Saturday, June 9, 2012

Electric fence in the Blackbucks and Wildlife corridor



2009-2012ರ ವರೆಗು ತಿಪಟೂರು ತಾಲ್ಲೂಕು ಕೊನೇಹಳ್ಳಿಯ ಬಿದಿರಮ್ಮನಗುಡಿ ಅಮೃತ್‍ಮಹಲ್ ಕಾವಲಿನಲ್ಲಿ, ಮೈತ್ರಯ ಪರಿಸರ ಅಧ್ಯಯನ ಕೇಂದ್ರವು ನೆಡೆಸಿದ ರ್ಯಾಪಿಡ್ ಬಯೋಡೈವರ್ಸಿಟಿ ಸರ್ವೆಯಲ್ಲಿ 247 ವಿವಿಧ ಸಸ್ಯ ಸಂಕುಲಗಳು, 40ಕ್ಕೂ ಹೆಚ್ಚು ಚಿಟ್ಟೆ ಪ್ರಭೇದಗಳು, 74ಕ್ಕೂ ಹೆಚ್ಚು ಹುಲ್ಲುಗಾವಲು ಪಕ್ಷಿ ಸಂಕುಲಗಳು ಕಂಡು ಬಂದಿರುತ್ತದೆ. ಹಾಗೆ ಅಳಿವಿನ ಅಂಚಿನಲ್ಲಿರುವ ಅಪರೂಪದ 240ಕ್ಕೂ ಹೆಚ್ಚು ಕೃಷ್ಣಮೃಗಗಳು, ತೋಳ, ನರಿ, ಕತ್ತೆಕಿರುಬ, ಚಿರತೆ ಹಾಗು 5ಕ್ಕು ಹೆಚ್ಚು ವಿಧದ ಸರಿಸೃಪಗಳಿಗೆ ಆಶ್ರಯ ತಾಣವಾಗಿರುತ್ತದೆ. 

ಇವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆಯು ಇಲ್ಲಿ ಬೇಟೆ ನಿರ್ಮೂಲನಾ ಪಡೆಯನ್ನು ಸ್ಥಾಪಿಸಿದೆ. ಇತ್ತೀಚೆಗೆ ಇಲ್ಲಿನ ಸಂಶೋಧನಾ ಕೇಂದ್ರವು ಕೃಷ್ಣಮೃಗ ಮತ್ತು ನರಿಗಳು ಬಳಸುವ ಕಾವಲಿನ ಅವರಣದಲ್ಲಿ ವಿದ್ಯುತ್ ಮತ್ತು ತಂತಿ ಬೇಲಿಗಳುನ್ನು ನಿರ್ಮಿಸಿರುತ್ತದೆ. ಬಹುಸೂಕ್ಮ ಸ್ವಭಾವ ಹೊಂದಿರುವ ಕೃಷ್ಣಮೃಗಗಳ ಮರಿಗಳು, ನರಿಗಳು, ಮುಂಗಸಿ, ನವಿಲು ಮತ್ತು ಸರಿಸೃಪಗಳು ಈ ಬೇಲಿಗಳಿಗೆ ತಾಕಿದರೆ ಸಾವನ್ನಪ್ಪುವ ಅಥವಾ ತೀವ್ರ ಘಾಸಿಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು ಅರಣ್ಯ ಇಲಾಖೆಯು ಕೂಡಲೆ ಮಧ್ಯ ಪ್ರವೇಶಿಸಿ ವಿದ್ಯುತ್ ಬೇಲಿಯನ್ನು ತೆರವುಗೊಳಿಸಿ ಅಪರೂಪದ ಈ ಹುಲ್ಲುಗಾವಲ್ಲನ್ನು ಮತ್ತು ಇಲ್ಲಿನ ಕೃಷ್ಣಮೃಗಗಳನ್ನು ಸಂರಕ್ಷಿಸಲು ಬಿದಿರಮ್ಮನಗುಡಿ ಅಮೃತ್‍ಮಹಲ್ ಕಾವಲನ್ನು “ಕೃಷ್ಣಮೃಗÀ ಸಂರಕ್ಷಿತ ತಾಣ” ಎಂದು ಘೋಷಿಸಬೇಕು.

ಶ್ರೀಕಾಂತ್ ಹೆಚ್. ಎಸ್. 
ಮುಖ್ಯಸ್ಥರು, ಮೈತ್ರಯ ಪರಿಸರ ಅಧ್ಯಯನ ಕೇಂದ್ರ, ತಿಪಟೂರು.

National Reserved Grassland or Pasture Reserved Forest


ಅಪರೂಪದ ಅಮೃತಮಹಲ್ ಹುಲ್ಲುಗಾವಲುಗಳನ್ನು
"ರಾಷ್ಟ್ರೀಯ ಹುಲ್ಲುಗಾವಲು" ಗಳಾಗಿ ಘೋಷಣೆ ಮಾಡಿ


ಭಾರತದ ಪಶುಸಂಗೋಪನಾ ಚರಿತ್ರೆಯಲ್ಲಿ 27 ವಿಶಿಷ್ಟ ವಂಶವಾಹಿನಿಗಳಿರುವ ದೇಶಿ ಜಾನುವರುಗಳಿರುತ್ತವೆ. ಅವುಗಳಲ್ಲಿ ದೇವಣಿ, ಕೃಷ್ಣವ್ಯಾಲಿ, ಅಮೃತ್‍ಮಹಲ್ ಹಾಗು ಮಲೆನಾಡು ಗಿಡ್ಡಗಳು ಕರ್ನಾಟಕದವುಗಳಾಗಿರುತ್ತವೆ. ಇವುಗಳಲ್ಲಿ ಕೃಷ್ಣವ್ಯಾಲಿಯು ವಿನಾಶಗೊಂಡಿದ್ದು ಈಗ ಅಮೃತಮಹಲ್ ತಳಿಗಳು ಅವನತಿಯಡೆ ಸಾಗಿವೆ. ಈ ಅಮೃತ್‍ಮಹಲ್ ತಳಿಗಳು ವಿಶ್ವ ವಿಖ್ಯಾತವಾಗಿದ್ದು, ಇವುಗಳ ತಳಿಗಳಲ್ಲಿ ಚಿತ್ರದುರ್ಗ, ಹಾಗಲವಾಡಿ ಮತ್ತು ಹಳ್ಳಿಕಾರ ಎಂಬ ಮೂರು ವಿಶಿಷ್ಟ ವಂಶವಾಹಿನಿಗಳಿರುತ್ತವೆ. ಈ ರಾಸುಗಳ ಅಭಿವೃದ್ಧಿ, ಸಂವರ್ಧನೆ ಮತ್ತು ಸಂರಕ್ಷಣೆಗಾಗಿ ಕಳೆದ 500 ವರ್ಷಗಳಿಂದ ಮೀಸಲಿಟ್ಟ ಹುಲ್ಲುಪ್ರದೇಶಗಳೆ ಅಮೃತ್‍ಮಹಲ್ ಕಾವಲುಗಳು. ಇಂದಿಗೂ ಈ ಅಮೃತ್‍ಮಹಲ್ ಹುಲ್ಲುಗಾವಲು/ಕಾವಲುಗಳು ಅಸ್ಥಿತ್ವದಲ್ಲಿದ್ದು, ರಾಜ್ಯದ ಪಶುಸಂಗೋಪಾನಾ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆಯ ನಿರ್ವಹಣೆಯಡಿಯಿರುತ್ತದೆ.

ಇಂತಹ ಹುಲ್ಲುಗಾವಲುಗಳು ತಮ್ಮದೇ ಜೈವಿಕ ಪರಿಸರ ಗುಣಗಳನ್ನು ಹೊಂದಿದ್ದು, ಅಪರೂಪದ ಹಾಗು ಅವನತಿಯ ಅಂಚಿನಲ್ಲಿರುವ ಕೃಷ್ಣಮೃಗ, ತೋಳ, ಕತ್ತೆಕಿರುಬ, ನರಿ ಹಾಗು ಬಿಲ ಮತ್ತು ಗೂಡುಗಳಲ್ಲಿ ವಾಸಿಸುವ ಚಿಪ್ಪುಹಂದಿ, ಮುಳ್ಳುಹಂದಿ, ಮೊಲ, ಹಾವು, ಪುನಗುಬೆಕ್ಕು, ಕಾಡುಬೆಕ್ಕು ಇತ್ಯಾದಿ ಜೀವವೈವಿಧ್ಯತೆಗಳ ಆಶ್ರಯತಾಣವಾಗಿರುತ್ತವೆ. ಮಾನ್ಯ ಸರ್ವೋಚ್ಚನ್ಯಾಯಾಲಯವು - ಘೋಷಿತ ಅರಣ್ಯದ ಹೊರತು ಬೇರೆ ಅರಣ್ಯಗಳನ್ನು ಗುರುತಿಸಲು ನೇಮಿಸಿದ ತಜ್ಞರ ಸಮಿತಿಯು ಕರ್ನಾಟಕದ ಅಮೃತ್‍ಮಹಲ್ ಕಾವಲುಗಳನ್ನು ಅರಣ್ಯ ಭೂಮಿಯೆಂದೇ ಪರಿಗಣಿಸುತ್ತದೆ.

ಆದರೆ, ರಾಜ್ಯದ ಕಂದಾಯ ಇಲಾಖೆಯು ಈ ಅಮೃತ್‍ಮಹಲ್ ಕಾವಲುಗಳನ್ನು ಕೇವಲ ಗ್ರಾಮ ಗೋಮಾಳವೆಂದೇ ಪರಿಗಣಿಸುತ್ತಾ ಇವುಗಳನ್ನು ಕೃಷಿ, ಭೂ ಬ್ಯಾಂಕುಗಳಿಗೆ, ಕೈಗಾರಿಕೆ, ಕೈಗಾರಿಕಾ ವಸಹಾತುಗಳಿಗೆ ಎಂದು ಪರಿಸರ ಮತ್ತು ಮಾನವ ಮರಣೋನ್ಮುಖ ಯೋಜನೆಗಳಿಗೆ ಆತ್ಮಪೂರ್ವಕವಾಗಿ ಅಮೃತ್‍ಮಹಲ್ ಹುಲ್ಲುಗಾವಲು ಭೂಮಿಗಳನ್ನು ಕಳೆದಹಲವು ವರ್ಷಗಳಿಂದ ಡಿ-ನೋಟಿಫೈ ಮಾಡಿ ಹಂಚುತಿರುತ್ತಾರೆ. ಆದರೆ, ಪಶುಪಾಲನಾ ಇಲಾಖೆಯು ಕೇವಲ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಕೇವಲ ಸೂಚನೆ-ಸುತ್ತೂಲೆಗಳನ್ನು ನೀಡುತ್ತ ಕಾಲಹರಣ ಮಾಡಿ ಶೇಕಡ 45% ಅಮೃತ್‍ಮಹಲ್ ಭೂಮಿಗಳನ್ನು ಕಳೆದುಕೊಂಡಿರುತ್ತದೆ. ಹಾಗೇ, ಅರಣ್ಯ ಇಲಾಖೆಯು ಕೂಡ ಈ ಅಮೃತ್‍ಮಹಲ್ ಭೂಮಿಗಳಲ್ಲಿ ನೆಡುತೊಪು ಮಾಡಿ ಹುಲ್ಲುಗಾವಲಿನ ಜೈವಿಕ ಪರಿಸರನಾಶಕ್ಕೂ ಮತು ಅಪರೂಪದ ಪ್ರಾಣಿ ಪಕ್ಷಿಗಳ ವಿನಾಶಕ್ಕೆ ಕಾರಣವಾಗಿರುತ್ತದೆ.

1966ರ ಭೂಕಂದಾಯ ನಿಯಮ ಮತ್ತು ನಿಯಮ 73ರ ಅಡಿ ಯಾವುದೇ ಜಿಲ್ಲಾಧಿಕಾರಿಗಳರವರಿಗೆ ಕಂದಾಯ ಭೂಮಿಗಳ ವಿಸ್ತೀರ್ಣವನ್ನು ಕಡಿತಗೊಳಿಸುವುದು ಮತ್ತು ಕಂದಾಯ ಗ್ರಾಮಗಳ ಭೂಮಿಗಳನ್ನು ಇತ್ಯರ್ಥಪಡಿಸುವುದು ಮಂತಾದ ಅಧಿಕಾರಿಗಳು ಇರುತ್ತವೆ. ಆದರೆ, ಈ ಅಮೃತ್‍ಮಹಲ್ ಕಾವಲುಗಳು ಕರ್ನಾಟಕ ಆರಣ್ಯ ನಿಯಮ. 33, 1969ರ ಜಿಲ್ಲಾ ಅರಣ್ಯ ಕಾಯ್ದೆಗೆ ಕೂಡ ಒಳಪಟ್ಟಿರುತ್ತದೆ. ಹಾಗೇ, ಕರ್ನಾಟಕ ಅರಣ್ಯ ಕಾಯ್ದೆ 1963, ಸೆ 33ರಂತೆ ರಾಜ್ಯದ ಎಲ್ಲಾ ಅಮೃತ್‍ಮಹಲ್ ಕಾವಲುಗಳನ್ನು ಅವಶ್ಯ ಬದಲಾವಣೆಗಳೊಂದಿಗೆ ಮತ್ತು ಜಿಲ್ಲಾ ಅರಣ್ಯಗಳ ನಿರ್ವಹಣೆಯಂತೆಯೇ ಅಮೃತ್‍ಮಹಲ್ ಕಾವಲುಗಳೂ ಸಹ ಒಳಪಡಲೇಬೇಕು. ಮಾನ್ಯಸರ್ವೋಚ್ಚ ನ್ಯಾಯಾಲಯವು - ಘೋಷಿತ ಅರಣ್ಯದ ಹೊರತು ಬೇರೆ ಅರಣ್ಯಗಳನ್ನು ಗುರುತಿಸಲು ನೇಮಿಸಿದ ತಜ್ಞರ ಸಮಿತಿಯು ಕರ್ನಾಟಕದ ಅಮೃತ್‍ಮಹಲ್ ಕಾವಲುಗಳನ್ನು ಅರಣ್ಯ ಭೂಮಿಯೆಂದೇ ಪರಿಗಣಿಸುತ್ತದೆ. ಸೆಕ್ಷನ್ 33(III.a)ಕಾಯ್ದೆಯು ಈ ಭೂಮಿಗಳನ್ನು ಯಾವುದೇ ರೀತಿಯ ಒತ್ತುವರಿಯನ್ನು ಅವಶ್ಯವಾಗಿ ನಿರ್ಭಂಧಿಸುತ್ತದೆ. ಸಬ್ ಸೆಕ್ಷನ್ (III) ಈ ಭೂಮಿಗಳನ್ನು ಮಂಜೂರು ಮಾಡಲು ಮತ್ತು ವಿಭಜಿಸಲು ಮತ್ತು ತೆರವುಗೊಳಿಸುವುದು ಮತ್ತು ಕೃಷಿಗೆ ಒಳಪಡಿಸುವುದು ಮತ್ತು ಇತರೆ ಉದ್ದೇಶಗಳಿಗೆ ಬಳಸಿ ಕೊಳ್ಳುವುದನ್ನು ನಿರ್ಭಂಧಿಸುತ್ತದೆ. ಸಬ್‍ಸೆಕ್ಷನ್ (VII) ಬೇಟೆಯಾಡುವುದನ್ನು, ಕ್ರೀಡೆಗಾಗಿ ಓಡಿಸುವುದು/ಕೊಲ್ಲುವುದು, ಮೀನು ಹಿಡಿಯುವುದು, ವಿಷಪೂರಿತಗೊಳಿಸುವುದು/ಓಡಿಸುವುದು ಮತ್ತು ಬಲೆ-ಉಳ್ಳು ಹಾಕುವುದನ್ನು ನಿರ್ಭಂಧಿಸುತ್ತದೆ ಮತ್ತು ತಡೆಯುತ್ತದೆ. ವಾಸ್ತವ ಸ್ಥಿತಿ ಹೀಗಿರುವಾಗ, 1980ರ ಅರಣ್ಯಸಂರಕ್ಷಣಾ ಕಾಯ್ದೆ ಸೆಕ್ಷನ್-02ರಂತೆ ಕೇಂದ್ರ ಸರ್ಕಾರದ ಸರ್ವೋಚ್ಚ ನ್ಯಾಯಾಲಯ ರಿಟ್ ಪಿಟಿಷನ್ ಸಂಖ್ಯೆ : 202/1995ರ ತೀರ್ಮಾನದಂತೆ ಕೇಂದ್ರಿಯ ವಿತ್ತಾಧಿಕಾರ ಸಮಿತಿಯ (Central Empowerd Committee) ಗಮನಕ್ಕೆ ತರದೆ ಯಾವ ಕ್ರಮವನ್ನಾಗಲಿ ಕೈಗೊಳ್ಳಲುಯಾರಿಗು (ಕಂದಾಯ ಅಥವ ಪಶುಸಂಗೋಪನೆ ಇಲಾಖೆಗಳು) ಅಧಿಕಾರವಿಲ್ಲ ಎಂಬುದನ್ನು ಉಲ್ಲಂಘಿಸಿ ಜಿಲ್ಲಾ ಮೀಸಲು ಹುಲ್ಲುಗಾವಲು ಅರಣ್ಯ ಪ್ರದೇಶವಾದ ಚಿತ್ರದುರ್ಗದ ಗುಂಡೇರಿ ಅಮೃತ್‍ಮಹಲ್ ಕಾವಲು ವಿಸ್ತೀರ್ಣವನ್ನು ಕಡಿತಮಾಡಿ ವಿಲೇವರಿಗೆ ಒಪ್ಪಿಗೆ ನೀಡಿರುವುದು ಮತ್ತು ತುಮಕೂರಿನ ಮುದಿಗೆರೆ ಮತ್ತು ಬಿದರೆ ಕಾವಲುಗಳನ್ನು ಭೂ ಬ್ಯಾಂಕ್‍ಗೆ ಸೇರಿಸಲು ಆದೇಶಿಸಿರುವುದು ಪ್ರಮಾದವಾಗುತ್ತದೆ.

ಇತಿಹಾಸದ ದಾಖಲೆಗಳ ಪ್ರಕಾರ 1860ರಲ್ಲಿ ಮದ್ರಾಸಿನ ಕಮೀಷನರ್ ಸರ್. ಖೌಲ್ಸ್ ಟ್ರಾವಲಿಯನ್‍ನ ತಪ್ಪು ಆರ್ಥಿಕ ದೃಷ್ಟಿಯಿಂದ ಅಮೃತ್‍ಮಹಲ್ ಸಾಮ್ರಾಜ್ಯದಲ್ಲಿ ಅಮೃತ್‍ಮಹಲ್ ತಳಿಗಳ ಪತನವಾಗಿತ್ತು. ಇಂದು 2008-2010ರಲ್ಲಿ ಚಿತ್ರದುರ್ಗದ ಜಿಲ್ಲೆ ಕಮೀಷನರ್ ಆಗಿದ್ದ ಶ್ರೀ ಅಮ್ಲನ್ ಆದಿತ್ಯ ಬಿಸ್ವಾಸ್‍ರವರು ಬರೆದಿರುವ ಕಾನೂನ ಹಾಗು ಅಭಿವೃದ್ಧಿಯ ವ್ಯಾಖ್ಯಾಯನಗಳಿಂದ ಕರ್ನಾಟಕದ ರಾಜ್ಯದ ಪಶ್ಚಿಮಘಟ್ಟದ ತಪ್ಪಲು ಪ್ರದೇಶಗಳಲ್ಲಿ ಬರುವ ಬಯಲುಸೀಮೆ ಮತ್ತು ಅರೆಮಲೆನಾಡು ಪ್ರದೇಶಗಳಲ್ಲಿನ ಅಪರೂಪದ ಅಮೃತ್‍ಮಹಲ್ ಹುಲ್ಲುಗಾವಲುಗಳಲ್ಲಿನ ಜೈವಿಕಪರಿಸರದ (Amrithmahal Grasssland Ecology) zÉùeÁ£ÀĪÁgÀÄ vÀ½ªÉÊ«zsÀåvÉUÀ¼ÀÄ/Indigenous Cattle Breed diversity, ಜನಸಮುದಾಯಗಳ ಬದುಕು ಅವರ ದೇಸಿ ತಳಿಸಂರಕ್ಷಣೆ ಜ್ಞಾನ ಮತ್ತು ಸಂಸೃತಿ ಸಂಪತ್ತುಗಳ ಪೂರ ವಿನಾಶಕ್ಕೆ ಇಂದು ಮುನ್ನುಡಿಯನ್ನು ಬರೆದು ಚರಿತ್ರೆ ಮಾಡಿರುತ್ತಾರೆ.

ಇದಕ್ಕೆ ಪೂರಕವಾಗಿ ಪಶುಸಂಗೋಪಾನಾ ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯದ “ಅನಧಿಕೃತ ಟಿಪ್ಪಣಿ”ಯಲ್ಲಿ ಈ ಅಮೃತ್‍ಮಹಲ್ ಭೂಮಿಗಳನ್ನು ವಿವಿಧ ಯೋಜನೆಗಳಿಗೆ ಭಾರಿ ಪ್ರಮಾಣದಲ್ಲಿ ಪರಭಾರೆ ಮಾಡಲು ಸಚಿವ ಸಂಪುಟದ ತೀರ್ಮಾನ ತೆಗೆದುಕೊಳ್ಳಲು ತಮ್ಮ ಅಭ್ಯಂತರವಿರುವುದಿಲ್ಲ ಎಂದು ಕಂದಾಯ ಇಲಾಖೆಗೆ ಬರೆದಿರುವ ಸಾರಂಶವು ಅಮೃತ್‍ಮಹಲ್ ಕಾವಲುಗಳ ಸರ್ವನಾಶಕ್ಕೆ ಪೀಠಿಕೆಯಾಗಿರುತ್ತದೆ. ಇದು, ಪಶುಪಾಲನಾ ಇಲಾಖೆಯ ಪ್ರತಿನಿಧಿಗಳು ಮತ್ತು ಅಲ್ಲಿನ ಅಧಿಕಾರಿಗಳಿಗೆ ನಾಡಿನ ಜಾನುವರು ತಳಿ-ವಂಶಗಳಿಗೆ, ಪಶುಪಾಲಕರು, ಸಂಚಾರಿ ಕುರಿಸಾಕಣಿಕೆದಾರರು ಮತ್ತು ಜೀವವೈವಿಧ್ಯತೆಗಳ ಬಗ್ಗೆ ಇರುವ ಕಾಳಜಿ ಮತ್ತು ಬದ್ದತೆಯ ಕೊರತೆಯ ನಗ್ನ ಸತ್ಯವನ್ನು ನಾಡಿನ ನಾಗರಿಕರಿಗೆ ತೋರಿಸುತ್ತಿದೆ.

ಇಂದು, ಆಫ್ರಿಕ ದೇಶದ ಸವಾನ ಹುಲ್ಲುಗಾವಲನಂತಿರುವ ನಮ್ಮ ರಾಜ್ಯದ ಅಮೃತ್‍ಮಹಲ್‍ನ ಜೈವಿಕಪರಿಸರವು(Ecology) ಪರಿಸರ ಮತ್ತು ಮಾನವ ಮರಣೋನ್ಮುಖ ಯೋಜನೆಗಳಿಗೆ ಒಳಗಾಗಿ ಸರ್ವನಾಶವಾಗುವ ಮುನ್ನ ದೇಸಿ ಜಾನುವಾರು ತಳಿ ಹಾಗು ಜೈವಿಕ ಸಂಪತ್ತನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಲು ಸೂಕ್ತ ಹಾಗು ತುರ್ತುಕ್ರಮ ಕೈಗೊಳ್ಳವ ಕಾಲ ಬಂದಿದೆ. ನ್ಯಾಷನಲ್ ಫಾರೆಸ್ಟರಿ ಕಮೀಷನ್‍ನ ಶಿಫಾರಸು ಸಂಖ್ಯೆ 172, ‘ಪ್ರಾಜಕ್ಟ ಬಸ್ಟರ್ಡ್’ ಅನ್ನು ಅಳಿವಿನಂಚಿನಲ್ಲಿರುವ ಗ್ರೇಟ್‍ಇಂಡಿಯನ್ ಬಸ್ಟರ್ಡ್, ಲೆಸ್ಸರ್ ಫ್ಲಾರಿಕಾನ್ ಹಾಗು ಇತರೆ ಹುಲ್ಲುಗಾವಲುಗಳ ಜೀವವೈವಿಧ್ಯತೆಯನ್ನು ರಕ್ಷಿಸುವ ಸಲುವಾಗಿರುವ ತಯಾರಿಸಿರುವ ಯೋಜನೆಗಳನ್ನು ಅರಣ್ಯ ಇಲಾಖೆ ಕಾರ್ಯರೂಪಕ್ಕೆ ತರಬೇಕಾಗಿದೆ.

ಇದಕ್ಕಾಗಿ ಹಿಂದೆ ವಿವಿಧ ಯೋಜನೆಗಳಿಗೆ ಕಾನೂನು ಬಾಹಿರವಾಗಿ ನೀಡಿರುವ ಮತ್ತು ಒತ್ತುವರಿಯಾಗಿರುವ ಅಮೃತ್‍ಮಹಲ್ ಕಾವಲು ಭೂಮಿಗಳನ್ನು ಸರ್ಕಾರವು ಕಠಿಣ ಮತ್ತು ಜರೂರು ಕ್ರಮಗಳಿಂದ ಹಿಂದೆ ಪಡೆಯಬೇಕು. ದೇಸಿ ಜಾನುವಾರು ತಳಿ ವೈವಿಧ್ಯತೆಯನ್ನು/Indigenous Cattle Breed Diversity, ಹುಲ್ಲುಗಾವಲಿನ ಜೀವವೈವಿಧ್ಯತೆ ಹಾಗು ಸ್ಥಾನಿಕ ಹುಲ್ಲು ಪ್ರಭೇದಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ಈ ಹುಲ್ಲುಗಾವಲುಗಳನ್ನು “ರಾಷ್ಟ್ರೀಯ ಹುಲ್ಲುಗಾವಲು” ಗಳಾಗಿ/“National Reserved Grassland or Pasture Reserved Forest” ಎಂದು ಘೋಷಣೆ ಮಾಡಲು ಅರಣ್ಯ ಇಲಾಖೆಯ ಎಲ್ಲಾ ಶಾಖೆಗಳು ಸೂಕ್ತ ಹಾಗು ತುರ್ತುಕ್ರಮ ಕೈಗೊಳ್ಳಬೇಕು. ಹಾಗು, ಇಲ್ಲಿನ ಸ್ತಾನಿಕ ಮೇವು ಪ್ರಭೇದ ವೈವಿಧ್ಯತೆಯ/“Local Fodder Species Diversity” (for indigenous fodder, herbs and shrubs) ರಕ್ಷಿಸಿ ಅಭಿವೃದ್ಧಿಪಡಿಸಿ ಈ ಜೈವಿಕ ಸಂಪತ್ತನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಲು ಸರ್ವಪ್ರಯತ್ನ ಕೈಗೊಳ್ಳ ಬೇಕು.

ಮನೋಹರ ಪಟೇಲ್. ಆರ್
ಮೈತ್ರಯ ಪರಿಸರ ಅಧ್ಯಯನ ಕೇಂದ್ರ, ತಿಪಟೂರು.