು ಹುಲ್ಲು ಹಾಸು ಮತ್ತು ಪಾರ್ಕಗಳ ನಿರ್ಮಾಣದಲ್ಲಿ ಇವುಗಳ ಬಳಕೆಯ ಹೆಚ್ಚಾಗಿರುತ್ತದೆ.

ನೇದರ್ ಲ್ಯಾಂಡ್ ನಲ್ಲಿ ಸುಮಾರು 900 ಎಕರೆ ತೊಟಗಾರಿಕೆ ಪ್ರದೇಶದಲ್ಲಿ ತೆಂಗು ನಾರಿನ ಸಂಸ್ಕರಿತ ಈದಿಯು ಬಳಸಲ್ಪಡುತ್ತಿದ್ದು, ಅದರಲ್ಲಿ 300 ಎಕರೆಗಳಲ್ಲಿ ಕೇವಲ ಈದಿಯನ್ನೇ ಬಳಸಿ ಗುಲಾಬಿ ಹೂಗಳನ್ನು ಬೆಳಯಲಾಗುತ್ತಿದೆ. ತೋಟಗಾರಿಕೆಯಲ್ಲಿ ಪರಿಪೂರ್ಣ ಪ್ರಾವೀಣ್ಯತೆ ಪಡೆದಿರುವ ಇಸ್ರೇಲ್, ಈಕ್ವೇಡಾರ್, ಕ್ಯಾಲಿಪೂರ್ನಿಯ ಹಾಗು ಕೀನ್ಯ ರಾಷ್ಠ್ರಗಳಲ್ಲಿ ಕೂಡ ಇದರ ಬಳಕೆಯು ದಿನೆ ದಿನೆ ಜನಪ್ರೀಯಗೊಳ್ಳುತ್ತಿದೆ. ಭಾರತದಲ್ಲಿ ತಂಗು ನಾರಿನ ಈದಿಯನ್ನು ಬಹುತೇಕ ಖಾಸಗಿ ತೋಟಗಾರಿಕೆ ನರ್ಸರಿಗಳಲ್ಲಿ ಯಶ್ಸವಿಯಾಗಿ ಬಳಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅದು ಬೆಂಗಳೂರು ನಂತಹ ಮಹನಗರಗಳಲ್ಲಿ ಒಳಾಂಗಣ ಮತ್ತು ಮಹಡಿ ತೋಟಗಾರಿಕೆಯಲ್ಲಿ ಹೆಚ್ಚು ಜನಪ್ರೀಯಗೊಳ್ಳುತ್ತಿದ್ದು,
 


ಈದಿಯ ಗುಣಲಕ್ಷಣಗಳು :

ಮಣ್ಣು, ರಾಕ್ ವೂಲ್, ಗ್ಲಾಸ್ ವೂಲ್ ಮತ್ತು ಇತರೆ ಪದಾರ್ಥಗಳ ಈದಿಯು (ಪೀತ್) ಬಳಕೆಯಲ್ಲಿ ಅಮೂಲ್ಯವಾದ ನೀರಿನ ನಿರ್ವಹಣೆಯು ಬಹುಮುಖ್ಯ ಸಮಸ್ಯೆಯಾಗಿರುತ್ತದೆ. ಆದರೆ ತೆಂಗು ನಾರಿನ ಈದಿಯುಲ್ಲಿ, ದೀಪದ ಬತ್ತಿಯಂತೆ, ದ್ರವವನ್ನು ತಳದಿಂದ ಮೇಲೆಕ್ಕೆ ಹೀರುವ ವಿಶಿಷ್ಠ ಆಕರ್ಷಣ ಗುಣಹೊಂದಿರುತ್ತದೆ. ಗುರತ್ವಾಕರ್ಷಣೆಯಿಂದ ಕೆಳಗೆ ಬಂದ ನೀರನ್ನು ಪುನ: ಮೇಲಕ್ಕೆ ಹೀರಿ, ಅತಿ ಹೆಚ್ಚು ನೀರನ್ನು ಹಿಡಿದು, ಮೇಲಿನ ಪದರ ಒಣಗದಂತೆ ಅದನ್ನು ಸಮತೇವಾಂಶವದಲ್ಲಿರಿಸಿವ (Capillary) ಸ್ವಭಾವ ಹೊಂದಿರುತ್ತದೆ. ಅಂದರೆ ಗಿಡಗಳಿಗೆ ನೀರು ಉಣಿಸುವ ಕಾರ್ಯ ಸುಲಭವಾಗಿ ನೀರಿನ ಮಿತ ಬಳಕೆಯೂ ಆಗುತ್ತದೆ.  ಹಾಗೆ, ಈದಿಯು

  • ಅತಿ ಹೆಚ್ಚು ಗಾಳಿಯಾಡುವ ರಂಧ್ರಗಳನ್ನು ಹೊಂದಿರುತ್ತದೆ. 
  • ಮಣ್ಣಿನಲ್ಲಿರುವ ಜೀವಕಣಗಳಿಗೆ ಹಾಗು ಗಿಡಗಳಿಗೆ ಬೇಕಾಗಿರುವ ಪೋಷಕಾಂಶಗಳನ್ನು ನೀರಿನಲ್ಲಿ ಕೊಚ್ಚಿ         ಹೋಗದಂತೆ, ಒಣಗದಂತೆ, ಹಾಗು ಬಹುಕಾಲ ಅವುಗಳನ್ನು  ಹಿಡಿದಿಡುವ ಗುಣವನ್ನು ಹೊಂದಿರುತ್ತದೆ. 
  • ಬೇರು ಪಸರಿಸಲು ಹೆಚ್ಚು ಅನುಕೂಲಕರವಾಗಿರುತ್ತದೆ. 
  • ಮಣ್ಣಿಗಿಂತಲು ಹಗುರವಾಗಿದ್ದು, ಮನೆ ಮಹಡಿಯಲ್ಲಿ ಹೂ-ತರಕಾರಿ ಬೆಳೆಸಲು ಅನುಕೂಲಕರವಾಗಿರುತ್ತದೆ. 
  • ಶೇಕಡ 100%ರಷ್ಷು ಜೈವಿಕ ವಸ್ತುವಾರಿದ್ದು ಪುನ: ಬಳಕೆಗೆ ಮಾಡಬಹುದಾಗಿರುತ್ತದೆ. 
  • ಪರಿಸರ ಸ್ನೇಹಿ.


ಈದಿಯ ತಯಾರಿಕೆ :
ಕಚ್ಚಾ ಈದಿಯು ಒಂದು ಜೈವಿಕ ವಸ್ತುವಾಗಿದ್ದು, ತೆಂಗಿನ ಕಾಯಿಯ ಸಿಪ್ಪೆಯನ್ನು ನಾರಿಗಾಗಿ ಸಂಸ್ಕರಿಸುವಾಗ ದೊರೆಯುವ ಒಂದು ರೀತಿಯ ಹೊಟ್ಟಿನ ರೂಪದಲ್ಲಿರುತ್ತದೆ. ಇದು ತನ್ನ ಸ್ವಭಾವಿಕ ಸ್ವರೂಪದಲ್ಲಿ ಬೆಂಕಿಯಲ್ಲಿ ಉರಿಯದೆ, ತನ್ನ ತೂಕ್ಕಕಿಂತ 8 ಪಟ್ಟು ಹೆಚ್ಚು ನೀರು ಹಿಡಿದು, ನಿಧಾನವಾಗಿ ಬಿಡುವ ಗುಣ ಹೊಂದಿರುತದೆ. ಸಮಾನ್ಯವಾಗಿ ಈದಿಯಲ್ಲಿ ಸಣ್ಣ (<2ಸೇ.ಮಿ) ನಾರಿನ ತುಂಡುಗಳು 2%-13% ವರೆಗೆ ಇದ್ದು ಉಳಿದ ಈದಿ ಕಣಗಳು ದೂಳಿನ ಗಾತ್ರದಿಂದ ಹಿಡಿದು ದಪ್ಪ ಕಾಳಿನಗಾತ್ರದವರೆಗು ಇರುತ್ತದೆ.

ಇಂತಹ ಈದಿಗೆ ನೈಟ್ರೋಜನ್ ಮತ್ತು ಪೀತ್ ಪಲ್ಸ್ ಮೀಶ್ರಣ ಒಳಗೊಂಡತೆ ಒಂದು ಮೀಟರ್ ಎತ್ತರ ಹಾಗು 1.5 ಮೀಟರ ಅಗಲದ ಹಲವು ಪದರಗಳು ಉಳ್ಳ ದಪ್ಪ ಹಾಸಿಗೆಯ ರೀತಿ ಬಯಲಿನಲ್ಲಿ ಹಾಸಲಾಗುತ್ತದೆ. (1 ಮೆಟ್ರಿಕ್ ಟನ್ ಈದಿ + 2 ಕೆ.ಜಿ. ಪೀತ್ ಪಲ್ಸ್ + 5 ಕೆ.ಜಿ. ನೈಟ್ರೊಜನ್-> ಜೈವಿಕ ಈದಿ ಪದರ). ನಂತರ ಈದಿಯನ್ನು ಚೆನ್ನಾಗಿ ಮಾಗಿಸಲು ಕಾಲ ಕಾಲಕ್ಕೆ ನೀರು ಚುಮುಕಿಸಿ ಅದರ ತೇವಾಂಶವನ್ನು ಶೇಕಡ 200ರಷ್ಟುಂತೆ ಉಳಿಸಿ ಕೆಲವು ಕಾಲ ಬಿಡಲಾಗುತ್ತದೆ.

F ರೀತಿಯಾಗಿ ಮಾಗಲು ಬಿಟ್ಟ ಈದಿಯಲ್ಲಿ ಅಮ್ಲತೆಯ ತೀವ್ರತೆ ಹಾಗು ವಿದ್ಯುತ್ ಸಂವಾಹನೆಯ ಗುಣಗಳು ಕಡಿಮೆಯಾಗಿ ಚೆನ್ನಾಗಿ ಪಕ್ವವಾಗುತ್ತದೆ. ಚೆನ್ನಾಗಿ ಪಕ್ವಗೊಂಡ ಈದಿಯಲ್ಲಿ ನೈಟ್ರೋಜನ್, ಫಾಸ್ಪರಸ್ ಮತ್ತು ಪೊಟಾಷೀಯಂ ನಂತಹ ಪೋಷಕಾಂಶಗಳಿಂದ ಸಮೃದ್ದಿಯಾಗಿರುತ್ತದೆ. ನಂತರ ಆ ಈದಿಯನ್ನು ಸ್ವಯಂಚಾಲಿತ ದೊಡ್ಡ ಜಾಲರಿಯಂತೆ ಇರುವ ಕೊಳಗದೊಳಗೆ ಹಾಕಲಾಗುವುದು. ಕೊಳಗದೊಳಗಿನ ಬಾಚಣಿಕೆಯಂತಿರುವ ಸರಳುಗಳು ದೊಡ್ಡ ತುಂಡು ನಾರು ಹಾಗು ದಪ್ಪ ಕಲ್ಮಶಗಳನ್ನು  ಬೇರ್ಪಡಿಸಿ, ಉಳಿಕೆ ಈದಿಯನ್ನು ಜಾಲರಿ ಮೂಲಕ ಬೆರ್ಪಡಿಸುತ್ತದೆ.

ಸಂಸ್ಕರಣೆಯಿಂದ ಶುದ್ದಗೊಂಡ ಈದಿಗೆ ಕಳೆ ನಿರ್ಮೂಲನೆ ಮಾಡಿ ಮತ್ತು ಪೋಷಕಾಂಶಗಳನ್ನು ಹೆಚ್ಚು ಮಾಡಲು ಶಿಲಾ ರಂಜಕ ಹಾಗು ಡಾಲಮೈಟ್ ಮೀಶ್ರಣ ಮಾಡಿ ಕೆಲವು ನಿಮಿಷ ನೀರಿನ ಹಬೆಯ ಮೂಲಕ ಬೇಯಿಸಲಾಗತ್ತದೆ. ನಂತರ ನೆರಳಿನಲ್ಲಿರುವ ಕಾಂಕ್ರೀಟ್ ಕಾಣದಲ್ಲಿ ಅದನ್ನು ಒಣಗಿಸಿ ತೇವಾಂಶವನ್ನು ಶೇಕಾಡ 15ಕ್ಕು ಕಡಿಮೆಗೆ ತರಲಾಗುತ್ತದೆ. ಈದಿಯ ಮೌಲ್ಯವರ್ಧನೆ ಮಾಡಲು ನುಣಪು, ಸ್ಥೂಲ ಹಾಗು ಮಧ್ಯಮವೆಂದು ವರ್ಗಿಕರಿಸಿಲಾಗುವುದು. ಹಾಗು ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಇವುಗಳನ್ನು ಬೈಂಡಿಂಗ್ ಎಜೆಂಟ್‍ಗಳನ್ನು ಬಳಸಿ ಯಂತ್ರಗಳ ಮೂಲಕ ವಿವಿಧ ತೂಕ-ಆಕಾರದ ದಿಂಡು, ಬಿಲ್ಲೆ ಹಾಗು ಇಟ್ಟಿಗೆಗಳ ರೂಪಕ್ಕೆ ತಂದು ಕಂಪ್ರೆಸ್ ಮಾಡಲಾಗುತ್ತದೆ. ತದನಂತರ ವಾತವರಣದ ಏರಪೇರುಗಳಿಗೆ ಚುರಾಗದಂತೆ ಈದಿಯ ಬಿಲ್ಲೆಗಳನ್ನು ಮಾಯಿಸ್ಚರ್ ಪ್ರೂಫ್ ಬಟ್ಟೆಗಳಿಂದ ಪ್ಯಾಕಮಾಡಿ ಮಾರುಕಟ್ಟೆಗೆ ಪೂರೈಸಲಾಗುತ್ತದೆ. ಕರ್ನಾಟಕದ ಸಂದರ್ಭದಲ್ಲಿ ಸಂಸ್ಕರಣಗೊಂಡ ಈದಿ ಪುಡಿಯನ್ನು 25 ಕೆ.ಜಿ. ತುಕದಂತೆ ಚೀಲದಲ್ಲಿ ಪ್ಯಾಕಮಾಡಿ ನೇರವಾಗಿ ಗುಲಾಬಿ ತೋಟ ಮತ್ತು ನರ್ಸರಿಗಳಿಗೆ ಪೂರೈಕೆಗೊಳ್ಳುತ್ತದೆ.

ಸಾವಯವ ಈದಿ :

ಈದಿ ಸಂಸ್ಕರಣೆಯಲ್ಲಿ ನೈಟ್ರೊಜನ್ ಬಳಕೆಯು ಹೆಚ್ಚಿನ ಪ್ರಮಾಣದ ಅಮೋನಿಯವನ್ನು ಬಿಡುಗಡೆ ಮಾಡುವುದರಿಂದ ಮಣ್ಣಿನ ಕ್ಷರತೆ ಹೆಚ್ಚಾಗಿ ನೈಸರ್ಗಿಕ ಫಲವತ್ತತೆಯನ್ನು ಕುಗ್ಗಿಸುತ್ತದೆ. ಇದನ್ನು ಮನಗೊಂಡ ತೆಂಗು ನಾರು ಅಭಿವೃದಿ ಸಂಸ್ಥೆಯು ರಾಸಾಯನಿಕ ನೈಟ್ರೊಜನ ಪರ್ಯಾಯವಾಗಿ ಜೈವಿಕ ನೈಟ್ರೊಜನ್‍ಗಾಗಿ ಅಜೋಲ ಮತ್ತು ಸೋಯ ತೊಗಟೆಯನ್ನು ಬಳಸುವ ತಂತ್ರಜ್ಞಾನ ಅಭಿವೃದ್ದಿ ಪಡಿಸಿರುತ್ತದೆ. ಈ ತಂತ್ರಜ್ಞಾನದಿಂದ ಸಂಸ್ಕರಿಸಿದ ಈದಿಯು ರಪ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದಿರುತ್ತದೆ.

ಈದಿಯ ಗುಣಮಟ :

ಅಂತರಾಷ್ಠ್ರಿಯ ಮಾರುಕಟ್ಟಯಲ್ಲಿ ಹೆಚ್ಚುತ್ತಿರುವ ಈದಿಯ ಬೇಡಿಕೆನ್ನು ಯಶ್ಸವಿಯಾಗಿ ಪಡೆಯಲು ಉತ್ಪಾದಕರ ಈದಿಯ ಗುಣಮಟ್ಟ ಕಾಪಡುವುದು ಬಹುಮುಖ್ಯವಾಗಿರುತ್ತದೆ. ಕಾರಣ ಈದಿಯಲ್ಲಿ ಗಾಳಿಯಾಡುವ ಗುಣವು ಬೀಜ-ಗಿಡದ ಉತ್ತಮ ಬೆಳವಣಿಗೆಗೆ ಬಹು ಪ್ರಮುಖವಾಗಿರುತ್ತದೆ. ಈದಿಯಲ್ಲಿ ಗಾಳಿಯಾಡುವಿಕೆಯ ಗುಣದ ಕಾರಣಗಳು ಅದರಲ್ಲಿನ ರಂದ್ರಗಳ ಮಟ್ಟ ಅಥವ ಈದಿಯ ಮಾಗುವಿಕೆಯಿಂದಾಗಿರುತ್ತದೆ. ಈದಿಯು ಹೆಚ್ಚು ಮಾಗಿದಷ್ಟು ಹೆಚ್ಚು ನುಣುಪಾಗುತ್ತದೆ. ನುಣುಪಾಗಿರುವ ಈದಿಯು ಕಡಿಮೆ ಗಾಳಿಯಾಡುವ ಗುಣದಿಂದ ಹೆಚ್ಚು ನೀರನ್ನು ಹಿಡಿದಿಡುತ್ತದೆ. ತೊಟಗಾರಿಕೆಯ ಸಸ್ಯ ಪ್ರಭೇದಗಳಲ್ಲಿ ಕೆಲವುಗಳಲ್ಲಿ ಹೆಚ್ಚು ನೀರು ಕೇಳುವ ಪ್ರಭೇದಗಳಿದ್ದು ಇತರೆ ಪ್ರಭೇದಗಳು ಹೆಚ್ಚು ಗಾಳಿಯಾಡುವ ನೆಲದ ವಾತವರಣ ಕೇಳುತ್ತದೆ. ಉದಾಹರಣೆಗೆ ಗುಲಾಬಿ ಗಿಡಗಳು ಹೆಚ್ಚು ಗಾಳಿಯಾಡುವ ಮಾಧ್ಯಮದಲ್ಲಿ ಬೆಳಸಲಾಗುತ್ತದೆ. ಅಂದರೆ, ಗುಲಾಬಿ ಗಿಡಗಳಿಗೆ ಹೆಚ್ಚು ನೀರು ಹಿಡಿದಿಡುವ ಈದಿಗಿಂತಲು ಹೆಚ್ಚು ಗಾಳಿಯಾಡುವ ಈದಿಯನ್ನು ಬಳಸಬೇಕಾಗಿರುತ್ತದೆ. ಆದುದರಿಂದ ಮಾರುಕಟ್ಟೆಯಲ್ಲಿ ಈದಿಯ ಬಳಕೆದಾರರ ಬೇಡಿಕಯ ಅನುಗುಣವಾಗಿ ಈದಿಯನ್ನು ಉತ್ಪಾದಿಸಬೇಕಾಗಿದ್ದು, ಗುಣಮಟ್ಟದ ವಿಷಯದಲ್ಲಿ ಉತ್ಪಾದಕರು ಹೆಚ್ಚು ಜಾಗರುಕರಾಗಿರ ಬೇಕಾಗುತ್ತದೆ.

ಭಾರತದಲ್ಲಿ ಈದಿಯ ಪ್ರಸ್ತುತ ಸ್ಥಿತಿ :

ಜಾಗತಿಕ ಮಾರುಕಟ್ಟೆಗೆ ಸಂಸ್ಕರಿತ ಈದಿ ಪೂರೈಕೆಯಲ್ಲಿ ಮೂದಲು ಸ್ಥಾನದಲ್ಲಿದ್ದ ಶ್ರೀಲಂಕದ ಸ್ಥಾನವನ್ನು ಭಾರತ ಮತ್ತು ಫಿಲೀಫೈನ್ಸ ಪಡೆದುಕೊಂಡಿದ್ದರೆ, ನಂತರದಲ್ಲಿ ಐವರೀ ಕೋಸ್ಟ್, ಇಂಡೊನೇಷೀಯ ಮತ್ತು ಮಲೇಷಿಯ ದೇಶಗಳಿವೆ. 1997-98 ರಲ್ಲಿ 87 ಲಕ್ಷ ರುಪಾಯಿ ಮೌಲ್ಯದ 755 ಟನ್ ಈದಿಯು ಭಾರತದಿಂದ ರಪ್ತುಗೊಂಡಿದ್ದು 2009-10 ರಲ್ಲಿ ಅದು 1,31,916.67 ಟನ್ ಗೆ ಹೆಚ್ಚಿದ್ದು 123.47 ಕೋಟಿ ರೂಪಾಯಿಯಾಗಿರುತ್ತದೆ.


ಭಾರತದದಿಂದ ರಪ್ತುಗೊಂಡ ಸಂಸ್ಕರಿತ ಈದಿಯ ಪ್ರಮಾಣ ಮತ್ತು ಮೌಲ್ಯ:


ಉತ್ಪನ್ನ
2007-08
2008-09
2009-10
ಪ್ರಮಾಣ (ಟನ್)

ಮೌಲ್ಯ
(ರೂ-ಲಕ್ಷ)
ಪ್ರಮಾಣ (ಟನ್)

ಮೌಲ್ಯ
(ರೂ-ಲಕ್ಷ)
ಪ್ರಮಾಣ (ಟನ್)

ಮೌಲ್ಯ
(ರೂ-ಲಕ್ಷ)
ಸಂಸ್ಕರಿತ ಈದಿ
83613.24
6384.77
96996.32
6462.30
131916.67
12347.06


ಇತ್ತೀಚೆಗೆ ತಮಿಳು ಯುದ್ದದ ನಂತರ ಶ್ರೀಲಂಕದಲ್ಲಿ ಬಹುರಾಷ್ಠ್ರಿಯ ಕಂಪನಿಗಳು ತಮ್ಮನ್ನು ಈದಿ ಮತ್ತು ಇತರೆ ತೆಂಗು ಉದ್ಯಮದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳುತ್ತಿರುವ ಕಾರಣ, ಅಂತರರಾಷ್ಠ್ರಿಯ ಮಟ್ಟದಲ್ಲಿ ಶ್ರೀಲಂಕವು ತೀವ್ರ ಪೈಪೋಟಿಯಾಗಿ ಹೊರಹೊಮ್ಮುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಈದಿ ಉತ್ಪನಗಳು ಹಾಗು ಅವುಗಳ ಉತ್ಪಾದಕರು ಹೆಚ್ಚಾಗುತ್ತಿರುವುದು ತೆಂಗು ಬೆಳಗಾರರಿಗೆ ಹೊಸ ಬರವಸೆಗಳು ಮೂಡಿಸುತ್ತಿವೆ. ಆದರೆ ಶ್ರೀಲಂಕದÀ ಮೌಲ್ಯವರ್ಧನೆಗೊಂಡ ಉತ್ತಮ ಗುಣಮಟ್ಟದ ಈದಿಯ ಉತ್ಪನ್ನಗಳು ಭಾರತದ ತೋಟಗಾರಿಕೆಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಭಾರತದ ಉತ್ಪನ್ನಗಳಿಗೆ ತೀವ ಪೈಪೋಟಿ ನೀಡುತ್ತಿರುವುದ ಪ್ರಸ್ತುತ ಕಾಲದ ಚಾಲೆಂಜಾಗಿದೆ.

ಭಾರತದಲ್ಲಿ ಪ್ರತಿ ವರ್ಷ 7.5 ಮೀಲಿಯನ್ ಟನ್ ಕಚ್ಚಾ ಈದಿ ಉತ್ಪಾದನೆಯಾಗಿ ಶೇಕಡ 50% ರಷ್ಟು ಉಪಯೋಗಿಸದೆ ನಷ್ಟು ಹೊಂದುತ್ತಿರುತ್ತದೆ. ತೆಂಗು ಅಭಿವೃದ್ದಿ ಮಂಡಳಿಯ ಅಂದಾಜಿನ ಪ್ರಕಾರ ಉತ್ಪದಾನೆಯಾದ ಎಲ್ಲಾ ಈದಿಯನ್ನು ಕಾಂಪೋಸ್ಟ ತಯಾರಿಕೆ ಬಳಸಿದರೆ ಸುಮಾರು 3.5 ಲಕ್ಷ ಜನರಿಗೆ ಉದ್ಯೋಗ ಸೃಷ್ಠಿಸಬಹುದಾಗಿರುತ್ತದೆ. ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿರುವ ಎಲ್ಲಾ ತೆಂಗು ಈದಿಯು ಸಂಸ್ಕರಣೆಗೊಳ್ಳುತ್ತಿದ್ದರೂ, ಈ ಉದ್ಯಮದಲ್ಲಿ ಕೆಳಕಂಡ ಬಹಳಷ್ಟು ನ್ಯೂನತೆಗಳು ಸಮಸ್ಯೆಯಾಗಿರುತ್ತದೆ.
  • ಬಂಡವಾಳ ಹೊಡಿಕೆದಾರರಿಗೆ ಸೂಕ್ತ ತಂತ್ರ ಜ್ಞಾನದ ಕೊರತೆ. 
  • ಗುಣಮಟ್ಟದ ಅಗತ್ಯತೆಯ ಬಗೆ ಪರಿಕಲ್ಪನೆಯಿಲ್ಲದಿರುವುದು. 
  • ಸರ್ಕಾರದ ನೀತಿಗಳ ಮೇಲೆ ಉದ್ಯಮವು ಪರಿಣಾಮ ಬಿರದಿರುವುದು. 
  • ದೇಶಿ ಮಾರುಕಟ್ಟೆ, ಉತ್ಪನ್ನಗಳ ಅಂತಿಮ ಬಳಕೆದಾರರು, ಹಾಗು ಅವರ ಮೇಲೆ ಅವುಗಳು ಬೀರುವ ಸಾಧ್ಯತೆಗಳ ಬಗೆ ಅಲ್ಪ ಜ್ಞಾನ. 
  • ದುಬಾರಿ ಹಾಗು ಅವಲಂಬಿಸಲಾಗದ ವಿದ್ಯುತ್ ಪೂರೈಕೆ.


ತೆಂಗು ನಾರಿನ ಈದಿ ಉದ್ಯಮದಲ್ಲಿ ಅವಕಾಶಗಳು :
ಜಾಗತಿಕ ಮಟ್ಟದಲ್ಲಿ ಪರಿಸರಾತ್ಮಕ ಸಮಸ್ಯೆಗಳಿಗೆ ಪರಿಹಾರವಾಗಿ ತೆಂಗು ಈದಿಯ ಉಪಯೋಗವು ಗಮನಾರ್ಹವಾಗಿ ಹೆಚ್ಚುತ್ತಿದೆ. ಇದರಿಂದ ಈದಿ ಉದ್ಯಮದಲ್ಲಿ ಈದಿ ಉತ್ಪನ್ನಗಳಿಗೆ ಬೇಡಿಕೆ ಏರುವ ನಿರೀಕ್ಷೆಗಳು ಕೂಡ ಹೆಚ್ಚಾಗುತ್ತಿದ್ದೆ. ಹಾಗೆಯೇ, ತೆಂಗು ಈದಿ ಉದ್ಯಮವನ್ನು ಪ್ರೋತ್ಸಹಿಸಿ ಬಲಪಡಿಸುವ ತಂತ್ರಜ್ಞಾನ ಮತ್ತು ಅದರ ಬಳಕೆಗೆ ಪ್ರೊತ್ಸಹವನ್ನು ನೀಡುವ ಅಗತ್ಯತೆ ಇಂದು ಈದಿ ಉದ್ಯಮದಲ್ಲಿ ತೀವ್ರವಾಗಿ ಕಾಡುತ್ತಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪೀಟ್ ಮಾಸ್ ಉತ್ಪನ್ನದ ತೀವ್ರ ಪೈಪೋಟಿಯಿಂದಾಗಿ ಯುರೋಪ ರಾಷ್ಠ್ರಗಳ ಮಾರುಕಟ್ಟೆಯಲ್ಲಿ ತೆಂಗು ಈದಿಯು ತೀವ್ರ ಹಿನ್ನಡೆ ಅನುಭವಿಸಿದೆ. ಇದಕ್ಕೆ ಮುಖ್ಯ ಕಾರಣ, ತೆಂಗು ಈದಿಯ ಗುಣಮಟ್ಟವು ತಂತ್ರಜ್ಞಾನದ ಕೊರತೆಯಿಂದಾಗಿ ಏರುಪೇರಾಗಿರುವದು ಹಾಗು ರಷ್ಯ ಮತ್ತು ಕೆನಡ ದೇಶಗಳ ಕಡಿಮೆ ವೆಚ್ಚದ ಪೀಟ್ ಮಾಸ್ ಪೈಪೋಟಿ ನೀಡುತ್ತಿರುವುದಾಗಿದೆ.
ತೆಂಗು ಈದಿಯು ವಿಶ್ವಮಾರುಕಟ್ಟೆಯಲ್ಲಿ ಸ್ಪರ್ಥಾತ್ಮಕ ಮತ್ತ್ತು ಲಾಭದಾಯಕವಾಗಬೇಕೆಂದರೆ ಅದು ಯೂರೋಪ ರಾಷ್ಠ್ರಗಳಲ್ಲಿ ಬಳಸುವ ಪೀಟ್ ಮಾಸ್‍ಗಿಂತಲು ತನ್ನ ಗುಣಮಟ್ಟ ಕಾಯ್ದುಕೊಳ್ಳುವಿಕೆ, ತಾಂತ್ರಿಕತೆ ಹಾಗು ಅದರ ನಿರ್ವಹಿಸುವಿಕೆಯ ಪ್ರಯೋಜನಗಳನ್ನ ಹೆಚ್ಚಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಅಂದರೆ ತೋಟಗಾರಿಕೆ ಉದ್ಯಮಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಪರಿಪೂರ್ಣ ಪೋಷಾಕಂಶಗಳನ್ನು ಒಳಗೊಂಡ ಜೈವಿಕ ಪದರವಾಗಿ, ಮಣ್ಣು-ಸಂರಕ್ಷಣೆಯ  ಭೂ-ಹೊದಿಕೆಯಾಗಿ ಮತ್ತು ಮಣ್ಣು-ಜೈವಿಕ ತಂತ್ರಜ್ಞಾನಕ್ಕೆ ಅನ್ವಯಿಸವ ರೀತಿಯಲ್ಲಿ ತೆಂಗು ನಾರಿನ ಈದಿಯು ಅಭಿವೃದ್ದಿಪಡಿಸ ಬೇಕಾಗಿದೆ. ಅದಲ್ಲದೆ ತೆಂಗು ಈದಿಯ ಮರುಬಳಕೆಯ ಗುಣವನ್ನು ಕೂಡ ಪೀಟ್ ಮಾಸ್ ಗೆ ಪೈಪೋಟಿ ನೀಡಲು ಬಳಸಿಕೊಳ್ಳಬಹುಹಾಗಿದೆ. ರಪ್ತುಗೆ ಸೂಕ್ತವಲ್ಲದ ಈದಿ ಉತ್ಪನಗಳನ್ನು ಸ್ತಾನಿಕವಾಗಿ ಸಾರ್ವಜನಿಕ ಉದ್ಯನವಾನಗಳ ಅಭಿವೃದ್ದಿಗಾಗಿ ಮತ್ತು ಸ್ಥಳೀಯ ಮಾರುಕಟ್ಟೆಗಳಲ್ಲಿ ಬಳಸಲು ಪ್ರೋತ್ಸಹಿಸುವುದುರಿಂದ ಹಾಗು ಭಾರತದ ಕೃಷಿ, ವಾಣೀಜ್ಯ ತೋಟಗಾರಿಕೆ, ಕ್ಷೇತ್ರದಲ್ಲಿ ತೆಂಗು ನಾರಿನ ಈದಿಗೆ ಇರುವ ಉತ್ತಮ ಮಾರುಕಟ್ಟೆಯನ್ನು ಸಮರ್ಥವಾಗಿ ಬಳಸಿಕೊಳ್ಳುವುದರಿಂದ ಗ್ರಾಮೀಣ ಭಾಗದಲ್ಲಿ ಉತ್ತಮ ಉದ್ಯೋಗ ಅವಕಾಶಕಗಳನ್ನು ಕೂಡ ಸೃಷ್ಠಿಸಬಹುದಾಗಿರುತ್ತದೆ

ತೆಂಗು ತಂತ್ರಜ್ಞಾನ ಪಾರ್ಕ :

ಕರ್ನಾಟಕದ ತೆಂಗು ಉದ್ಯಮದ ರಾಜಧಾನಿಯಾಗಿರುವ ತಿಪಟೂರು ತಾಲ್ಲೂಕಿನಲ್ಲಿ ತೆಂಗು ತಂತ್ರಜ್ಞಾನ ಪಾರ್ಕ(Coconut Technology Parkಸ್ಥಾಪನೆಗೆ ಇಲ್ಲಿನ ಶಾಸಕ ಬಿ.ಸಿ. ನಾಗೇಶರವರು ಮುಂದಾಗಿರುವುದ ಬಯಲು ಸೀಮೆಯ ತೆಂಗು ಬೆಳೆಗಾರರಿಗೆ ಮತ್ತು ತೆಂಗು ಉದ್ಯಮದಲ್ಲಿನ ಹೊಡಿಕೆದಾರರಿಗೆ ಭಾರಿ ಪ್ರಮಾಣದ ಆಕಾಂಕ್ಷೆಗಳನ್ನು ಹುಟ್ಟುಹಾಕಿರುತ್ತದೆ. ಕರ್ನಾಟಕದ ತೆಂಗು ಉದ್ಯಮವು ಅದರಲ್ಲಿಯು ತಿಪಟೂರು ಸೀಮೆಯ ಬೆಳೆಗಾರರನ್ನು ಮತ್ತು ಬಂಡವಾಳ ಹೊಡಿಕೆಹಾರರನ್ನು ವಿಶ್ವ ತೆಂಗು ಉತ್ಪನ್ನಗಳ ಮಾರುಕಟ್ಟೆಯ ಮುಂಚಣಿಗೆ ಹೊಯ್ಯುವ ಎಲ್ಲಾ ಸಾಧ್ಯತೆಗಳು ಇಲ್ಲಿ ಸ್ಥಾಪನೆಯಾಗುವ ತಂತ್ರಜ್ಞಾನ ಪಾರ್ಕನಿಂದ ಹೆಚ್ಚಾಗಿರುತ್ತದೆ.

ತಂತ್ರಜ್ಞಾನ ಪಾರ್ಕನಲ್ಲಿ ತೆಂಗು ಮತ್ತು ಅದರ ಇತರೆ ಉತ್ಪನ್ನಗಳ ಅಂತರಾಷ್ಠ್ರಿಯ ಗುಣಮಟ್ಟದ ಸಾಮಥ್ರ್ಯ ಪರೀಕ್ಷೆಯಂತಹ ಅಭಿವೃದ್ದಿ ಕಾರ್ಯಗಳನ್ನು ಮುಖ್ಯವಾಗಿ ಕೈಗೊಳ್ಳಲಾಗುತ್ತದೆ. ತೆಂಗು ಉತ್ಪನ್ನಗಳ ಬಳಕೆಯ ಬಗೆಗಿನ ಸಂಶೋಧನೆಗಳನ್ನು ಆದ್ಯತೆ ಮೇಲೆ ಪ್ರಯೋಗಾಲಯ ಮತು ಪ್ರಯೋಗಾಲಯದಿಂದಾಚೆ (In-situ and ex-situಬಳಕೆದಾರರಿಗೆ ಹತ್ತಿರವಾಗುವಂತೆ ಕೈಗೊಳ್ಳುವುದ ತಂತ್ರಜ್ಞಾನ ಪಾರ್ಕಿನ ವಿಶೇಷವಾಗಿರುತ್ತದೆ.

ಇದಕ್ಕೆ ಪೂರಕವಾಗಿರುವಂತೆ ಕೇಂದ್ರ ತೆಂಗು ನಾರು ಮಂಡಳಿಯು ಈಗಾಗಲೆ ಈದಿ ಉದ್ಯಮದಲ್ಲಿ ಬಂಡವಾಳ ಹೊಡಿಕೆ ಪ್ರೋತ್ಸಹಿಸಲು ಹೊಡಿಕೆದಾರರಿಗೆ ತಂತ್ರಜ್ಞಾನ ಪಡೆಯಲು ಎರಡು ಲಕ್ಷ ರೂಪಾಯಿಗಳ ಅನುದಾನವನ್ನು ನೀಡುತ್ತಿರುತ್ತದೆ. ಆದರೆ ಈದಿ ಉದ್ಯಮಕ್ಕೆ ಅಗತ್ಯವಿರುವದು ಉತ್ಪನಗಳ ತಯಾರಿಕೆಯ ನವೀನ ಮತ್ತು ಸರಳ ತಂತ್ರಜ್ಞಾನದ ಜೊತೆಜೊತೆಗೆ ಈದಿಯ :

1.    ªÀiÁgÀÄPÀmÉÖ C©üªÀÈ¢Ý (Market Development)
·       ಗುಣಮಟ್ಟದ ಉತ್ಪನ್ನಗಳ ತಯಾರಿಕೆ/ಸಂಶೋಧನೆಗೆ ಪ್ರೋತ್ಸಹ.
·  ಗ್ರಾಹಕ/ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಉತ್ಪನ್ನಗಳ ತಯಾರಿಕೆಗೆ ತಂತ್ರಜ್ಞಾನದ ಅಭಿವೃದ್ದಿ ಮೂಲಕ ದೇಶಿ ಮಾರುಕಟ್ಟೆಯ ವ್ಯಾಪಕತೆಯನ್ನು ಹೆಚ್ಚಿಸುವುದ.
2.   ಮಾರುಕಟ್ಟೆಯ ಮಾಹಿತಿ ಜ್ಞಾನ(Market Inteligence)
·        ರಪ್ತು ಹಾಗು ದೇಸಿ ಮಾರುಕಟ್ಟೆಯಲ್ಲಿನ ಉತ್ಪನ್ನಗಳ ತಂತ್ರಜ್ಞಾನ ಅಭಿವೃದ್ದಿ ಮತ್ತು ಬದಲಾಗುತ್ತಿರುವ ಪರಿಸ್ಥಿತಿಗಳು ಬಗೆ ಮಾಹಿತಿ ನೀಡುವ ಹಾಗು
·   ರಪ್ತು ಮತ್ತು ದೇಸಿ ಮಾರುಕಟ್ಟೆಗಳಲ್ಲಿ ಉತ್ಪನ್ನಗಳಿಗೆ ಇರುವ ಬೇಡಿಕೆ ಮತ್ತು  ಮಾಹಿತಿ ಸಂಗ್ರಹಿಸುವ ಕೇಂದ್ರದ ಸ್ಥಾಪನೆ.
3.    ಮತ್ತು ಈದಿ ಉತ್ಪನ್ನಗಳ ಬಳಕೆಗೆ ಪ್ರೋತ್ಸಹ (Market Promotionಕಾರ್ಯಕ್ರಮಗಳು.
·        ಸಾರ್ವಜನಿಕ ಉದ್ಯಾನಗಳು ಮತ್ತು ಸಾಮಾಜಿಕ ಅರಣ್ಯಗಳ ಗುಣಮಟ್ಟದ ಅಭಿವೃದಿಗಾಗಿ ಈ ಉತ್ಪನಗಳನ್ನು ಬಳಸಲು ಪ್ರೋತ್ಸಹಿಸುವುದು.

 ಮನೋಹರ ಪಟೇಲ ಆರ್.