ಚಿತ್ರದುರ್ಗ ಜಿಲ್ಲೆ :
ಪರಿಸರ ಮತ್ತು ಮನಕುಲದ ಅಭಿವೃದ್ಧಿಯ ಓಟ ಮರಣೋನ್ಮುಖ ಪಥದಲ್ಲಿ
ಕಳೆದ ಸೆಪ್ಟಂಬರ್ 2011 ರಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲುಕೂ ಬಂಗಾರ ದೇವರಹಟ್ಟಿ ಗ್ರಾಮದಲ್ಲಿ ದೇವರಿಗೆ ಬಿಟ್ಟ ಸುಮಾರು ಹತ್ತು ರಾಸುಗಳು ಸಮೀಪದ ಅಮೃತ್‍ಮಹಲ್ ಕಾವಲಿನ ಬಳಿ ಮೇವು ದೊರೆಯದೆ ಮೃತಪಟ್ಟವು. ಇದು ದೇವರಿಗೆ ಬಿಟ್ಟಿರುವ ರಾಸುಗಳ ಕಥೆಯಾಗಿರದೆ ಸಮೀಪದ ಕುದಾಪುರ-ದೊಡ್ಡಉಳ್ಳಾರ್ತಿ ಭಾಗದ ಅಮೃತ್‍ಮಹಲ್ ಕಾವಲಿನ ಮೇಲೆ ಅವಲಂಬಿತವಾಗಿರುವ ವಿನಾಶದ ಅಂಚಿನಲ್ಲಿರುವ ಕೃಷ್ಣಮೃಗ, ತೋಳ, ನರಿ, ಮುಳ್ಳುಹಂದಿ, ವೈವಿಧ್ಯಮಯ ಪಕ್ಷಿ-ಚಿಟ್ಟೆ ಸಂಕುಲಗಳು ಹಾಗು ಈ ಜಾಗವನ್ನು ಬಳಸುತ್ತಿರುವ ಸುತ್ತ ಮುತ್ತಲಿನ ಸುಮಾರು 50 ಗ್ರಾಮಗಳ ಜನ-ಜಾನುವಾರುಗಳ ದುರಂತ ಕಥೆಯಾಗಿದೆ.
ಫೋಟೊ : 1 ಕುದಾಪುರ ಕುರಿ ತಳಿ ಸಂವರ್ಧನಾ ಕೇಂದ್ರ
ಇಂದು ಹಿಂದುಳಿದ ಬಡ ರೈತರು, ಪಶುಪಾಲನೆಗಾರರು, ಅಲೆಮಾರಿ ಕುರಿಪಾಲನೆ ಮಾಡುವವರ, ನೇಕಾರರ ಬಗ್ಗೆ ಕಾಳಜಿಯಿರದ ಪರಿಸರ ಸಂವೇದನೆ ರಹಿತ ಜನಪ್ರತಿನಿಧಿಗಳು ಮತ್ತು ಹವಾನಿಯಂತ್ರಿತ ಕೋಣೆಯಲ್ಲಿ ಬರ-ನೆರೆಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಉನ್ನತ ಅಧಿಕಾರಿಗಳ ದೆಸೆಯಿಂದ, ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಡುವ ರಾಕ್ಷಸಿ ಯೋಜನೆಗಳು ಈ ಭಾಗದ ಬುಡಕಟ್ಟು ಸಮುದಾಯಗಳ ಜನರನ್ನು, ಕುರಿ ಸಂವರ್ಧನಾ ಕೇಂದ್ರವನ್ನು ಹಾಗು ಅಲ್ಲಿನ ಮೂಲ ಆವಾಸಿಗಳಾಗಿದ್ದ ವನ್ಯಜೀವಿಗಳನ್ನು ಒಟ್ಟಾಗಿ ವಕ್ಕಲೆಬ್ಬಿಸಿರುತ್ತದೆ.
ಸುಮಾರು 500 ವರ್ಷಗಳ ಇತಿಹಾಸವಿರುವ ಅಂದಾಜು 12 ಸಾವಿರ ಎಕರೆಯ ಕುದಾಪುರ-ದೊಡ್ಡಉಳ್ಳಾರ್ತಿ-ವರವು ಅಮೃತ್‍ಮಹಲ್ ಹುಲ್ಲುಗಾವಲಿನ ಈ ಜೀವವೈವಿಧ್ಯಮಯ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ನಾಲ್ಕನೆ ಯೋಜನೆಯಡಿಯಲ್ಲಿನ ಅನುದಾನದಲಿ,್ಲ ರಾಜ್ಯ ಸರ್ಕಾರವು ದೇಶಿ ಹಾಗು ಮಿಶ್ರತಳಿ ಕುರಿ ಸಂವರ್ಧನಾ ಕೇಂದ್ರವನ್ನು ನೆಡೆಸುತ್ತಿತ್ತು. ಹಾಗೆ ಕಳೆದ 500 ವರ್ಷಗಳಿಂದಲೂ ಪಶುಪಾಲನೆ ಮತ್ತು ದೇಶಿ ತಳಿ ಅಭಿವೃದ್ದಿ ಮಾಡಿಕೊಂಡು ಹಲಾವಾರು ಬುಡಕಟ್ಟು ಸಮುದಾಯಗಳು ತಮ್ಮ ಬದುಕನ್ನು ಹಾಗು ಕನಸನ್ನು ಸಾಂಸ್ಕøತಿಕವಾಗಿ ಇದೇ ಹುಲ್ಲುಗಾವಲನ್ನು ಮತ್ತು ಇಲ್ಲಿರುವ ಅಜ್ಜಯ್ಯ ದೇವರಗುಡಿಯನ್ನು ಅವಲಂಬಿಸಿದ್ದವು.
ಈಗ ಇಲ್ಲಿಂದ ವಕ್ಕಲೆದ್ದ ಬಹುತೇಕ ವನ್ಯಜೀವಿಗಳು ಮಾನವನೊಂದಿಗೆ ಸಂಘರ್ಷಕ್ಕೆ ಒಳಪಟ್ಟಿದ್ದು, ರೈತರು ಮತ್ತು ಅಲೆಮಾರಿ ಸಮುದಾಯಗಳು ತಮ್ಮ ಜಾನುವರುಗಳೊಂದಿಗೆ ಪಶ್ಚಿಮಘಟ್ಟದ ತಪ್ಪಲಿನ ಅರಮಲೆನಾಡು ಪ್ರದೇಶಗಳಾದ ಹೊಳಲ್ಕೆರೆ, ಹೊಸದುರ್ಗ, ಕಡೂರು, ತರೀಕೆರೆ ಕಡೆ ಸಾಗಿ ಹೊರಟಿದ್ದಾರೆ.
ಆರ್ಥಿಕ, ಸಾಂಸ್ಕøತಿಕ ಹಾಗು ಪರಿಸರ ದಿವಾಳಿಯತ್ತ :
ಚಿತ್ತದುರ್ಗ ಜಿಲ್ಲೆಯು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದರುತ್ತದೆ. ಇಂತಹ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರ ಜನಸಂಖ್ಯೆ ಜಾಸ್ತಿ ಇದ್ದು, ಇವರುಗಳು ಬಹುತೇಕ, ಕಂಬಳಿ, ಚರ್ಮ ಮತ್ತು ಕುರಿಮಾಂಸದ ಉದ್ಯಮ ಅವಲಂಬಿಸಿ ಕರಿಕುರಿ ಪಾಲನೆ ಹಾಗು ಕೃಷಿಗಾಗಿ ವಿಶ್ವ ಪ್ರಸಿದ್ದ ಅಮೃತ್‍ಮºಲ್, ಹಳ್ಳಿಕಾರ್ ಮತ್ತು ಹಾಲಿಗಾಗಿ ಇತರೆ ದೇಸಿ ಪಶು ತಳಿಗಳ ಹೈನುಗಾರಿಕೆ ಮಾಡಿಕೊಂಡಿದ್ದು, ಇವರುಗಳು ಸತತವಾಗಿ ಬರಗಾಲದ ದವಡೆಗೆ ಸಿಲುಕಿ ನಲುಗಿರುತ್ತಾರೆ.
ಇಂತಹ ಪರಿಸರಾತ್ಮಕ ಹಾಗು ಆರ್ಥಿಕ ಸಂಕಟದ ಸಮಯದಲ್ಲಿ ಪರಿಸರ ಮತ್ತು ಮಾನವ ಜೀವನ್ಮುಖಿ ಅಭಿವೃದ್ಧಿ ಯೋಜನೆಗಳಾದಂಥಹ ನೀರಾವರಿ, ಕುಡಿಯವ ನೀರಿನ ಸೌಲಭ್ಯ, ಕೆರೆ-ಕಟ್ಟೆ ನಿರ್ಮಾಣ, ಮೇವು ಅಭಿವೃದ್ಧಿ, ಕುರಿ-ಪಶು ಪಾಲನೆ, ಜನ-ಜಾನುವಾರುಗಳ ಆರೋಗ್ಯ, ಉತ್ತಮ ಮಾರುಕಟ್ಟೆ ವ್ಯವಸ್ಥೆ, ಕಂಬಳಿ ನೇಕಾರರಿಗೆ ಸಾಲ, ಆಧುನಿಕ ತಂತ್ರಜ್ಞಾನ ಸೌಲಭ್ಯಗಳಿಂದ ಬಲಪಡಿಸುವ ಮತ್ತು ಅಂರ್ತಜಲ ಹೆಚ್ಚಿಸುವ - ಹಸಿರು ಹೊದಿಕೆಯಂತಹ ಯೋಜನೆಗಳಿಗೆ ಬಲವಾದ ಬೇಡಿಕೆಯ ಕೂಗಿಗೆ ಹಲವು ದಶಕಗಳ ಇತಿಹಾಸವಿದೆ. ಆದರೆ ಇದ್ದಕ್ಕಿದಂತೆ ಎಂದೂ ಇಲ್ಲದಿದ್ದಂತಹ ಅಭಿವೃದ್ಧಿಯ ದಿಕ್ಕನ್ನು ಕಾಣಿಸಲು, ಇಲ್ಲಿನ ಸ್ಥಳಿಯ ಆಡಳಿತವು ಚಿತ್ರದುರ್ಗ ಜಿಲ್ಲೆಯಲ್ಲಿ ಬಡಜನತೆಯ ಶ್ರೇಯೋಭಿವೃದ್ದಿಗೆ ಸಹಕಾರವಾಗಲೆಂದು ಮರಣೋನ್ಮುಖ ಮತ್ತು ಆತ್ಮಘಾತುಕ ಯೋಜನೆಗಳಿಗೆ ಇತ್ತೀಚಿನ ವರ್ಷಗಳಲ್ಲಿ ಶರಣಾಗಿರುತ್ತದೆ.
ಇತಿಹಾಸದ ದಾಖಲೆಗಳ ಪ್ರಕಾರ 1860ರಲ್ಲಿ ಮದ್ರಾಸಿನ ಕಮೀಷನರ್ ಸರ್. ಖೌಲ್ಸ್ ಟ್ರಾವಲಿಯನ್‍ನ ತಪ್ಪು ಆರ್ಥಿಕ ದೃಷ್ಟಿಯಿಂದ ಅಮೃತ್‍ಮಹಲ್ ಸಾಮ್ರಾಜ್ಯದಲ್ಲಿ ಅಮೃತ್‍ಮಹಲ್ ತಳಿಗಳ ಪತನವಾಗಿತ್ತು. ಇಂದು 2008-2010 ರಲ್ಲಿ ಚಿತ್ರದುರ್ಗದ ಜಿಲ್ಲೆ ಕಮೀಷನರ್ ಆಗಿದ್ದ ಶ್ರೀ ಆದಿತ್ಯ ಅಮ್ಲಾನ್ ಬಿಸ್ವಾಸ್‍ರವರು ಬರೆದಿರುವ ಕಾನೂನು ಹಾಗು ಅಭಿವೃದ್ಧಿಯ ವ್ಯಾಖ್ಯಾನಗಳಿಂದ ರಾಜ್ಯದ ಪಶ್ಚಿಮಘಟ್ಟದ ತಪ್ಪಲು ಪ್ರದೇಶಗಳಲ್ಲಿ ಬರುವ ಬಯಲುಸೀಮೆ ಮತ್ತು ಅರೆಮಲೆನಾಡು ಪ್ರದೇಶಗಳಲ್ಲಿನ ಅಪರೂಪದ ಅಮೃತ್‍ಮಹಲ್ ಹುಲ್ಲುಗಾವಲುಗಳಲ್ಲಿನ ಜೈವಿಕ ಪರಿಸರ (Ecology)ದ ಆವಾಸಿಗಳಾಗಿರುವ, ಹಾಗು ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972 ರ ಶಡ್ಯಲ್ 1, ಸೆಕ್ಷನ್ 2ರಲ್ಲಿನ ಕೃಷ್ಣಮೃಗ, ತೋಳ, ಅಳಿವಿನ ಅಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಮತ್ತು ಲೇಸ್ಸರ್ ಫ್ಲೋರಿಕಾನ್ ನಂತಹ ಪಕ್ಷಿಸಂಕುಲಗಳು ಹಾಗು ಜನಸಮುದಾಯಗಳ ಬದುಕು ಅವರ ದೇಸಿ ಜ್ಞಾನ ಸಂಪತ್ತುಗಳ ವಿನಾಶಕ್ಕೆ ಇಂದು ಮುನ್ನುಡಿಯನ್ನು ಬರೆದು ಚರಿತ್ರೆ ಮಾಡಿರುತ್ತಾರೆ.
ರಾಜ್ಯದ ಚಳ್ಳಕೆರೆ ತಾಲ್ಲೂಕನ್ನು ವಿಶ್ವದ ಭೂ ಪಟದಲ್ಲಿ ರಾರಾಜಿಸಲು ಅಧಿಕಾರಕ್ಕೆ ಬಂದಂತಹ ಸಚಿವ ಸಂಪುಟದ ನಾಯಕರು, ಇಲ್ಲಿಗೆ ಬಂದಂತಹ ಜಿಲ್ಲಾಧಿಕಾರಿಗಳು, ತಮ್ಮ ಸರದಿಯ ಮೇಲೆ ಅಧಿಕಾರವನ್ನು, ಕಾನೂನಿನ ಓಳದಾರಿಗಳನ್ನು ಬಳಸಿ ಹಾಗು ಉಲ್ಲಂಘಿಸಿ ಮರಣೋನ್ಮುಖ ಯೋಜನೆಗಳಿಗೆ ಕೆಳಕಂಡಂತೆ ಆತ್ಮಪೂರ್ವಕವಾಗಿ ಅದ್ಭುತವಾದ ಕುದಾಪುರ-ಉಳ್ಳಾವರ್ತಿ-ವರವು ಅಮೃತ್‍ಮಹಲ್ ಹುಲ್ಲುಗಾವಲು ಭೂಮಿಯನ್ನು ಡಿ-ನೋಟಿಫೈ ಮಾಡಿ ಹಂಚಿರುತ್ತಾರೆ.
ಕ್ರ.ಸ |
ಸಂಸ್ಥೆ
|
ಗ್ರಾಮದ ಹೆಸರು
|
ಸ.ನಂ
|
ಮುಂಜೂರಾತಿ ಎ-ಗು |
1
|
ಡಿ.ಆರ್.ಡಿ.ಓ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ)
|
ವರವು ಕಾವಲು ಕುದಾಪುರ |
343
47
|
4000-00
290-00
|
2
|
ಭಾರತೀಯ ವಿಜ್ಞಾನ ಸಂಸ್ಥೆಯMassive High-energy
electron
accelaerator
|
ಕುದಾಪುರ
|
47
|
1500-00
|
3
|
ಬಾಬಾ ಅಣು ಸಂಶೋಧನಾ ಕೇಂದ್ರದ ಸ್ಪೆಷಲ್ ಮೆಟಿರಿಯಲ್ ಎನರಿಚ್‍ಮೆಂಟ್ ಫೆಸಿಲಿಟಿ
|
ಉಳ್ಳಾರ್ತಿ ಕಾವಲು
ಕುದಾಪುರÀ |
1
47
|
1410-00
400-00
|
4
| ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ | ಉಳ್ಳಾರ್ತಿ ಕಾವಲು ಕುದಾಪುರ |
1
47
|
473-00
100-00
|
5
|
ಕೆ.ಎ.ಐ.ಡಿ.ಬಿ
|
ಉಳ್ಳಾರ್ತಿ ಕಾವಲು
ಕುದಾಪುರÀ |
1
47
|
250-00
50-00
|
ಒಟ್ಟು
|
8473-00
|
ಇದಕ್ಕಾಗಿ, ಇಲ್ಲಿನ ಜಿಲ್ಲಾಧಿಕಾರಿಗಳು ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿಗಳಿಗೆ ತಮ್ಮ ಪತ್ರದಲ್ಲಿ :ಸರ್ಕಾರಿ ಸುತ್ತೋಲೆ ಆರ್ ಡಿ/03/ ಎಜಿಪಿ/95 ದಿನಾಂಕ: 28/03/1995 ರಲ್ಲಿ ಅಮೃತ್‍ಮಹಲ್ ಕಾವಲು ಜಮೀನುಗಳ ಅನಧಿಕೃತ ಅಧಿಭೋಗದಾರಿಕೆಯನ್ನು ಕರ್ನಾಟಕ ಭೂ ಕಂದಾಯ ಕಾಯಿದೆ 1964 ರ ಕಲಂ 94 ಎ ಮತ್ತು ಕರ್ನಾಟÀಕ ಭೂ ಕಂದಾಯ ನಿಯಮಗಳು 1966 ರ ನಿಯಮ 108 ಐ ರಡಿ ಸಕ್ರಮಗೊಳಿಸಿವುದಕ್ಕೆ ಅವಕಾಶ ನೀಡಬಾರದೆಂದು ತಿಳಿಸಲಾಗಿದೆಯೆಂದು, ಆದಾಗ್ಯೂ ಕಾವಲು ಜಮೀನುಗಳ ಅನಧಿಕೃತ ಸಾಗುವಳಿ ಅವ್ಯಾಹತವಾಗಿ ಮುಂದುವರಿದ ಕಾರಣ ಘನ ಉಚ್ಚನ್ಯಾಯಾಲಯ ಲೇಖ ಮನವಿ 17954 ಆಫ್ 1997(ಕೆಎಲಾರ್, ಪಿಐಎಲ್) ದಿನಾಂಕ: 20/ 03/2001 ರ ಆದೇಶದಲ್ಲಿ ಕೆಳಕಂಡಂತೆ ವ್ಯಾಖ್ಯಾನಿಸಿರುತ್ತದೆ:-
“Even assuming that any
extent of land in this survey number is to be de-reserved under the act and The
Rules and granted in favour of any other persons for cultivation. Etc. It can
be done only in consonant with the requirement of Rule 97 of the Rules and only
after it is ascertained as a matter of fact that any extent of reserved gomala
land is in excess of the requirements of the village cattle”
ಎಂದು ಉಪದೇಶಿಸಿ ತಿಳಿಸುತ್ತ ಕಾವಲಿನ ಕುರಿ ಸಂವರ್ಧನಾ ಕೇಂದ್ರವು ಈ ಹಿಂದಿನ ಮುಖ್ಯ ಕಾರ್ಯದರ್ಶಿಗಳು 1979 ರಲ್ಲಿ ಆಶ್ವಾಸನೆ ನೀಡಿದಂತೆ ಉತ್ಪಾದನ ಸಾಮಥ್ರ್ಯಗಳನ್ನು ಅಭಿವೃದ್ಧಪಡಿಸುವ ಯೋಜನೆಗಳು ಕಾರ್ಯರೂಪಕ್ಕೆ ತರಲು ಪಶುಪಾಲನೆ ಇಲಾಖೆಯು ವಿಫಲವಾಗಿದೆ. ಕುರಿ ಸಂವರ್ಧನಾ ಕೇಂದ್ರದಲ್ಲಿ ಪ್ರಸ್ತುತ 22 ದನ ಮತ್ತು 250 ಕುರಿಗಳು ಮಾತ್ರ ಇರುತ್ತದೆ ಎಂದು ದಾಖಲೆ ತೋರಿಸಿ, ಈ ಭೂಮಿಯನ್ನು ಪಡೆಯಲು ತಮ್ಮ ಸಹಮತಬೇಕೆಂದು ಕೋರಿ ಪಡೆದಿರುತ್ತಾರೆ.
ಹಾಗೆ, ಕುದಾಪುರ, ವರವು ಮತ್ತು ಉಳ್ಳಾರ್ತಿ ಗ್ರಾಮಗಳಲ್ಲಿ ಜಾನುವಾರು (ದನ-ಕುರಿ) ಸಂಖೈ ಕೇವಲ 3987 ಹಾಗು 8034 ಕ್ರಮದಲ್ಲಿ ಮಾತ್ರವಿರುವುದರಿಂದ ಅವುಗಳಿಗೆ ಈ ಕಾವಲುಗಳ ಅಗತ್ಯವಿರವುದಿಲ್ಲ ಎಂದು ದಾಖಲೆ ತೋರುವ ಜಿಲ್ಲಾ ಆಡಳಿತವು, ಈ ಕಾವಲನ್ನು ಬಳಸುವ ದೇವರಹಟ್ಟಿ, ನೇರಲಗೊಂಟ್ಟೆ, ಮನಮೈನಹಟ್ಟಿ, ಎನ್.ಮಹದೇವಪುರ, ಗೌರಿಪುರ, ಭೀಮನಕೆರೆ, ದಾಸರಹಟ್ಟಿ, ಕಾಟೇನಹಳ್ಳಿ ಹಾಗು ಇತರೆ 40ಕ್ಕೂ ಹೆಚ್ಚು ಗ್ರಾಮದ ಅಂದಾಜು 15,000ಕ್ಕೂ ಹೆಚ್ಚು ಜಾನುವರಗಳು ಹಾಗು 30,000ಕ್ಕೂ ಹೆಚ್ಚು ಕುರಿ-ಮೇಕೆಗಳನ್ನು ಪರಿಗಣಿಸಿರುವುದಿಲ್ಲ.
ಮೇಲಾಗಿ ದಾಖಲೆಯಲ್ಲಿ ತೋರಿಸಿರುವ 12,021 ಸಂಖ್ಯೆ ಜಾನುವಾರುಗಳಿಗೆ ಕೂಡ ಮೇಯಲು ಕಿಂಚಿತ್ತೂ ಗೋಮಾಳ ಭೂಮಿಯಿಲ್ಲದಂತೆ ವಿವಿಧ ಸಂಸ್ಥೆಗಳಿಗೆ ಕಾನೂನು ಬಾಹಿರವಾಗಿ ಪರಭಾರೆ ಮಾಡಿ ಆಡಳಿತವು ಶಾಸ್ತ್ರಕ್ಕೆ ಒಂದು ಗೋಶಾಲೆ ತೆರೆದು ಕಳಪೆ ಮೇವನ್ನು ಸರಬರಾಜು ಮಾಡುತ್ತಿರುತ್ತದೆ. ಇದರಿಂದ ಇಲ್ಲಿನ 50ಕ್ಕೂ ಹೆಚ್ಚು ಗ್ರಾಮಗಳ ಜಾನುವಾರುಗಳು ಮೇವಿಲ್ಲದೆ ಸೊರಗಿ ಸಾಯುತ್ತಿದ್ದು ಜನರ ಆರ್ಥಿಕ ಹೊರೆ ತೀವ್ರವಾಗುತ್ತಿದೆ ಎಂಬುದು ಕುದಾಪುರ, ಮನಮೈನಹಟ್ಟಿ ಹಾಗು ಇತರೆ ಪಶು-ಕುರಿಪಾಲಕರ ದೂರಾಗಿದೆ.
ಈ ಜನರ ನಂಬಿಕೆಯ ಆರಾಧ್ಯದೈವ ಅಜ್ಜಯ್ಯ ದೇವರಗುಡಿಯು ಹಾಗು ಸುತ್ತಮುತ್ತಲಿನ ಪ್ರದೇಶದ ಗ್ರಾಮದ ಜಾನುವಾರುಗಳಿಗೆ, ವನ್ಯ ಜೀವಗಳಿಗೆ ಮೇವು-ಜಲಮೂಲಕ್ಕೆ, ಆಧಾರವಾಗಿದ್ದ ಈ ಅಮೃತ್‍ಮಹಲ್ ಹುಲ್ಲುಗಾವಲು ಭೂಮಿಯಲ್ಲಿ ವಿಜ್ಞಾನ ಸಂಸ್ಥೆಗಳಿಂದ ಕಾಂಕ್ರಿಟ್‍ಕರಣಗೊಳ್ಳುತ್ತಿರುವ್ತÅದು, ಸುತ್ತಲು ಏರುತ್ತಿರುವ 12 ಅಡಿ ಎತ್ತರದ ಗೋಡೆಗಳು, ಚಳ್ಳೆಕೆರೆ-ಕಲ್ಯಾಣದುರ್ಗ ರಸ್ತೆಯು ರದ್ದಾಗುತ್ತಿರುವುದು, ನಿರ್ಭಂದಿತ ಪ್ರದೇಶದವೆಂದು ಘೋಷಣೆಯಂತಹ ಬೆಳವಣಿಗೆಗಳಿಗೆ ಇಲ್ಲಿನ ಪರಿಸರ ಪ್ರೀಯರÀು, ರೈತ, ಪಶು-ಕುರಿ ಪಾಲಕ, ನೇಕಾರ ಜನ ಸಮುದಾಯಗಳು ಭೀತಿಗೊಂಡು ಸಂಘಟಿಸಿದ ಹಲವು ಹೋರಾಟಗಳನ್ನು ಉದ್ಯೋಗ ನೀಡುವ ಪೊಳ್ಳು ಆಶ್ವಾಸನೆ ಹಾಗು ಪೋಲಿಸರ ಬಲದಿಂದ ಮಟ್ಟಹಾಕಲಾಗಿದೆ.
ದೇಶಿ ಪಶು-ಕುರಿ ತಳಿ ಅಭಿವೃದ್ಧಿಯಲ್ಲಿ, ಕೃಷಿ ಮತ್ತು ಕಂಬಳಿ ಉದ್ಯಮದಲ್ಲಿ ತ¯ತಲಾಂತರದಿಂದ ಕೌಶಲ್ಯ-ಪರಿಣತಿ ಹೊಂದಿರುವ ಈ ಸಮುದಾಯದ ಜೀವಗಳು, ಚಿದ್ರಗೊಳ್ಳುತಿರುವ ತಮ್ಮ ಪ್ರೀತಿಯ ಪರಿಸರ, ಬದುಕು, ನಂಬಿಕೆಯ ದೇವರು ಮತ್ತು ಕನಸುಗಳಿಗಾಗಿ ಸದ್ಯ ವಿವಿಧ ಯೋಜನೆಗಳಿಂದ ಇಲ್ಲಿ ಸೃಷ್ಟಿಯಾಗಿರುವ, ಬದುಕಿನ ಸ್ವಾತಂತ್ರ್ಯವನ್ನು ದಿಕ್ಕರಿಸುವ ‘ಗೋಡೆಗಳನ್ನು’ ನಿರ್ಮಿಸುವಂತಹ ಗುತ್ತಿಗೆ ಕೆಲಸಗಳಿಗೆ ಆಶ್ರಯಿಸಿದ್ದಾರೆ. ಅವರುಗಳ ಪರಿಸರ ಸಂಪತ್ತಿನ ರಕ್ಷಣೆ ಹಾಗು ನಿರ್ವಹಣೆಯ ದೇಶಿ ಜ್ಞಾನ-ಸಂಸೃತಿಗಳು ಛಿದ್ರವಾಗಿ ಕಣ್ಮರೆಯಾಗಲು ಶುರವಾಗಿದ್ದು ಮಂದೆ ಇದೆ ಗೋಡೆಗಳ ಕಾರ್ಯ ನಿರ್ಮಾಣ ಮುಗಿದ ನಂತರ ಇವರು ತಮ್ಮ ಜಾನುವಾರು-ಕುರಿ ಹಾಗು ಜಮೀನು ಮಾರಿಕೊಂಡು ಯಾವ ಸ್ಥಿತಿಗೆ ಹೋಗುವವರೊ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಕುದಾಪುರದ ರೈತ ಕರಿಯಣ್ಣ.
ಫೋಟೊ : 4 ರೈತರನ್ನು ನಿರ್ಭಂದಿಸುತ್ತಿರುವ ಆಡಳಿತ
ಜಿಲ್ಲೆಯ ರೈತ ಹೂರಾಟಗಾರ ಭೂತಯ್ಯ, ಜಿಲ್ಲೆಯಲ್ಲಿನ ಎಲ್ಲಾ ಅಮೃತ್‍ಮಹಲ್ ಕಾವಲು ಮತ್ತು ಗೋಮಾಳಗಳು ಒತ್ತುವರಿ, ಮಣ್ಣು-ಮರಳುಗಣಿಗಾರಿಕೆಯಾಗುತ್ತಿದ್ದು, ಜಿಲ್ಲೆಯಲ್ಲಿರುವ 7.15 ಲಕ್ಷ ಕುರಿಗಳು, ಅದರಲ್ಲೂ ಚಳ್ಳಕೆರೆ ತಾಲ್ಲುಕಿನ 2.46 ಲಕ್ಷ ಕುರಿಗಳಿಗೆ ಮೇಯಲು ಜಾಗವಿಲ್ಲದಂತಾಗಿದ್ದು ಇನ್ನು ಕೆಲವೆ ವರ್ಷಗಳಲ್ಲಿ ತಾಲ್ಲೂಕಿನ ಪ್ರಸಿದ್ದ ಕಂಬಳಿ ಉದ್ಯಮವು, ಕಂಬಳಿ ನೇಯುವ ಕೌಶಲ್ಯತೆಯಳ್ಳ ಕಾರ್ಮಿಕ ಕುಟುಂಬದವರ ಬದುಕು ಅಯೊಮಯವಾಗಲಿದೆ ಎಂದು ಹೇಳುತ್ತಾರೆ.
ಜಿಲ್ಲಾಡಳಿತದ ದಿಂದ ಅರಣ್ಯ ಕಾಯ್ದೆ ಉಲಂಘಣೆ
(ಜಾನುವಾರು ಮತ್ತು ಜೀವವೈವಿಧ್ಯತೆಗಳ ಚಲನವಲನೆಗೆ ತಡೆಯಾಗಿರುವ ಸಂಶೋಧನ ಕೇಂದ್ರದ 12 ಅಡಿ ಎತ್ತರದ ಗೋಡೆಗಳು)
ಮಾನ್ಯ ಸರ್ವೋಚ್ಚನ್ಯಾಯಾಲಯವು, – ಘೋಷಿತ ಅರಣ್ಯದ ಹೊರತು ಬೇರೆ ಅರಣ್ಯಗಳನ್ನು ಗುರುತಿಸಲು ನೇಮಿಸಿದ ತಜ್ಞರ ಸಮಿತಿಯು ಕರ್ನಾಟಕದ ಅಮೃತ್‍ಮಹಲ್ ಕಾವಲುಗಳನ್ನು ಅರಣ್ಯ ಭೂಮಿಯೆಂದೇ ಪರಿಗಣಿಸುತ್ತದೆ. ಕರ್ನಾಟಕ ಅರಣ್ಯ ಕಾಯ್ದೆ 1963, ಸೆ 33, ಈ ಅಮೃತ್‍ಮಹಲ್ ಕಾವಲುಗಳು ಕರ್ನಾಟಕ ಅರಣ್ಯ ನಿಯಮ 1963 ರೂಲ್, ನಿಯಮ 33 ರಂತೆ ರಾಜ್ಯದ ಎಲ್ಲಾ ಅಮೃತ್‍ಮಹಲ್ ಕಾವಲುಗಳನ್ನು ಅವಶ್ಯ ಬದಲಾವಣೆಗಳೊಂದಿಗೆ ಮತ್ತು ಜಿಲ್ಲಾ ಅರಣ್ಯಗಳ ನಿರ್ವಹಣೆಯಂತೆಯೇ ಅಮೃತ್‍ಮಹಲ್ ಕಾವಲುಗಳೂ ಸಹ ಒಳಪಡಲೇಬೇಕು ಎಂದು ಹೇಳುತ್ತದೆ.
ಇಷ್ಟೆಲ್ಲದರ ಮೇಲೆ ಜಿಲಾಡಳಿತವು ಈ ಅಮೃತ್‍ಮಹಲ್ ಕಾವಲುಗಳುನ್ನು ಕರ್ನಾಟಕ ಆರಣ್ಯ ನಿಯಮ.33, 1969ರ ಜಿಲ್ಲಾ ಅರಣ್ಯ ಕಾಯ್ದೆಗೆ ಒಳಪಟ್ಟಿರುವುದರ ಬಗ್ಗೆ ಅಂಧಕಾರ ಧೋರಣೆ ತೋರಿರುವುದು ಮತ್ತು ಕರ್ನಾಟಕ ಅರಣ್ಯ (ಸಂರಕ್ಷಣೆ) ಕಾಯ್ದೆ 1980, 2ರಂತೆ ಕೇಂದ್ರ ಸರ್ಕಾರದ ಸೆಂಟ್ರಲ್ ಎಂಪವರ್ಡ್ ಕಮಿಟಿಯ ಶಿಫಾರಸ್ಸು ಇಲ್ಲದೆ ಅರಣ್ಯ ಭೂಮಿಯನ್ನು ಡಿ-ನೋಟಿಫೈ ಮಾಡಿರುವುದು ಮತ್ತೊಂದು ಕಾನೂನು ಉಲ್ಲಂಘನೆಯಾಗಿದೆ, ಕಾರಣ ಅಮೃತ್‍ಮಹಲ್ ಭೂಮಿಯನ್ನು ಪರಭಾರೆ ಮಾಡುವಾಗ ಜಿಲ್ಲಾ (ಕಂದಾಯ ಆಡಳಿತಕ್ಕೆ) ಈ ಪ್ರದೇಶಗಳ್ಳಲ್ಲಿ ಯಾವುದೇ ಮರ-ಮಕ್ಕಿಗಳು ಇರುವುದಿಲ್ಲ ಎಂದು ದಾಖಲಿಸುತ್ತ, ಇಲ್ಲಿನ ಜೀವವೈವಿಧ್ಯತೆ-ಮೂಲ ಆವಾಸಿಗಳು ಮತ್ತು ಅಳಿವಿನಂಚಿನಲ್ಲಿರುವ ವನ್ಯಮೃಗಗಳದ ಕೃಷ್ಣಮೃಗ, ತೋಳ, ನರಿ, ವೈವಿಧ್ಯಮಯ ಹುಲ್ಲು ಪ್ರಭೇದಗಳು ಮತ್ತು ಈ ಹುಲ್ಲುಗಾವಲುಗಳನ್ನೇ ಅವಲಂಬಿಸಿರುವ ಪಕ್ಷಿ, ಚಿಟ್ಟ, ಸರಿಸೃಪಗಳು, ಕೀಟಗಳ ಬಗ್ಗೆ ಕುರಡುತನ ತೋರಿದೆ.
ಫೋಟೊ : 3 ಕಾವಲಿನ ಹುಲ್ಲುಪ್ರಭೇದ
ಇತ್ತೀಚೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ಶಾಸ್ತ್ರ ವಿಭಾಗದ ತಜ್ಞರು ಮತ್ತು ವಿಧ್ಯಾರ್ಥಿಗಳು ನೆಡೆಸಿದ ರ್ಯಾಪಿಡ್ ಬಯೋಡೈವರ್ಸಿಟಿ ಸರ್ವೆಯಲ್ಲಿ, ವನ್ಯಜೀವಿ(ಸಂರಕ್ಷಣೆ) ಕಾಯ್ದೆ, 1972 ರ ಶಡ್ಯಲ್ 1, ಸೆಕ್ಷನ 2ರಲ್ಲಿನ ಕೃಷ್ಣಮೃಗಗಳು, ತೋಳ, ನರಿ ಮತ್ತು ಹುಲ್ಲುಗಾವಲುಗಳನ್ನೇ ಅವಲಂಬಿಸಿರುವ ಅಪರೂಪವಾದ ನೂರಾರು ಪಕ್ಷಿ, ಚಿಟ್ಟೆ, ಕೀಟ, ಸರಿಸೃಪ ಸಂಕುಲಗಳು, ಹಲವು ಪ್ರಭೇದಗಳ ಹುಲ್ಲು, ಬಳ್ಳಿ ಗಿಡ-ಮರಗಳನ್ನು ಗುರುತಿಸಿರುವುದು ಹಲವು ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ.
ಸೆಕ್ಷನ್33(|||.ಚಿ) ಕಾಯ್ದೆಯು ಯಾವುದೇ ರೀತಿಯ ಒತ್ತುವರಿಯನ್ನು ಅವಶ್ಯವಾಗಿ ನಿರ್ಭಂಧಿಸುತ್ತದೆ, ಸಬ್ ಸೆಕ್ಷನ್(|||) ಈ ಅರಣ್ಯ/ಹುಲ್ಲುಗಾವಲುಗಳನ್ನು ಮಂಜೂರು ಮಾಡಲು ಮತ್ತು ವಿಭಜಿಸಲು ಮತ್ತು ತೆರವುಗೊಳಿಸುವುದು ಮತ್ತು ಕೃಷಿಗೆ ಒಳಪಡಿಸುವುದು ಮತ್ತು ಇತರೆ ಉದ್ದೇಶಗಳಿಗೆ ಬಳಸಿಕೊಳ್ಳುವುದನ್ನು ನಿರ್ಭಂಧಿಸುತ್ತದೆ.
ಸಬ್ ಸೆಕ್ಷನ್(v|||) ಇಲ್ಲಿನ ವನ್ಯಮೃಗಗಳನ್ನು ಬೇಟೆಯಾಡುವುದು, ಕ್ರೀಡೆಗಾಗಿ ಓಡಿಸುವುದು/ಕೊಲ್ಲುವುದು, ಮೀನು ಹಿಡಿಯುದು, ವಿಷಪೂರಿತಗೊಳಿಸುವುದು/ಕ್ರೀಡೆಗಾಗಿ ಓಡಿಸುವುದು ಮತ್ತು ಬಲೆ-ಉಳ್ಳುಗಳನ್ನು ಹಾಕುವುದನ್ನು ನಿರ್ಭಂಧಿಸುತ್ತದೆ ಮತ್ತು ತಡೆಯುತ್ತದೆ. ಹಾಗೆ, ನ್ಯಾಷನಲ್ ಫಾರೆಸ್ಟರಿ ಕಮೀಷನ್‍ನ ಶಿಫಾರಸ್ಸು ಸಂಖ್ಯೆ 172, ‘ಪ್ರಾಜೆಕ್ಟ್ ಬಸ್ಟರ್ಡ್’ ಅನ್ನು ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್, ಲೆಸ್ಸರ್ ಫ್ಲಾರಿಕಾನ್ ಹಾಗು ಇತರೆ ಹುಲ್ಲುಗಾವಲುಗಳ ಜೀವವೈವಿಧ್ಯತೆಯನ್ನು ರಕ್ಷಿಸುವ ಸಲುವಾಗಿ ಗುರುತಿಸಿರುವ ಪ್ರದೇಶಗಳಲ್ಲಿ ಚಿತ್ರದುರ್ಗದ ಹುಲ್ಲುಗಾವಲುಗಳು ಇವೆ ಎಂಬುದನ್ನು ಈ ಸಮಯದಲ್ಲಿ ಮರೆಯಬಾರದು.
ಫೋಟೊ: 5 ಕಾವಲಿನ ವಿಹಂಗಮ ನೋಟ.
ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಭೂಬ್ಯಾಂಕುಗಳಿಗೆ, ಕೃಷಿಗೆ, ಪಶುಪಾಲನೇತರÀ ಕೈಗಾರಿಕಾ ವಸಹಾತುಗಳಿಗೆ, ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಮನಸೋ ಇಚ್ಚೆ 15,000 ಎಕರೆಗೂ ಮಿಗಿಲಾಗಿ ಅಮೃತ್‍ಮಹಲ್ ಕಾವಲು ಭೂಮಿಗಳನ್ನು ನೀಡಿರುವ ವಿಷಯವು ರಾಜ್ಯದಲ್ಲಿ ಕುಖ್ಯಾತಿಗೊಂಡಿದ್ದರೂ ರಾಜ್ಯದ ಅರಣ್ಯ ಇಲಾಖೆಯ, ರಾಜ್ಯ ಜೀವವೈವಿಧ್ಯ ಮಂಡಳಿಯ ಗಮನಕ್ಕೆ ಬಾರದಿರುವುದು ಮತ್ತು ಈ ಸಂದರ್ಭದಲ್ಲಿ ಪಶುಸಂಗೋಪಾನ ಮತ್ತು ಪಶುವೈದ್ಯಕೀಯ ಇಲಾಖೆಯು ಕುಂಬಕರ್ಣ ನಿದ್ದೆ ಮಾಡುತ್ತಿರುವುದು ರಾಜ್ಯದ ದೊಡ್ಡ ಪರಿಸರಾತ್ಮಕ ದುರಂತವೇ ಸರಿ!!
ವಿಪರ್ಯಾಸವೆಂದರೆ, ಅಂದು ಯುದ್ಧಗಳಲ್ಲಿ ರಣತಂತ್ರ ರೂಪಿಸುತ್ತಿದ್ದ ಮೈಸೂರು, ಮೊಘಲ್, ಮರಾಠ ಮತ್ತು ಬ್ರಿಟೀಷ್ ರಾಜನೀತಿಜ್ಞರುಗಳಿಗೆ ಪ್ರಿಯವಾಗಿದ್ದ ಅಮೃತ್‍ಮಹಲ್ ತಳಿ ಮತ್ತು ಕಾವಲುಗಳು ಇಂದು ಇದೇ ಯುದ್ಧ-ರಣ ಪ್ರಿಂiÀರ ಯುದ್ಧ ವಿಮಾನಗಳು, ಅಣು ತಂತ್ರಜ್ಞಾನಗಳನ್ನು ಹೊಸೆಯಲು ಸುರಕ್ಷಿತ ಮತ್ತು ಪ್ರೀತಿಯ ತಾಣವಾಗಿದೆ.
- ಮನೋಹರ ಪಟೇಲ್.ಆರ್
ಮೈತ್ರಯ ಪರಿಸರ ಮತ್ತು ಗ್ರಾಮೀಣ ಅಧ್ಯಯನ ಕೇಂದ್ರ, ತಿಪಟೂರು.
ದಯವಿಟ್ಟು ಕನ್ನಡ ಯುನಿಕೋಡ್ ಬಳಸಿ . ಎಲ್ಲರೂ ಓದುವಂತಾಗಲಿ
ReplyDeleteDear shankarji.. i was unable to convert into Unicode..sorry for my limited knowledge in computer.,U can find pdf format i the below link. http://www.facebook.com/groups/maithreyatiptur/
ReplyDeleteSorry for the inconvenience.
on Grasslands and Pasturelands of Chitradurga other links http://www.facebook.com/photo.php?fbid=10151266229874877&set=o.140734679307543&type=1&theater and http://www.facebook.com/photo.php?fbid=10151266205244877&set=pcb.10151266220549877&type=1&theater
ReplyDeleteಲೇಖನ ಮಾಹಿತಿ ಪೂರ್ಣವಾಗಿದೆ. ಈ ಬಗ್ಗೆ ನಾನು ಒಂದು ಲೇಖನವನ್ನು ನನ್ನ ಕಿಲಾರಿ ಬ್ಲಾಗ್ ನಲ್ಲಿ ಪ್ರಕಟಿಸಿರುವೆ ಗಮನಿಸಿ
ReplyDelete