Tuesday, September 20, 2011

The Chemelon at Nagapuri forestನಾಗಪುರಿ ಅರಣ್ಯದ ವಿಶಿಷ್ಟ ಜೀವಿ: ಊಸರವಳ್ಳಿ ಪತ್ತೆ

ಇತ್ತೀಚೆಗೆ ಅರಸೀಕೆರೆ ತಾಲ್ಲುಕಿನ ನಾಗಪುರಿ ಅರಣ್ಯದಲ್ಲಿ ವಿಶಿಷ್ಟ ಸರಿಸೃಪವಾದ ಊಸರವಳ್ಳಿಯ ಪತ್ತೆಯಾಗಿದೆ. ಕೆಮಿಲಿಯೋ ಝೆಲಾನಿಕಸ್ ಎಂಬ ವೈಜ್ಞಾನಿಕ ಹೆಸರುನಿಂದ ಕರೆಯಲ್ಪಡುವ ಈ ಊಸರವಳ್ಳಿಯು ಇಲ್ಲಿನ ಜೀವಜಾಲದ ಮುಖ್ಯ ಕೊಂಡಿಯಾಗಿದೆ. ಹಾಸನ ಜಿಲ್ಲಾ ವಿಜ್ಞಾನ ಕೇಂದ್ರ, ಅರಸೀಕೆರೆ ಮತ್ತು ಮೈತ್ರಯ ಪರಿಸರ ಅಧ್ಯಯನ ಕೇಂದ್ರದ ಸದಸ್ಯರು ಇಲ್ಲಿನ ಬೆಟ್ಟ ಗುಡ್ಡ ಕಾಡುಗಳಲ್ಲಿ ಪ್ರಾಣಿ ಹಾಗು ಸಸ್ಯ ಸಂಕುಲಗಳ ಜೀವವೈವಿಧ್ಯತೆಯ ಅಧ್ಯಯನ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಅಪರೂಪದ ಪ್ರ್ರಾಣಿ ಕಾಣಿಸಿಕೊಂಡಿತ್ತು.


ಫೋಟೊ: 1: (ಕೆಮಿಲಿಯೋ ಝೆಲಾನಿಕಸ್) ವಿಶಿಷ್ಟ ಊಸರವಳ್ಳಿ.

ಕಣ್ಣು ಕೋರೈಸುವ ಹಸಿರು ಬಣ್ಣದೊಂದಿಗೆ ತನ್ನ ನಿಧಾನ ನಡಿಗೆಡಯೊಂದಿಗೆ ಹೊರ ಹೊರಟ ಈ ಜೀವಿ ಪರಿಸರದ ಹಿನ್ನೆಲೆಗೆ ತಕ್ಕಂತೆ ತನ್ನ ಮೈಬಣ್ಣ ಬದಲಿಸುವ ಗುಣ ಪ್ರಕಟಿಸುತ್ತಿತ್ತು. ತಲೆಯ ಮೇಲೆ ಕಿರೀಟದಂತಹÀ ಜುಟ್ಟು ಹೊಂದಿದ್ದ ಇದು ತನ್ನ ದೇಹವÀನ್ನು ಹಿಂದಕ್ಕೂ ಮುಂದಕ್ಕೂ ತೂಗಾಡಿಸುತ್ತ ವಿಶಿಷ್ಟ ಶೈಲಿಯಲ್ಲಿ ನಡೆಯುತ್ತಿತ್ತು. ಇದು ದಕ್ಷಿಣ ಭಾರತದಲ್ಲಿ ಸಿಗುವ ಏಕ ಮಾತ್ರ ಉಸರವಳ್ಳಿ ಎಂದು ಬಿಬಿಸಿ ಸಾಕ್ಷ್ಯ ಚಿತ್ರ ತಯಾರಕ ಪೌಲ್ ವಿಲಯಂಸ್ ಪಶ್ಚಿಮ ಘಟ್ಟಗಳಲ್ಲಿ ಪ್ರಯಾಣಿಸುವಾಗ ದಾಖಲಿಸುತ್ತಾರೆ.

ಉಸರವಳ್ಳಿಯ ಕಾಲಿನ ಬೆರಳುಗಳ ರಚನೆ ಗಿಣಿಯ ಕಾಲಿನ ರೀತಿಯಿದ್ದು ಎರಡು ಬೆರಳು ಹಿಂದೆ ಹಾಗು ಮೂರು ಬೆರಳು ಮುಂದೆಯಿರುತ್ತದೆ. ಮರಗಿಡಗಳ ರೆಂಬೆಗಳನ್ನು ಹಿಡಿದುಕೊಂಡು ಹತ್ತುತ್ತಾ ತನ್ನ ದೃಷ್ಟಿ ಶಕ್ತಿಯಿಂದ ಬೇಟೆಯಾಡುವುದನ್ನೇ ಇವು ಅಭ್ಯಾಸ ಮಾಡಿಕೊಂಡಿರುವ ಇವು ತಮ್ಮ ಆಹಾರವನ್ನು ತನ್ನ ದೇಹದಷ್ಟೆ ಉದ್ದವಾದ ನಾಲಿಗೆಯಿಂದ್ನ ಮನುಷ್ಯನ ಕಣ್ಣುಗಳು ಗುರುತಿಸಲಾಗದ ವೇಗದಿಂದ ಹೊರ ಚಾಚಿ ಒಳ ಸೆಳೆಯುತ್ತದೆ. ಇರುವೆಗಳು, ಮಿಡತೆಗಳು ಹಾಗು ಅನೇಕ ಕೀಟಗಳನ್ನು ಭಕ್ಷಿಸುತ್ತದೆ.ಅಲ್ಲದೆ ಸಮಾನ್ಯವಾಗಿ ಇವುಗಳು ಹದ್ದುಗಳು ಮತ್ತು ಹಾವುಗಳಿಗು ಆಹಾರವಾಗುತ್ತದೆ.


ಫೋಟೊ: 2: ನಾಗಪುರಿ ಅರಣ್ಯದಲ್ಲಿ ಔಷಧ ಸಸ್ಯಗಳ ಚಕ್ಕೆ ಸುಲಿದು ಪರಾರಿಯಾಗಿರುವುದು.

ಸ್ಟೀರಿಯೋಸ್ಕೋಪಿಕ್ ಕಣ್ಣು

ಕಣ್ಣಿನ ರಚನೆ ಅಸಾಧಾರಣವಾದುದಾಗಿದೆ. ಮೇಲಿನ ಮತ್ತು ಕೆಳಗಿನ ರೆಪ್ಪೆಗಳು ಸೇರಿಕೊಂಡು ಸಣ್ಣ ರಂದ್ರದಂತಹ ಕಣ್ಣು ಹೊಂದಿದೆ. ಏಕ ಕಾಲದಲ್ಲಿ ತನ್ನ ಎರಡೂ ಕಣ್ಣುಗಳನ್ನು ಬೇರೆ ಬೇರೆ ದಿಕ್ಕಿಗೆ ಹೊರಳಿಸಿ ಎರಡು ವಸ್ತುಗಳನ್ನು ನೋಡಬಲ್ಲವು. ಎರೆಡು ನೋಟಗಳನ್ನು ಒಂದಾಗಿಸಿ ನೋಡುವ ಸೂಕ್ಷ್ಮ ದರ್ಶಕ ರೀತಿಯಿರುವ ತನ್ನ (ಸ್ಟೀರಿಯೋಸ್ಕೋಪಿಕ್) ಕಣ್ಣುಗಳಿಂದ 360 ಡಿಗ್ರಿ ಸುತ್ತಲೂ ತನ್ನ ಕಣ್ಣಿನ ಪಾಪೆಯನ್ನು ತಿರುಗಿಸಬಲ್ಲ ಏಕೈಕ ಪ್ರಾಣಿ ಇದಾಗಿದೆ.

ತನ್ನ ಬಾಲವನ್ನು ಬೇಕೆಂದಾಗ ಸುರಳಿ ಸುತ್ತಿಕೊಳ್ಳುತ್ತದೆ. ಮೂಡನಂಬಿಕೆಗಳಲ್ಲೊಂದಾದ ಮದ್ದು ಕೊಡುವ ಪದ್ದತಿಗೆ ಇದನ್ನು ಹಿಡಿದೆ ಸಾಯಿಸಿ, ಮದ್ದು ತಯಾರಿಸುವ ಪದ್ಧತಿಗೆ ಇವು ಹೇಚ್ಚು ಬಲಿಯಾಗುತ್ತಿವೆ. ಈ ಊಸರವಳ್ಳಿಗಳು ಇಲ್ಲಿನ ಸಸ್ಯಗಳಾದ ತುಗ್ಗಲಿ, ಸೀಗೆ, ಕಾಡು ಮೆಣಸು, ಬಿಕ್ಕೆ, ಕಬ್ಬಳಿ ಇತ್ಯಾದಿ ಮರ ಗಿಡಗಳ ಮೇಲೆ ವಾಸಿಸುತ್ತ್ತಿದೆ. ಒಟ್ಟಾರೆ ನಾಗಪುರಿ, ಚಿಕ್ಕ ತಿರುಪತಿ, ಸಿದ್ದಪ್ಪನ ಬೆಟ್ಟಗಳ ಅರಣ್ಯದ ಸಸ್ಯ ಸಂಕುಲ ಉಳಿದರೆ ಇಂತಹ ಅನೇಕ ಜೀವಿಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ


ಸುಮಾರು 160 ಪೆಭೇದಗಳಿರುವ ಈ ಜೀವಿಗಳು ಆಫ್ರಿಕಾ, ಮಡಗಾಸ್ಕರ್, ಸ್ಪೇನ್ ಮತ್ತು ಪೋರ್ಚುಗಲ್, ದಕ್ಷಿಣ ಏಷ್ಯದಿಂದ ಹಿಡಿದು ಹವಾಯಿ ದ್ವೀಪಗಳು, ಕ್ಯಾಲಿಫೋರ್ನಿಯ ಮತ್ತು ಫ್ಲೋರಿಡಾ ಪ್ರದೇಶಗಳಲ್ಲಿ ಹರಡಿವೆ. ಒಟ್ಟಾರೆ ಉಷ್ಣವಲಯ ಪ್ರದೇಶಗಳಿಂದ ಹಿಡಿದು ಮಳೆ ಕಾಡುಗಳಲ್ಲಿ ಹಾಗು ಮರುಭೂಮಿಗಳಲ್ಲೂ ಕಂಡು ಬರುತ್ತವೆ. 26 ಮಿಲಿಯನ್ ವರ್ಷಗಳ ಹಿಂದಿನಿಂದಲೂ ಇರುವ ಈ ಪ್ರಭೇದಗಳಲ್ಲಿ ಸುಮಾರು 150 ಹೆಚ್ಚು ಪ್ರಭೇದಗಳು ಮಡಗಾಸ್ಕರ್ ದ್ವೀಪಗಳೊಂದರಲ್ಲೇ ಕಂಡು ಬರುವುದು ಆಶ್ಚರ್ಯವೇ ಸರಿ. ಇವುಗಳ ಪೆಭೇದಗಳು 1.3 ಇಂಚು ಬೆಳೆಯಬಲ್ಲ ಉಸರವಳ್ಳಿಗಳಿಂದ ಹಿಡಿದು 27 ಇಂಚು ಉದ್ದ ಬೆಳೆಯುವ ಊಸರವಳ್ಳಿಗಳೂ ಇವೆ.

ಲಿಂಗರಾಜ ಹೆಚ್.ಸಿ. ಮೈತ್ರಯ ಬಳಗ, ಅರಸೀಕೆರೆ.
ಫೋಟೋ: ಅಶೋಕ್. ಮೈತ್ರಯ ಬಳಗ, ಅರಸೀಕೆರೆ.

No comments:

Post a Comment