ಗುಬ್ಬಚಿ ಎಲ್ಲಿದೆ ನಿನ್ನ ಮನೆ
ಇದು ಸಾವಿರಾರು ಪುಟ್ಟ ಮಕ್ಕಳ, ಪರಿಸರ ಸಂವೇದನೀಯ ಹೃದಯಗಳ ಮತ್ತು ಪರಿಸರ ಹೋರಾಟಗಾರರ ಪ್ರಶ್ನೆ. ಇವುಗಳ ಕಾಣೆಯಾಗುವಿಕೆಗೆ ಮನುಷ್ಯರೆ ಕಾರಣರು ಎಂಬ ಪಾಪಪ್ರಜ್ಞೆಯ ಕಾಡುವಿಕೆ ಮತ್ತು ಈ ಪಾಪಪ್ರಜ್ಞೆಯಿಂದ ಆಚೆ ಬರಲು ಮತ್ತು ಈ ಗುಬ್ಬಿಗಳನ್ನು ನಮ್ಮ ಪರಿಸರದಲ್ಲಿ ಪುನ: ಬರಮಾಡಿಕೊಳ್ಳಲು ಗುಬ್ಬಿಗಳ ಮನೆ-ಅಸ್ಥಿತ್ವವನ್ನು ಹುಡುಕಿ ಹೊರಟ ನೂರಾರು ಪಕ್ಷಿ ತಜ್ಞರು ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳ ಭೀತಿ, ಆತಂಕ, ಗೊಂದಲಗಳ ನಡುವಿನಾಚೆಗಿನ ಇರುವ ಉತ್ತರ ಮತ್ತು ಕಾಳಜಿಯನ್ನು ವ್ಯಕ್ತಪಡಿಸುಲು ಇದೇ ಮಾರ್ಚ 20 ರಂದು ಬೆಂಗಳೂರಿನಲ್ಲಿ ಸೇರಲ್ಲಿದ್ದಾರೆ. ಅಲ್ಲಿ ಗುಬ್ಬಿ ಪ್ರಭೇದಗಳ ಅವನತಿ, ಗುಬ್ಬಿಗಳನ್ನು ಪುನಃ ನಮ್ಮೆಡೆಗೆ ಬರುವಂತ ಮಾಡಲು ಸಾಧ್ಯವೆ..? ಅಳಿದುಳಿದ ಗುಬ್ಬಿಗಳ ರಕ್ಷಣೆ ಹೊಣೆ ಹೇಗೆ..? ಅವುಗಳು ವಾಸ ಮಾಡಲು ಯೊಗ್ಯ ಸ್ಥಳಗಳ ನಿರ್ಮಾಣ, ಆಹಾರ ಇವಗಳ ಬಗೆ ದೀರ್ಘ ಚರ್ಚೆ ಮತ್ತು ಅನುಭವವನ್ನು ಸುಮಾರು 250ಕ್ಕೂ ಹೆಚ್ಚು ಪಕ್ಷಿ ತಜ್ಞರು ಹೊರ ದೇಶಗಳಿಂದ ಬರಲಿದ್ದಾರೆ ಹಾಗೂ 1500ಕ್ಕೂ ಹೆಚ್ಚು ಪಕ್ಷಿ ವೀಕ್ಷಕರು ಒಂದೆಡೆ ಕಲೆತು ಸಮಾಲೊಚನೆಗಳ ಮೂಲಕ ಹಂಚಿಕೊಳ್ಳಲ್ಲಿದ್ದಾರೆ.
ಹಿಂದೆ ಗುಬ್ಬಚ್ಚಿಗಳು ಮತ್ತು ಮನುಷ್ಯನ ನಡುವಿನ ಸಂಬಂಧ ಅವಿನಾಭಾವವಾಗಿತ್ತು. ಅವುಗಳು ಮನುಷ್ಯ ಇರವಡೆಯೆಲ್ಲಾ ಸ್ವೇಚ್ಛಯಿಂದ ಬದುಕುತ್ತಿದ್ದವು. ವರ್ಷದ ಎಲ್ಲಾ ಕಾಲಗಳಲ್ಲೂ ಹೆಂಚಿನ ಮನೆಗಳ ಮಾಡಿನಲ್ಲಿ ಗುಡಿಗೋಪುರಗಳ ಕಿಂಡಿಗಳಲ್ಲಿ, ಗೊಡೆ ಬಿರುಕುಗಳಲ್ಲಿ, ತಂತಿ ಕಂಬದ ರಂದ್ರಗಳಲ್ಲಿ, ಸೂರುಗಳಡಿ, ಬಾಗಿದ ಬೀದಿ ದೀಪಗಳ ನೆರಳಿನಡಿ ಗರಿಕೆ, ರಾಗಿ, ಭತ್ತ ಮತ್ತು ಇತರೆ ಹುಲ್ಲು, ಹತ್ತಿ,ಪುಕ್ಕಗಳಿಂದ ತುರುಕಿ ಹೂಸಗೂಡು ಕಟ್ಟುವ ಕೆಲಸ ಎಗ್ಗಿಲ್ಲದೆ ಸಾಗುತ್ತಿದ್ದರೆ ನಮ್ಮ ಕಣ್ಣಿಗೆ ಹಬ್ಬವಾಗಿತ್ತು. ಅವುಗಳ ಮಾಸಲು ಹಸಿರು ಬಿಳಿ ಬಣ್ಣದ ಮೊಟ್ಟೆಗಳನ್ನು ತಮ್ಮ ಹಿತಶತ್ರುಗಳಾದ ಮೈನಾ, ಕಾಗೆ, ಗಿಡುಗ, ಮುಂತಾದ ಇತರೆ ಹಕ್ಕಿಗಳಿಂದ ಆಗುತ್ತಿದ್ದ ಆಕ್ರಮಣ, ಬೆದರಿಕೆ, ಉಪಟಳಿಂದ ರಕ್ಷಿಸುವ ಪರಿ ನಮ್ಮನ್ನು ಚಿಕಿತಗೊಳುಸುತ್ತಿದ್ದವು. ಹಾಗೆಯೇ, ತಮ್ಮ ಪರಮ ವೈರಿಗಳಾದ ಹಾವು ಮತ್ತು ಬೆಕ್ಕುಗಳಿಂದ ತಮ್ಮ ಮೊಟ್ಟೆ ಮತ್ತು ಮರಿಗಳನ್ನು ರಕ್ಷಿಸಲಾಗದೆ ಅವುಗಳ ವ್ಯರ್ಥ ಹೋರಾಟ ಮತ್ತು ಚಿರಾಟಗಳು ನಮ್ಮ ಕರಳಗಳಿಗೆ ಚುರಕು ಹುಟ್ಟಿಸಿದ್ದವು. ಕೆಲವೊಮ್ಮೆಯಂತು ನಾವು ಶಾಲೆಗೆ ಚಕ್ಕರ್ ಹೊಡೆದು ಅವುಗಳ ರಕ್ಷಣೆಗೆ ನಿಲ್ಲುತ್ತಿದ್ದ ನಮ್ಮ ಪರಿ ಮನೆಯವರಿಗೆ ತಿಕ್ಕಲುತನದಂತೆ ತೋರುತ್ತಿದ್ದವು. ಆ ತಿಕ್ಕಲುತನವನ್ನು ಇಂದು ಪರಿಸರಪ್ರಜ್ಞೆ ! ಎಂದು ಕರೆಯುತ್ತಿದ್ದಾರೆ.
ಜಗತ್ತಿನಾದ್ಯಂತ ಸುಮಾರು ನಲವತ್ತು ಪ್ರಭೇದ ಗುಬ್ಬಿಗಳು ಇವೆ, ಭಾರತದಲ್ಲಿ ಕಂಡು ಬರುವ ಪ್ರಭೇದವನ್ನು ಪಾಸರ್ ಡೊಮೆಸ್ಟಿಕಸ್ ಎಂದು ಗುರುತಿಸಲಾಗಿದೆ. ಗಂಡು ಹಕ್ಕಿ ಕಡುಬೂದಿ ಬಣ್ಣದ ತಲೆ, ಕಣ್ಣಿನ ಸುತ್ತಲು ಕಪ್ಪು ಬಣ್ಣ, ಕಪ್ಪು ಬೂದಿ ಮಿಶ್ರಿತ ಬೆನ್ನು, ಭುಜದ ಬಳಿ ಬಿಳಿ ಪಟ್ಟೆ, ಕಡು ಕಂದು ಬಣ್ಣದ ಬಾಲ ಹೊಂದಿರುತ್ತದೆ. ಹಾಗೆ, ಹೆಣ್ಣು ಗುಬ್ಬಿಯು ಗಾತ್ರದಲ್ಲಿ ಗಂಡು ಗುಬ್ಬಿಗಿಂತ ಸಣ್ಣವಿದ್ದು, ಬೆನ್ನು ಕಂದು ಬೂದಿ ಬಣ್ಣವಿದ್ದು, ಬಿಳಿ ಬೂದು ಹೊಟ್ಟೆಯನ್ನು ಹೊಂದಿರುತ್ತದೆ. ಹಿಮಾಲಯದ 2000 ಸಾವಿರ ಮೀ. ಎತ್ತರ ಪ್ರದೇಶದಿಂದ ಹಿಡಿದು, ಬಾಂಗ್ಲ, ಪಾಕ, ಶ್ರೀ ಲಂಕ, ಮೈನಮಾರ್ ಗಳ ತನಕ ಇವುಗಳ ಸಂತತಿಯು ಹರಡಿವೆ. ಪೂರ್ವೊತ್ತರ ರಾಜ್ಯಗಳಲ್ಲಿ ಕಂಡು ಬರುವ ಗುಬ್ಬಿಗಳು ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ನಮ್ಮ ಬಯಲು ಸೀಮೆ ಮತ್ತು ಗುಡ್ಡಗಾಡುಗಳಲ್ಲಿ ಸಮಾನ್ಯವಾಗಿ ಕಂಡು ಬರುವ ಇವು ಮನುಷ್ಯನ ಬದುಕಿಗೆ ಜೊತು ಬಿದ್ದ ಹಕ್ಕಿಗಳಾಗಿವೆ. ಸ್ಥಳೀಯ ಹವಾಗುಣವನ್ನು ಅವಲಂಬಿಸಿರುತ್ತದೆ. ಗುಬ್ಬಿಗಳ ಕೊಕ್ಕಿನ ರಚನೆ ಬತ್ತ, ನವಣೆ, ಸಜ್ಜೆ ಗಳಂತಹ ಧಾನ್ಯಗಳನ್ನು ಒಡೆದು ತಿನ್ನಲು ಯೋಗ್ಯವಾದ ಮಾರ್ಪಡು ಹೊಂದಿದೆ. ಹಾಗಾಗಿ ಇವುಗಳಿಗೆ ಬೇರೆ ಹಣ್ಣುಗಳನ್ನಾಗಲಿ ಅಥವ ಇತರೆ ಆಹಾರಗಳನ್ನಾಗಲಿ ಸೇವಿಸುವ ರೂಢಿಯಿಲ್ಲ. ಮುಖ್ಯವಾಗಿ ಅವು ಗೂಡು ಕಟ್ಟಿ , ಮೊಟ್ಟೆ ಇಟ್ಟು ಮರಿ ಮಾಡಿದಾಗ ಆ ಮರಿಗಳಿಗೆ ವಿಶೇಷವಾಗಿ ಹುಳು ಉಪ್ಪಟೆಗಳೇ ಮುಖ್ಯ ಆಹಾರವಾಗಿರುತ್ತದೆ. ಆದರೆ ನಮ್ಮ ಕೃಷಿಕ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಬಳಸುವ ವಿಷ ರಸಾಯನಿಕಗಳು ಬೆಳೆಯನ್ನು ಸೇರಿ ಅಲ್ಲಿನ ಹುಳು ಉಪ್ಪಟೆಗಳನ್ನು ನಾಶಪಡಿಸಿ, ಧಾನ್ಯಗಳಲ್ಲೂ ಸೇರಿ ಹೊಗಿವೆ. ಇನ್ನೂ ನಮ್ಮ ಗುಬ್ಬಿಗಳಿಗೆ ಸಕಾಲದಲ್ಲಿ ಹುಳುಗಳು ಸಿಗದೆ ಮರಿಗಳು ಅಂತ್ಯ ಕಾಣುತ್ತಿವೆ.
ಮನುಷ್ಯನ ನಾಗರೀಕತೆಯ ನಾಗಾಲೋಟಕ್ಕೆ , ಅದು ತರುತ್ತಿರುವ ತೀಕ್ಷ್ಣ ಬದಲಾವಣೆಗಳು ಗುಬ್ಬಿಯ ವಾಸ ಸ್ಥಳಗಳನ್ನು ಹಾಗು ಸೂಕ್ತ ಪರಿಸರವನ್ನು ಹಾಳು ಮಾಡುತ್ತಿವೆ, ಹಳೆಯ ಹೆಂಚಿನ ಮನೆಗಳ ಬದಲು ಕಾಂಕ್ರೀಟ್-ಗಾಜಿನ ಮನೆಗಳಾಗಿವೆ. ಬೇರೆ ಹಕ್ಕಿಗಳ ರೀತಿ ಬದಲಾದ ಸನ್ನಿವೇಶಕ್ಕೆ ಹೊಂದಿಕೊಂಡು ಹೊಗಬಲ್ಲ ಸಮಾಥ್ರ್ಯ, ಪರಿಸ್ಥಿತಿಗೆ ಅನುಗುಣವಾಗಿ ಸೆಡ್ಡುಹೊಡೆದು ನಿಲ್ಲುವ ಚತುರತೆ ಇವುಗಳಿಗೆ ಇಲ್ಲ. ಇಷ್ಟೇಲ್ಲಾದರು ಅಲ್ಲಲ್ಲಿ ಇವಗಳ ಚಿಲಿಪಿಲಿ ದಯನೀಯ ಕೂಗು ಕೇಳಿಸುತ್ತಿರುತ್ತದೆ.
ಇವಗಳ ಆರ್ತನಾದಕ್ಕೆ ನಾವುಗಳು ಇಂದು ಪ್ರತಿಸ್ಪಂದಿಸಬೇಕಾಗಿದೆ. ಈ ತಿಂಗಳ 20ರಂದು ಬೆಂಗಳೂರಿನಲ್ಲಿ ನೆಡೆÉಯಲಿರುವ ಅಂತರಾಷ್ಟ್ರೀಯ ಗುಬ್ಬಿಗಳ ದಿನಾಚರಣೆಯಂದು ಪರಿಸರ ತಜ್ಞರು-ಪಕ್ಷಿ ಪ್ರಿಯರುಗಳ ಧ್ವನಿಗೆ ನಾವುಗಳೂ ಧ್ವನಿ ಸೇರಿಸಬೇಕಾಗಿದ್ದು, ಅಲ್ಲಿಯ ಚರ್ಚೆ ಬರೀ ಚರ್ಚೆಯಾಗಿಯೆ ಉಳಿಯದೆ ಕಾರ್ಯರೂಪಕ್ಕೆ ಬರಬೇಕು.
ಈಗಾಗಲೇ ಬೇಸಿಗೆ ಶುರುವಾಗಿದೆ, ಹಕ್ಕಿಗಳ ನೀರಿನ ದಾಹ ಹೆಚ್ಚಾಗತೊಡಗಿದೆ. ಗುಬ್ಬಿಗಳಂತೂ ನೀರಿಲ್ಲದೆ ಪರದಾಡುವಂತೆ ಆಗಿದೆ. ಪ್ರತಿ ಮನೆಯ ಮೇಲೆ, ಸಜ್ಜೆಗಳ ಕೆಳಗೆ, ಅಂಗಳದಲ್ಲಿ, ಕಾಂಪೊಂಡುಗಳ ಮೇಲೆ ಬೊಗುಣಿಗಳಲ್ಲಿ ನೀರು ತುಂಬಿಡುವ ಕೆಲಸ ಮಾಡಬೇಕು. ಸ್ವಲ್ಪ ಬತ್ತ, ಅಕ್ಕಿ ಸುತ್ತಾ ಚೆಲ್ಲಿದರೆ ಇನ್ನೂ ಒಳ್ಳೆಯದು.
ಪೋಟೊ: 1 ಮತ್ತು 2 ಮೂಲ ಇಂಟರನೆಟ್.
ಲಿಂಗರಾಜು ಹೆಚ್. ಸಿ.
ಮೈತ್ರಯ ಬಳಗ ಮತ್ತು ಹಾಸನ ಜಿಲ್ಲಾ ವಿಜ್ಞಾನ ಕೇಂದ್ರದ ಸದಸ್ಯರು.
Lovely post.
ReplyDelete