Sunday, February 12, 2012

Francolinus Pondicerianus - The Farmers Friend

ಕೃಷಿಯಲ್ಲಿ ಕೀಟ ನಿಯಂತ್ರಕ ಚಿಟ್ಟುಕೋಳಿಗಳು
   
ಭಾರತದ ಕೃಷಿ  ಸಂದರ್ಭದಲ್ಲಿ  ಕೀಟಗಳು ಅಸಂಖ್ಯ, ನಾನಾ ವಿಧ ಹಾಗೂ ಶೀಘ್ರ ಪುನರುತ್ಪತ್ತೀ ಶೀಲವಾದದ್ದು. ಇವುಗಳು ಬೆಳೆ ಬೆಳೆಯುವ ಹಾಗು ಇಳುವರಿ ಸಮಯದಲ್ಲಿ ಕೊಡುವ ಉಪಟಳದ ಪರಿಣಾಮ ವಿಪರೀತವಾದದ್ದು. ಇಂತಹುಗಳನ್ನು ನೈಸರ್ಗೀಕವಾಗಿ ನಿಯಂತ್ರಿಸುವ ಕೀಟಹಾರಿ ಪಕ್ಷಿಗಳ ಪಾತ್ರ ಬಹುಮುಖ್ಯವಾದದ್ದು ಹಾಗೂ ಅಷ್ಟೇ ಅನಿವಾರ್ಯಕೂಡ. ಇಂತಹ ವೈವಿಧ್ಯಮಯ ಪಕ್ಷಿ ಸಂಕುಲಗಳು ಮರೆಯಲ್ಲಿದ್ದುಕೊಂಡೆ ಎಲೆ, ಪೊದೆಗಳಡಿ, ತರಗೆಲೆಗಳ ನಡುವೆ ಅಡಗಿರುವ ಕೀಟಗಳನ್ನು ಹಿಡಿದು ತಿಂದು ಬದುಕುತ್ತವೆ. ಇಂತಹ ಪಕ್ಷಿಗಳ ಸಾಲಿನಲ್ಲಿ ಬರುವ, ಕೀಟಗಳ ಸಂಖ್ಯೆಗಳನ್ನು ನಿಯಂತ್ರಿಸುತ್ತಾ , ನಿಸರ್ಗದ ಜೀವ ವೈವಿಧ್ಯದ ಅಪೂರ್ವ ಕೊಂಡಿಯಾಗಿರುವ ಹಕ್ಕಿಗಳೇ ಈ ಫ್ರಾಂಕೊಲಿನ್ (ಗೋಜಲಕ್ಕಿ) ಪಕ್ಷಿಗಳು. . . !!

ಸಾಮಾನ್ಯವಾಗಿ ಹಳ್ಳಿಯ ಹೊರಗೆ, ಹೊಲಗಳಲ್ಲಿ, ಪೊದೆಗಳ ನಡುವೆ, ಹುಲ್ಲುಗಾವಲಿನ ಪ್ರದೇಶ ಅಥವ ಒಣ ಕುರುಚಲು ಕಾಡುಗಳಲ್ಲಿ ನಮ್ಮ ದಾರಿಗೆ ಅಡ್ಡಲಾಗಿ ಒಮ್ಮೆಲೆ ಫುರ್ರೆಂದು ಹಾರಿ, ಗಾಬರಿ ಹಟ್ಟಿಸುವ ಈ ಕಾಡಿನ ಹಕ್ಕಿಗಳೆ  ಚಿಟ್ಟು ಕೋಳಿಗಳು. ಇವುಗಳನ್ನು ಗೊಜಲಕ್ಕಿ, ಕವುಜಲು ಹಕ್ಕಿ ಎಂದೂ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ‘ಗ್ರೇ ಫ್ರಾಂಕೊಲಿನ್’ (Grey francolin) ಎಂದು ಕರೆಯುತ್ತಾರೆ.  ಮುಂಚೆ ಇವುಗಳನ್ನು ‘Jungle Partridges ’  ಎಂದೂ  ರೆಯುತ್ತಿದ್ದರು.  ಇದರ ವೈಜ್ಞಾನಿಕ ನಾಮಧೇಯ“Francolinus pondicerians ”.

ಚಿತ್ರ 1 ಫ್ರಾಂಕೊಲಿನ್ (ಗೋಜಲಕ್ಕಿ) ಇಂಟರ್‍ನೆಟ್ ಮೂಲ
 
ದುಂಡಗಿನ ದೇಹದ ಈ ಹಕ್ಕಿಯ ಬಣ್ಣ ತೆಳು ಕಂದು. ಅಲ್ಲಲ್ಲಿ ಕಡು ಕಂದು ಬಣ್ಣದ ಚುಕ್ಕೆಗಳಿವೆ. ಹಣೆ ಮತ್ತು ಕೆನ್ನೆಯು ಕೆಂಪು ಕಂದು ಬಣ್ಣದಿಂದ ಕೂಡಿದ್ದು, ಕಂದು ಬಣ್ಣದ ಪುಟ್ಟ ಬಾಲವಿದೆ. ಗಂಡು ಮತ್ತು ಹೆಣ್ಣುಗಳೆರಡು ನೋಡಲು ಒಂದೇ ರೀತಿ ಕಾಣುತ್ತವೆ. ಭಾರತದಲ್ಲಿ ಮುಖ್ಯವಾಗಿ ನಾಲ್ಕು ಪ್ರಭೇಧಗಳಿರುವ ಇವು 500 ವೀ ಎತ್ತರದ ಹಿಮಾಲಯ ಪ್ರಾಂತ್ಯದಿಂದ ಹಿಡಿದೂ ದಕ್ಷಿಣ ಭಾರತದ ತನಕ ಎಲ್ಲಾ ಒಣ ಶುಷ್ಕ ಪ್ರದೇಶಗಳಲ್ಲಿ ಕಂಡು ಬರುತ್ತವೆ. ನಮ್ಮ ಹಳ್ಳಗಳು, ಹೊಲಗಳ ಬಳಿ, ಪೊದೆಗಳಲ್ಲಿ ಆಹಾರ ಹುಡುಕುವ ಇವು ಗೆದ್ದಲು ಹುಳುಗಳನ್ನು ಹುಡುಕಿ ಹೆಕ್ಕಿ ತಿನ್ನುತ್ತವೆ. ಗೆದ್ದಲು ಹುಳುಗಳೆಂದರೆ ಈ ಹಕ್ಕಿಗಳಿಗೆ ಪಂಚಪ್ರಾಣ . ಹೀಗಾಗಿ ನಾಡಿನಲ್ಲಿ ಗೆದ್ದಲು ಹುಳುಗಳ ಸಮತೊಲನ ಕಾಯ್ದುಕೊಳ್ಳುವಲ್ಲಿ ಚಿಟ್ಟು ಕೋಳಿಗಳ ಪಾತ್ರ ಮಹತ್ವವಾದದ್ದು.
  
  ಚಿತ್ರ 2: ಬೇಟೆಗಾರರ ನಾನ ನಮೂನೆಯ ಬಲೆಗಳು ಚಿತ್ರ: ಮನೋಹರ್ ಪಟೇಲ್ï
ಮುಂಜಾನೆ ಹಾಗೂ ಸಂಜೆಯ ಸಮಯದಲ್ಲಿ ಈ ಚಿಟ್ಟು ಕೋಳಿಗಳ ಕೂಗು ವಿಶಿಷ್ಟವಾಗಿ ಕೇಳಿಸುತ್ತದೆ .“ಕಿಕೀಂ,,ಕೂಂ.. ಕಿಕೀಂ,,ಕೂಂ ಕಿಕೀಂ,, ಕೂಂ” ಅಥವ “ತಿತೀಥರ್.. ತಿತೀಥರ್.. ತಿತೀಥರ್” ಎಂಬ ಕೂಗು ಇಡಿ ಕಾಡನ್ನೆ ಮಾರ್ಧನಿಸುವಂತೆ ಮಾಡುತ್ತವೆ. ಒಮ್ಮೊಮ್ಮೆ ಕಾಡಿನಲ್ಲಿ ದೊಡ್ಡ ಪ್ರಾಣಿಗಳ ಸಂಚಾರವಾದಾಗ, ಪೊದೆಗಳಿಂದ ಪೊದೆಗಳಿಗೆ ಹಾರುವ ಇವುಗಳ ರೆಕ್ಕೆ ಬಡಿತದ ಸದ್ದನ್ನೇ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಈ ಹಕ್ಕಿಗಳು ಹಾರುವುದಕ್ಕಿಂತ ಹಚ್ಚು ಓಡುತ್ತವೆ. ಅವಶ್ಯವಿದ್ದಾಗ ಮಾತ್ರ ಪಟಪಟನೆ ರೆಕ್ಕೆ ಬಡಿದು ಹಾರಿ ನಂತರ ಸ್ವಲ್ಪ ದೂರ ತೇಲಿ ಕಣ್ಮರೆಯಾಗುತ್ತವೆ. ಏಪ್ರಿಲ್ ಮಾಸ ದಿಂದ ಸೆಪ್ಟೆಂಬರ್ ಮಾಸದ ತನಕ ಇವು ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡುವಲ್ಲಿ ತೊಡಗುತ್ತವೆ. ಕಡ್ಡಿ, ಹುಲ್ಲು ಗಳನ್ನು ಸೇರಿಸಿ ನೆಲದ ಮೇಲೆಯೆ ಕಾಣದ ಹಾಗೆ ಗೂಡು ಕಟ್ಟಿ ಅದರಲ್ಲಿ 4-6 ಮೊಟ್ಟೆಗಳನ್ನಿಡುತ್ತವೆ.

avÀæ 3: ¨ÉÃmÉUÁgÀ vÁ£ÀÄ ºÉuÉzÀ §¯ÉAiÉÆA¢UÉ 
avÀæ: ªÀÄ£ÉÆúÀgï ¥ÀmÉïï


ಪೂರ್ವ ಪಾಕಿಸ್ತಾನ, ಉತ್ತರ ಭಾರತದ ಕಡೆ ಇವುಗಳನ್ನು ಹಿಡಿದು ಪಳಗಿಸಿ, ಅವುಗಳ ನಡುವೆ ಕಾದಾಟವೇರ್ಪಡಿಸುತ್ತಿದ್ದರು.ಇಂತಹ ಪಕ್ಷಿಗಳಿಗೆ ಹಲವು ರೀತಿಯ ಬೇಟೆಗಾರರಿಂದ ಉಪದ್ರವವಿದೆ. ನಾಯಿ, ಕಾಡು ಬೆಕ್ಕು, ಬೇಟೆಗಾರ ಮನುಷ್ಯ ಇತ್ಯಾದಿ. ಮೇಲಾಗಿ ಹೊಲಗಳಲ್ಲಿ ಸಿಂಪಡಿಸುವ ಕೀಟನಾಶಕಗಳಿಂದ ಇವುಗಳ ಸಂತತಿಗೆ ಸಂಚಕಾರ ಬಂದೊದಗಿದೆ. ಮುಖ್ಯವಾಗಿ ಮನಷ್ಯ ಬೇಟೆಗಾರ (ಅಲೆಮಾರಿಗಳು) ಇವುಗಳನ್ನು ಬಂದೂಕು ಬಳಸದೆ , ಕಲ್ಪಿಸಿಕೊಳ್ಳಲು ಸಾಧ್ಯವಾದ ಎಲ್ಲಾ ನಮೂನೆಯ ಬೇಟೆಯ ಸಾಧನಗಳನ್ನು ಪರಿಣಿತಿಯಿಂದ ತಯಾರು ಮಾಡಿ, ಚಿಟ್ಟು ಕೊಳಿಗಳನ್ನು ಗುಂಪುಗಳಲ್ಲಿ ಹಿಡಿಯಲು ನಿಪುಣರಾಗಿರುತ್ತಾರೆ. ಜೊತೆಗೆ ಪಳಗಿಸಿದ ಚಿಟ್ಟು ಕೊಳಿಯೊಂದರಿಂದ ಅಣಕು ಕೂಗು ಕೂಗಿಸಿ, ಬೇರೆ ಚಿಟ್ಟು ಕೋಳಿಗಳನ್ನು ಬಳಿಗೆ ಬರುವಂತೆ ಮಾಡಿ, ದಾರದ/ತಂತಿಯ ಬಲೆಗಳನ್ನು ಬಳಸಿ ಇವುಗಳನ್ನು ಹಿಡಿಯುತ್ತಾರೆ. ಇದು ಹೀಗೆ ಮುಂದುವರೆದರೆ ಗೆದ್ದಲು, ಗೊದ್ದ, ಕೆಂಜಿಗೆ, ಇರುವೆಗಳನ್ನು ನಿಯಂತ್ರಿಸುವಲ್ಲಿ ಪರಿಣಾವiಕಾರಿ ಪಾತ್ರವಹಿಸಿರುವ ಈ ಕೃಷಿ ಮಿತ್ರ ಪಕ್ಷಿಗಳು ಶಾಶ್ವತವಾಗಿ ನಮ್ಮಿಂದ ದೂರವಾಗಿ ಬಿಡುತ್ತದೆ. ಇವಗಳ ಸಂರಕ್ಷಣೆಗಾಗಿನ ಕೂಗಿಗೆ ಎರಡು ಶತಮಾನಗಳಾಗಿದ್ದು ಇತ್ತೀಚಿನ ದಿನಗಳಲ್ಲಿ ಅದು ಕ್ಷೀಣಿಸಿದೆ.

        
ಲಿಂಗರಾಜ ಹೆಚ್. ಸಿ
ಮೈತ್ರಯ ಬಳಗ

   

No comments:

Post a Comment