Wednesday, April 17, 2013

ಕರ್ನಾಟಕದಲ್ಲಿ ಸಾರ್ವಜನಿಕರ ಸ್ವತ್ತಾಗಿ ಕರೆಗಳ ವಿವೇಚನಾತ್ಮಕ ಬಳಕೆ, ಪಾಲನೆ, ರಕ್ಷಣೆ, ಪುರ್ನಬಳಕೆ ಹಾಗು ಯೋಗ್ಯವಾದ ಆಡಳಿತ ಕುರಿತು :

ಕೆರೆಗಳು ನಮ್ಮ ಸಾರ್ವಜನಿಕ ಸ್ವತ್ತುಗಳು :

ಭಾರತೀಯ ಸಂವಿದಾನದ 39(ಬ)2, 48ಎ3 ಮತ್ತು 51ಎ (ಜಿ)4 ಪರಿಚ್ಛೆದಗಳನ್ನು ಆಧರಿಸಿ ಇ ಎಸ್ ಜಿಯು  ಕಾನೂನಿನ ವ್ಯಾಖ್ಯಾಯಲ್ಲಿ ಕೆರೆಗಳು ಸಾರ್ವಜನಿಕ ಸ್ವತ್ತುಗಳು ಹೇಗಾಗುತ್ತವೆ ಎಂದು ತಿಳಿಸಲು ಯತ್ನಿಸುತ್ತದೆ.  ಇದಲ್ಲದೆ ಈ ಪ್ರಕ್ರೀಯೆಯು ಜಲಾನಯನ ಪ್ರದೇಶಗಳ ಸಂವಿಧಾನಾತ್ಮಕ ನಿರ್ವಹಣೆ, ಆಡಳಿತ ಹಾಗು ಸ್ವಾಯತ್ತಯುತವಾದ ಬಳಕೆಗೆ ಪೂರಕವಾಗಿ ನಿಲ್ಲುವ 1992ರ ಸಂವಿಧಾನ ವಿಧಿ(ಪಂಚಾಯತ್ ರಾಜ್ ಗಳಿಗೆ ಮಾನ್ಯತೆ ನೀಡಿದ 73ನೇ ತಿದ್ದುಪಡಿ), ಸಂವಿಧಾನ ವಿಧಿ 1992 (ನಗರ ಸ್ಥಳೀಯ ಸಂಸ್ಥೆಗಳನ್ನು ಮಶನ್ಯತೆ ಮಾಡಿದ 74ನೇ ತಿದ್ದುಪಡಿ) ಮತ್ತು ಇತ್ತೀಚಿನ ಪರಿಶಿಷ್ಟ ವರ್ಗಗಳು ಮತ್ತು ಇತರೆ ಸಾಂಪ್ರದಾಯಿಕ ಕಾಡುವಾಸಿಗಳ ವಿಧಿ 2006 (ಕಾಡಿನ ಹಕ್ಕುಗಳನ್ನು ಗುರುತಿಸುವ)  ಕಾಯಿದೆಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಇ ಎಸ್ ಜಿಯ ಸಮರ್ಥನೆಯ ಈ ಪ್ರಯತ್ನಗಳು ಕೆರೆಗಳ ವಿವೇಚನಾತ್ಮಕ ಬಳಕೆ, ಪಾಲನೆ, ರಕ್ಷಣೆಗಾಗಿ ಇರುವ ಪ್ರಗತಿಪರವಾದ ನ್ಯಾಯಾಲಯದ ನಿರ್ಣಯಗಳನ್ನು ಎತ್ತಿಹಿಡಿಯಲು ಸಹಕಾರಿಯಾಗಿವೆ. ಇವುಗಳಲ್ಲಿ ಮುಖ್ಯವಾದವು ಜಗ್‍ಪಾಲ್ ಸಿಂಗ್ ಗಿs ಪಂಜಾಬ್ ರಾಜ್ಯ ನಿರ್ಣಯದಲ್ಲಿ ಉಚ್ಚನ್ಯಾಯಾಲಯವು ನ್ಯಾಯಾಂಗಗಳಲ್ಲಿ ಈ ಸಾರ್ವಜನಿಕ ಸ್ವತ್ತುಗಳ ಬಗ್ಗೆ ಬಹುವ್ಯಾಪಕವಾಗಿ ಹರಡಿರುವ ಅಜಾಗರೂಕತೆಯನ್ನು ಗುರುತಿಸಿದೆ. ತನ್ನ ಪ್ರತಿಯೊಂದು ಪ್ರಯತ್ನದಲ್ಲಿಯೂ ಭಿನ್ನ ಭಿನ್ನ ಬೌಗೋಳಿಕ ಪ್ರದೇಶದಲ್ಲಿ ಸಮುದಾಯಗಳು ಸಮಾಜೋ-ಆರ್ಥಿಕ, ಸಾಂಸ್ಕøತಿಕ, ರಾಜಕೀಯ ಹಾಗು ಧಾರ್ಮಿಕ ಅಂಶಗಳಿಂದ ಈ ಜಲಾನಯನ ವ್ಯವಸ್ಥೆಗಳೊಂದಿಗೆ ಬಾಂದವ್ಯವನ್ನು  ಹೊಂದಿರುತ್ತವೆ ಎಂದು ಇ ಎಸ್ ಜಿ ಯು ಗುರುತಿಸುತ್ತದೆ. 

ಈ ಸನ್ನಿವೇಶದಲ್ಲಿ ಈ ಕೆರೆಗಳು, ಕಾಲುವೆಗಳು ಸಾರ್ವಜನಿಕರ ಸ್ವತ್ತು ಎಂಬುದರ ಬಗ್ಗೆ ಎಲ್ಲಾ ಸಾರ್ವಜನಿಕರನ್ನು ಸಂವೇದನಾಶೀಲರನ್ನಾಗಿಸುವುದು ಮತ್ತು ಈ ನೀರಿನ ಮೂಲಗಳ ಮಾಲೀಕರು ರಾಜ್ಯವಲ್ಲ ಬದಲಾಗಿ ಅದು ಕೇವಲ ಅದರ ರಕ್ಷಕರೆಂದು ಹೆಚ್ಚು ಒತ್ತು ನೀಡಬೇಕಿದೆ. ಮುಂದುವರಿದ ನಮ್ಮ ಪ್ರಯತ್ನದಲ್ಲಿ ಈ ಜಲಾನಯನಗಳ ಪ್ರಕೃತಿ ವ್ಯವಸ್ಥೆಯ ಗುಣಮಟ್ಟವನ್ನು ರಾಜ್ಯ ಮತ್ತು ಸಮುಷ್ಟಿಯು ಜವಾಬ್ದಾರಿಯುತವಾಗಿ ನಿರ್ವಹಿಸಿ ಪ್ರಸ್ತುತ ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂಬುದರ ಅರಿವನ್ನು ಮೂಡಿಸುವುದಾಗಿದೆ. 

ಇಂತಹ ಒಂದು ನಿರ್ದಾರವು ಈ ಸಾರ್ವಜನಿಕ ಸ್ವತ್ತುಗಳು ಯಾಕಾಗಿ, ಮುಖ್ಯವಾಗಿ ನಗರ ಪ್ರದೇಶಗಳಲ್ಲಿ, ನಿರ್ಲಕ್ಷಿತವಾದವು ಎಂಬ ಕಾರಣಗಳನ್ನು ಹುಡುಕುತ್ತಾ ಹಾಗೆಯೇ ಇವತ್ತಿನ ಹಾಗು ಮುಂದಿನ ಪೀಳಿಗೆಯವರಿಗಾಗಿ ಪರಿಷ್ಕರಿಸಲು ಯಾವ ಪ್ರಯತ್ನಗಳನ್ನು ಮಾಡಬೇಕೆಂಬ  ಹುಡುಕಾಟದಿಂದ  ಬಂದುದಾಗಿದೆ.  ಈ ಜಲಾನಯನ ಭಾಗಗಳನ್ನು ಸ್ಥಳೀಯ ಸಮುದಾಯಗಳಿಗೆ ಯಾವ ಆಡಳಿತಾತ್ಮಕ ಹಾಗು ನಿರ್ವಾಹಕ ಸಾಮಥ್ರ್ಯವನ್ನು ಒದಗಿಸುವುದರಿಂದ ಅವರ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಮತ್ತು ತಮ್ಮ ಸಮಾಜೋ-ಆರ್ಥಿಕ, ಸಾಂಸ್ಕøತಿಕ ಹಾಗು ಪ್ರಾಕೃತಿಕ ಕಾರ್ಯಗಳಿಗೆ ಅವಕಾಶ ಕಲ್ಪಿಸಿಕೊಳ್ಳಬಲ್ಲರು ಎಂಬುದರ ಬಗ್ಗೆ ಗಮನ ಹರಿಸಬೇಕಾಗಿದೆ. 

ಕಳೆದ ಒಂದು ದಶಕದಲ್ಲಿ ಇಂತಹ ಹಾದಿಯಲ್ಲಿ ಸಾಧನೆಯ ಗತಿಯನ್ನು ಕ್ರಮಿಸಿರುವ ಇ ಎಸ್ ಜಿ ಗೆ ವಿಶ್ವಸಂಸ್ಥೆಯು “ಜೀವಕ್ಕಾಗಿ ನೀರು” ಉತ್ತಮ ಪದ್ದತಿಗಳ 2012ರ ಪುರಸ್ಕಾರವನ್ನು ನೀಡಿದೆ. ಹಾಗೆಯೇ ಇ ಎಸ್ ಜಿಯ ಕೆರೆಗಳ ಉಳಿವಿಗಾಗಿಯ ಪ್ರಯತ್ನಕ್ಕೆ  ಅಂತರಾಷ್ಟ್ರೀಯ ಹಸಿರು ಪ್ರಶಸ್ತಿ, ಲಂಡನ್ ನೀಡುವ 2011 ರ ಉತ್ತಮ ಹಸಿರು ನೀರು ವ್ಯವಸ್ಥಾಪಕ ಚಿನ್ನದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇತ್ತೀಚನ ದಶಕಗಳಲ್ಲಿ ಕೆರೆಗಳ ಬಗ್ಗೆ ಅಸಡ್ಡೆ ಮತ್ತು ನಾಶವನ್ನು ನಿಭಾಯಿಸುವ ಸಮಸ್ಯಗಳು:
ಕೆರೆಗಳು  ಕ್ರಮಬದ್ಧವಾಗಿ ಮತ್ತು ವಾಸ್ತವವಾಗಿ ನಿರ್ಲಕ್ಷಿಸಲ್ಪಡುತ್ತಿರುವ ಪ್ರಸ್ತುತ ಸ್ಥಿತಿಯಿಂದ ವಿಮುಖವಾಗುವುದು ಗಣನೀಯವಾಗಿ ಕಠಿಣವಾಗುತ್ತಿದೆ. ಪ್ರಸ್ತುತ ಸ್ಥಿತಿಗೆ ಮುಖ್ಯ ಕಾರಣಗಳು ಯಾವವೆಂದರೆ:

1. ಕೆರೆಗಳು ಸಾರ್ವಜನಿಕ ಸ್ವತ್ತುಗಳೆಂದು ಎತ್ತಿ ಹಿಡಿಯುವ ಸ್ಪಷ್ಟ ಕಾನೂನಿನ ರಕ್ಷಣೆಯಿಲ್ಲದಿರುವುದು.
2. ಈ ಜಲ ಅಂಗಗಳನ್ನು ಪಾರಂಪರಿಕವಾಗಿ ರಕ್ಷಿಸಿ ನಿರ್ವಹಿಸುತ್ತಿದ್ದ ಸ್ಥಳೀಯ ಸಮುದಾಯ ರಚನೆಗಳ ಸೊರಗುವಿಕೆ.
3. ಸ್ಥಳೀಯ ಹತೋಟಿಗಳನ್ನು ಕಸಿದುಕೊಂಡ ಹೊಣೆಯಿಲ್ಲದ ಸಾರ್ವಜನಿಕ ಪ್ರಭುಗಳು ದುರಾಕ್ರಮಣದಿಂದ ಖಾಸಗಿ ಕಾರ್ಪೊರೇಷನ್ ಸಂಸ್ಥೆಗಳಿಗೆ ದೀರ್ಘಾವಧಿಯ ಭೋಗ್ಯಕ್ಕೆ (ಖಾಸಗೀ ಸಂಸ್ಥೆಗಳು ಸಮರ್ಪಕವಾಗಿ ಕೆರೆಗಳ ರಕ್ಷಣೆ ಮತ್ತು ನಿರ್ವಹಣೆ ಮಾಡಲು ಅನುಕೂಲವಾಗಲೀಯೆಂದು) ನೀಡಿರುವುದು.

ಕೆರೆಗಳ ಖಾಸಗೀಕರಣ ನೀತಿಯನ್ನು ಮೊದಲು ತೊಡಗಿಸಿದ್ದು ಯಾವುದೇ ಅಪೇಕ್ಷೆಯಿಲ್ಲದೆ ಅಸ್ತಿತ್ವಕ್ಕೆ ಬಂದ, ಕರ್ನಾಟಕ ಸರ್ಕಾರದ ಕೆರೆ ಅಭಿವೃದ್ದಿ ನಿಗಮ. ಮೊದಲು ರಚನೆಯಾದಾಗ ಈ ಸಂಸ್ಥೆಯ ಉದ್ದೇಶವಿದ್ದದ್ದು ಕೆರೆಗಳನ್ನು ರಕ್ಷಿಸಿ ಮೋಷಿಸಲು ಸ್ಥಳೀಯ ಸಂಸ್ಥೆಗಳಿಗೆ ಹಾಗು ಸರ್ಕಾರದ ಸಾಮಥ್ರ್ಯವನ್ನು ಕಟ್ಟಿಕೊಳ್ಳಲು ಅವಕಾಶ ನೀಡುವುದಾಗಿತ್ತು. 2002 ರಲ್ಲಿ ಸ್ಥಾಪನೆಯಾಗಿ ಅರಣ್ಯದ ಅಧಿಕಾರಿ ಸಿಬ್ಬಂಧಿಯನ್ನು  ಹೊಂದಿದ್ದ ಈ ಅರೆಸರ್ಕಾರಿ ಸಂಸ್ಥೆಯು ಸರ್ಕಾರಿ-ಖಾಸಗೀ ಸಹಭಾಗಿತ್ವ ಮಾದರಿಯಡಿಯಲ್ಲಿ ಖಾಸಗಿ ಭಾಗೀದಾರಿಕೆಗೆ ಅವಶ್ಯ ಕರ್ತವ್ಯಗಳನ್ನು ನಿರ್ವಹಿಸಲು ಆಹ್ವಾನಿಸಿತು. ಬೆಂಗಳೂರಿನ ನಾಲ್ಕು ಪ್ರಮುಖ ಕೆರೆಗಳನ್ನು ಕೆರೆ ಅಭಿವೃದ್ಧಿ ನಿಗಮವು ನಾಲ್ಕು ಖಾಸಗೀ ಕಾರ್ಪೊರೇಷನ್ ಗಳಾದ ಓಬಿರಾಯ್ಸ್ (ಇಸ್ಟ್ ಇಂಡಿಯಾ ಹೊಟೆಲ್ ಗಳು), ಲುಂಬಿನಿ, ಪಾರ್-ಸಿ ಮತ್ತು ಬಯೋಟ ಗಳಿಗೆ ವಹಿಸಿತು. ಕಡಿಮೆ ಬಾಡಿಗೆ ಗೆ, ವಿಸ್ತರಿಸಬಹುದಾಗಿದ್ದ ಈ ಭೋಗ್ಯವನ್ನು 15 ವರ್ಷಗಳ ಅವಧಿಗೆ ನೀಡಲಾಯಿತು. ಇಂತಹ ಒಂದು ಅವಕಾಶದಿಂದ ಈ ಸಂಸ್ಥೆಗಳು ಹೊಟೆಲ್ ಗಳು, ಉಪಹಾರಗೃಹಗಳು, ಆಹಾರ ಕೋರ್ಟಗಳು, ಜಲ ಪಾರ್ಕಗಳನ್ನು ಒಳಗೊಂಡ ವಾಣಿಜ್ಯ ಸಂಕೀರ್ಣಗಳ ಅಭಿವೃದ್ಧಿಯನ್ನು ತೀವ್ರವಾಗಿ ಮುಂದುವರೆಸಿದವು. ಕುತೂಹಲಕರ ವಿಷಯವೆಂದರೆ ಈ ಕೆರೆಗಳಿಗಾಗಲೇ ರಾಷ್ಟ್ರೀಯ ಕೆರೆ ರಕ್ಷಣಾ ಯೋಜನೆ ಅಥವಾ ನಾರ್ವೆ ಸರ್ಕಾರದ ಧನ ಸಹಾಯದಿಂದ ತಯಾರಾದ ಭಾರತ-ನಾರ್ವೆ ಪರಿಸರ ಕಾರ್ಯಕ್ರಮದಡಿಯಲ್ಲಿ ಅವುಗಳ ರಕ್ಷಣೆಗೆ ಧನ ಸಹಾಯ ನೀಡಲಾಗಿತ್ತು. ಆದ್ದರಿಂದ ಈ ಕೆರೆಗಳನ್ನು ಕೇವಲ ರಕ್ಷಣೆ ಮಾಡಿದ್ದರೆ ಸಾಕಾಗಿತ್ತು, ಅಭಿವೃದ್ಧಿಯ ಅವಶ್ಯಕತೆ ಇರಲಿಲ್ಲ. ಈ ಅಂಶವನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿಡಲಾಯಿತು ಯಾಕೆಂದರೆ ಈ ಒಪ್ಪಂದಗಳು ಕೆರೆಗಳು ನಿರ್ಲಕ್ಷಿಸಲ್ಪಟ್ಟಿದ್ದಾವೆ ಆದ್ದರಿಂದ ಪುರ್ನಬಳಕೆಯನ್ನು ಬಯಸುತ್ತವೆ ಎಂಬ ಪ್ರಶ್ನಾರ್ಹವಾದ ಪೂರ್ವಪಕ್ಷವನ್ನು ಆಧರಿಸಿದ್ದವು. 

ಇ ಎಸ್ ಜಿ ಯು ಇಂತಹ ಬೇಜವಾಬ್ದಾರಿ ಖಾಸಗೀಕರಣ ಮತ್ತು ಕೆರೆಗಳ ವಾಣಿಜ್ಯೀಕರಣದ ವಿರೋಧವಾಗಿ ಸಮರ್ಪಕ ಮಾಹಿತಿ ನೀಡಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಿತು. ಅದರ ಮುಖ್ಯವಾದ ಉದ್ದೇಶವು ಕೆರೆಗಳು ಸಾರ್ವಜನಿಕ ಆಸ್ತಿ ಮತ್ತು ಅವುಗಳ ಲಭ್ಯತೆ, ಪಾಲನೆ ಮತ್ತು ಆಡಳಿತವು ಸಾರ್ವಜನಿಕರ ಹತೋಟಿಯಲ್ಲಿರಬೇಕು ಎಂಬುದು. ಕೆರೆಗಳ ನಿರ್ವಹಣೆಯಲ್ಲಿ ಕಾರ್ಪೊರೇಷನ್ ಗಳ ಭಾಗೀದಾರಿಕೆ ಇರಬೇಕೆಂದಾರೆ ಸಾರ್ವಜನಿಕರ ಹಿತವನ್ನು ಕಾಯುವುದಾದರೆ ಮಾತ್ರವೇ ವಿನಃ ಸಮುದಾಯಗಳನ್ನು ಭಹಿಷ್ಕರಿಸುವ ಅಥವಾ ಅವುಗಳನ್ನು ವಿಪತ್ತಿಗೆ ನೂಕುವಂತಹದ್ದಾಗಿರಬಾರದು. ಈ ಆಲೋಚನೆಗೆ ವ್ಯಕ್ತಿಗಳಿಂದ ಮತ್ತು ಸಂಸ್ಥೆಗಳಿಂದ ಖಾಸಗೀಕರಣದ ನೀತಿಯಿಂದ ಉತ್ತಮವಾದ ಪ್ರತಿಕ್ರೀಯೆ ದೊರೆಯಿತು. ಮಾದ್ಯಮಗಳ ಸಹಕಾರವೂ ಇತ್ತು. ಆದರೆ ಸರ್ಕಾರ ತನ್ನ ನೀತಿಯನ್ನು ಹಿಂತೆಗೆದುಕೊಳ್ಳಲು ಒಪ್ಪಲಿಲ್ಲ. ಬದಲಾಗಿ ಇದೇ ಮಾದರಿಯನ್ನು ಬೆಂಗಳೂರಿನ ಇನ್ನೂ ಅನೇಕ ಕೆರೆಗಳಿಗೆ ಮತ್ತು ಉಳಿದ ನಗರ ಪ್ರದೇಶಗಳಿಗೆ ವಿಸ್ತರಿಸಲು ಹಠಹಿಡಿದು ಮುಂದಾಯಿತು. ಇದೇ ಮಾದರಿಯು ಗುಜರಾತಿನ ಸರ್ಕಾರದ ಮನಸೆಳೆದಿದೆ. ಈ ಸಂಕುಚಿತ ಮಾದರಿಯು ಭಾರತದ ಅನೇಕ ಭಾಗಗಳನ್ನು ಪ್ರೇರೇಪಿಸುತ್ತಿದೆ. ಕೆರೆಗಳು ಸಾರ್ವಜನಿಕರ ಆಸ್ತಿ ಎಂಬ ವಿಚಾರಕ್ಕೆ ವಿಪತ್ತು ಬಂದಿದೆ. 

ಕೆರೆಗಳ ರಕ್ಷಣೆಗಾಗಿ ಇ.ಎಸ್.ಜಿ ಯ ಸಾರ್ವಜನಿಕ ಹಿತಾಸಕ್ತಿ ದಾವೆ :

ಖಾಸಗೀಕರಣದ ಮಾದರಿಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿ ಇ.ಎಸ್.ಜಿ ಯು 2008ರಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸಲ್ಲಿಸಿತು. ತನ್ನ ದಾವೆಯಲ್ಲಿ ಸರ್ಕಾರಗಳು ಇಂತಹ ಮಾದರಿಯನ್ನು ಅವಲಂಬಿಸಿದರೆ ಅದು ಅನ್ಯಾಯವಷ್ಟೇ ಅಲ್ಲ ಬದಲಾಗಿ ಸ್ಥಳೀಯ ಸಮುದಾಯಗಳಿಗೆ ಕೆರೆ ಪ್ರವೇಶದ ಹಕ್ಕನ್ನು ನಿರ್ಬಂಧಗೊಳಿಸುವುದಲ್ಲದೆ, ಈ ಜಲಾನಯನ ಪರಿಸರ ವ್ಯವಸ್ಥೆಯ ಜೀವ ವೈವಿದ್ಯತೆಯನ್ನು ನಾಶಮಾಡುತ್ತದೆ. ವಿವಿಧ ಸಮುದಾಯಗಳಿಗೆ ಜೀವನ ನಿರ್ವಹಣೆಯ ಅವಕಾಶಗಳನ್ನು ಕಸಿದುಕೊಳ್ಳುತ್ತದೆ. ತನ್ನ ದಾವೆಯಲ್ಲಿ ಕೆರೆಗಳನ್ನು ವಿವೇಚನೆಯಿಂದ ಬಳಸುವಂತೆ ಅವುಗಳ ರಕ್ಷಣೆಗಾಗಿ ಸೂಕ್ತ ಯೋಜನೆಯನ್ನು ರೂಪಿಸಿ ಇಂದಿನ ಮತ್ತು ಮುಂದಿನ ಪೀಳಿಗೆಯ ಅವಶ್ಯಕತೆಗಾಗಿ ರಕ್ಷಿಸುವಂತೆ ಸರ್ಕಾರಗಳು ಯೋಜನೆ ರೂಪಿಸುವಂತೆ ನಿರ್ದೇಶಿಸಲು ನ್ಯಾಯಾಲಯವನ್ನು ಕೇಳಿಕೊಂಡಿತು.

ದೀರ್ಘವಾಗಿ ಈ ದಾವೆಯನ್ನು ಆಲಿಸಿದ ನ್ಯಾಯಾಲಯವು ಎಲ್ಲಾ ಪಕ್ಷದ ಒಟ್ಟಾಭಿಪ್ರಾಯವನ್ನು ಪರಿಗಣಿಸಿ ಖಾಸಗೀಕರಣದ ಪ್ರಕ್ರೀಯೆಯಗೆ ಮಧ್ಯಂತರ ಆದೇಶದ ಮೂಲಕ ಸ್ಟೇ ನೀಡಿತು. ನಂತರ ಮುಖ್ಯ ಪೀಠವು ಸರ್ಕಾರಿ ವಕೀಲರಿಗೆ  ನಗರದ ಮತ್ತು ರಾಜ್ಯದ ಕೆರೆ ಹಾಗು ಉದ್ಯಾನವನಗಳ ಬಗ್ಗೆ ಸರ್ಕಾರದ ಅಭಿಪ್ರಾಯವನ್ನು ವಿಚಾರಿಸುವಂತೆಯೂ ಹಾಗು ಯಾವುದೇ ತರಹದ ವಾಣಿಜ್ಯ ಚಟುವಟಿಕೆಗಳು ಇವುಗಳ ಪರಿಸರ ಹಾಗು ಜೀವನ ರೀತಿಗೆ ಹಾನಿಯಾಗದಂತೆ ಹಾಗು ಸಾರ್ವಜನಿಕರಿಗೆ ಲಭ್ಯವಿರುವಂತೆ ಭವಿಷ್ಯದಲ್ಲಿ ಕ್ರೀಯಾತ್ಮಕವಾಗಬೇಕೆಂದು ನಿರ್ದೇಶಿಸಿತು.

ಈ ಮೊಕದ್ದಮೆಯನ್ನು ವಿಚಾರಿಸುವ ಸಂದರ್ಭದಲ್ಲಿ ನ್ಯಾಯಾಲಯವು ವಿವಾದಾಂಶದ ಕ್ಲಿಷ್ಟತೆಯನ್ನು ಗಮನಿಸಿ, ಕರ್ನಾಟಕದ ಅರಣ್ಯ ಮುಖ್ಯ ರಕ್ಷಕರಿಗೆ (ಪಿ.ಸಿ.ಸಿ.ಎಪ್) ಖಾಸಗೀಕರಣಗೊಂಡಿರುವ ಕೆರೆಗಳ ಕುರಿತ ಪರಿಸ್ಥಿತಿಯನ್ನು ಕುರಿತು ನ್ಯಾಯಾಲಯಕ್ಕೆ ವರದಿ ನೀಡಬೇಕೆಂದು ತಿಳಿಸಿತು. ಪಿ.ಸಿ.ಸಿ.ಎಪ್ ವರದಿಯು ಎಲ್ಲಾ ಕೆರೆಗಳೂ ಪುರ್ನಬಳಕೆಯ ಸ್ಥಿತಿಯಲ್ಲಿದ್ದು ಸಮರ್ಪಕ ಪಾಲನೆ ಮಾಡಿದರಷ್ಟೇ ಸಾಕು ಎಂದು ಅಭಿಪ್ರಾಯ ಪಟ್ಟಿತ್ತು. ಪರಿಣಾಮವಾಗಿ ಖಾಸಗೀ ಪಕ್ಷಗಳು ಕೆಲಸ ಶುರು ಮಾಡಿದ್ದ ಮೂರೂ ಕೆರೆಗಳಲ್ಲಿ (ಹೆಬ್ಬಾಳ, ನಾಗಾವಾರ ಮತ್ತು ವೆಂಗಯ್ಯ ಕೆರೆ) ಪ್ರಕೃತಿ ಜೀವನ ರೀತಿ ಹಾಗು ಸ್ಥಳೀಯ ಸಮುದಾಯಗಳಿಗೆ ವಾಣಿಜ್ಯೀಕರಣ ಹಾಗು ಖಾಸಗೀಕರಣವು ಋಣಾತ್ಮಕವಾಗಿ ಪ್ರಭಾವಿಸಿದ್ದರಿಂದ ವರದಿಯು ಸರ್ಕಾರವನ್ನು  ತೀವ್ರವಾಗಿ ವಿರೋಧಿಸಿತು. ಈ ವರದಿಯನ್ನು ಆಧರಿಸಿ ಉಚ್ಚನ್ಯಾಯಾಲಯವು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಎಲ್ಲಾ ಪಕ್ಷದವರ ಕಾಳಜಿಯನ್ನು ಉದ್ದೇಶದಲ್ಲಿಟ್ಟುಕೊಂಡು ಪರಿಸ್ಥಿತಿಯನ್ನು ಯಥಾಸ್ಥಿತಿಗೆ ತರಲು ಬೇಕಾದ ಯೋಜನೆಯನ್ನು ರೂಪಿಸುವಂತೆ ಕೇಳಿಕೊಂಡಿತು. ಈ ಪ್ರಕ್ರೀಯೆಯಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿಕೊಂಡ ಇ.ಎಸ್.ಜಿಯು ಕೆರೆಗಳು ಸಾರ್ವಜನಿಕ ಆಸ್ತಿಗಳು, ಜೀವವೈವಿಧ್ಯತೆಯಲ್ಲಿ ಶ್ರೀಮಂತವಾಗಿವೆ, ಜೀವನೋಪಾಯಕ್ಕೆ ಆಧಾರಗಳಾಗಿವೆ, ಹಾಗು ಲಕ್ಷಾಂತರ ಜನರಿಗೆ ನೀರಿನ ಸುರಕ್ಷತೆಯನ್ನು ದೊರಕಿಸಿಕೊಟ್ಟಿವೆ ಎಂದು ಸ್ಫುಟವಾಗಿ ವಾದ ಮಂಡಿಸಿತು. ಆದರೆ ಸರ್ಕಾರವು ಪಿ.ಸಿ.ಸಿ.ಎಪ್ ವರದಿಯನ್ನು ನಿರ್ಲಕ್ಷಿಸಿ ತನ್ನ ಖಾಸಗೀಕರಣದ ನೀತಿಯನ್ನು ಸರಿಯೆಂದು ವಾದಿಸಿದ್ದಲ್ಲದೆ, ಖಾಸಗೀ ಭಾಗೀದರಿತ್ವವಿಲ್ಲದೆ ನಗರ ಪ್ರದೇಶದಲ್ಲಿ ಕೆರೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲದೇ ಇರುವದರಿಂದ ಕೆರೆಗಳನ್ನು ಕಳೆದು ಕೊಳ್ಳಬೇಕಾಗುತ್ತದೆ ಎಂದು ವಾದಿಸಿತು.

ಕೆರೆಗಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಗುರುತಿಸಲು ನ್ಯಾ|| ಎನ್.ಕೆ. ಪಾಟೀಲ್ ಸಮಿತಿ ರಚನೆ :

ಪರಿಸ್ಥಿತಿಯ ಅನಿವಾರ್ಯತೆಯಿಂದ ಕರ್ನಾಟಕ ಉಚ್ಚ ನ್ಯಾಯಾಲಯವು ತನ್ನ ಮುಖ್ಯ ನ್ಯಾಯಾಧೀಶರಾದ ನ್ಯಾ|| ಎನ್.ಕೆ. ಪಾಟೀಲ್‍ರವರ ಅಡಿಯಲ್ಲಿ ಕೆರೆಗಳ ಹಾಗು ಜಲಾನಯನ ಪ್ರದೇಶಗಳ ನಿರ್ವಹಣೆ ಮತ್ತು ಪಾಲನೆಗೆ ನೇರವಾಗಿ ಸಂಬಂಧಿಸಿದ ಒಂಬತ್ತೂ ವಿಭಾಗಗಳ ಮುಖ್ಯಸ್ಥರನ್ನು ಒಳಗೊಂಡ ಸಮಿತಿಯನ್ನು ರಚಿಸಿತು. ಅನೇಕ ಸಭೆಗಳನ್ನು ಸೇರಿದ ನಂತರ “ಬೆಂಗಳೂರು ನಗರದ ಕೆರೆಗಳ ರಕ್ಷಣೆ” ವರದಿಯನ್ನು ಸಲ್ಲಿಸಿತು. ಈ ವರದಿಯನ್ನು ತಯಾರಿಸುವಲ್ಲಿ ಇ.ಎಸ್.ಜಿಯ ಪಾತ್ರವು ಪ್ರಮುಖವಾದದ್ದು.

ಬೆಂಗಳೂರಿನ ಕೆರೆಗಳ ಸ್ಥಿತಿಯ ಬಗ್ಗೆ ನ್ಯಾಯಾಲಯಕ್ಕೆ ಇರುವ ಕಾಳಜಿಯನ್ನು ನ್ಯಾ|| ಎನ್. ಕೆ. ಪಾಟೀಲ್ ಅವರು ತಮ್ಮ ವರದಿಯ ಮುನ್ನುಡಿಯಲ್ಲಿ ಈ ರೀತಿ ಹೇಳುತ್ತಾರೆ:

“ಬೆಂಗಳೂರು ತೀವ್ರವಾದ ವಿಸ್ತರಣೆಯ ಹಾದಿಯಲ್ಲಿದೆ, ಮೆಟ್ರೋ ನಗರದಿಂದ ಮಹಾ ನಗರದೆಡೆಗೆ. ಈ ಪ್ರಕ್ರೀಯೆಯಲ್ಲಿ ತೀವ್ರವಾಗಿ ಆಘಾತಕ್ಕೆ ಒಳಗಾಗಿರುವ ವಲಯವೆಂದರೆ ಈ ಭಾಗದ ಕೆರೆಗಳು, ದುರ್ಬಳಕೆಗೆ ಒಳಗಾಗಿ ಜಲ ಸುರಕ್ಷತೆಗೆ, ಜೀವನ ರೀತಿಗೆ, ವಾತಾವರಣಕ್ಕೆ ಭೀತಿ ಬಂದಿದೆ. 2020ರ ಹೊತ್ತಿಗೆ ಬೆಂಗಳೂರಿನ ಜನಸಂಖ್ಯೆ 120 ಲಕ್ಷಕ್ಕೆ ಹತ್ತಿರವಾಗಲಿದೆ. ಕ್ರೀಯಾತ್ಮಕವಾದ ನಿರ್ವಹಣೆ, ಯೋಜನೆ ಮತ್ತು ನಿರ್ವಹಣಾ ವ್ಯವಸ್ಥೆಯಿಂದ ಮಾತ್ರ ಜಲಸುರಕ್ಷತೆಯ ಸವಾಲನ್ನು ಎದುರಿಸಲು ಹಾಗು ನಗರವನ್ನು ವಾಸಿಸಲು ಯ್ಯೋಗ್ಯವನ್ನಾಗಿಸಲು ಸಾಧ್ಯ.”

ಈ ವರದಿಯು ಕಾಳಜಿಯಿಂದ ಗಮನಿಸುವುದೇನೆಂದರೆ, “ ಕೆರೆಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದರಿಂದಲೇ ಅರೆ-ಬಂಜರು ಪ್ರದೇಶವಾದ ಈ ನಗರವು ಮಹಾನಗರವಾಗಿ ಬೆಳೆಯಲು ಸಾಧ್ಯವಾಯಿತು. ಇಲ್ಲವಾಗಿದ್ದರೆ ಯಶಸ್ವೀ ನಗರವಾಗುವುದರ ಪ್ರಯಾಣ ಯಾವತ್ತೋ ಊನವಾಗಬೇಕಿತ್ತು. ಈ ನಗರಕ್ಕೆ ಕೆರೆಗಳ ಪ್ರಾಮುಖ್ಯತೆಯನ್ನು ಕೆಂಪೇಗೌಡ, ಹೈದರಾಲಿ, ಟಿಪ್ಪು ಆದಿಯಾಗಿ ಬ್ರೀಟೀಷರೂ ಕೂಡಾ ಮನಗಂಡಿದ್ದರು.

ಈ ಭೂಪ್ರದೇಶವನ್ನು ಎಷ್ಟು ಸೃಜಾನಾತ್ಮಕವಾಗಿ ರೂಪಿಸಲಾಗಿತ್ತೆಂದರೆ, 1972ರ ಭಾರತ ಸರ್ವೆಯ ನಕ್ಷೆಯನ್ನು ಆಧರಿಸಿ ಹೇಳುವುದಾದರೆ, ಯಾವುದೊಂದು ಕಣೆವೆಯನ್ನಾಗಲೀ, ಕೊರಕಲ್ಲನ್ನಾಗಲೀ ಉಪೇಕ್ಷಿಸಲಾಗಿರಲಿಲ್ಲ, ಅವುಗಳೆಲ್ಲ ನೀರು ಹರಿದು ಹೋಗಲಿಕ್ಕಾಗಿ ಅಥವಾ ಮಳೆ ನೀರು ಕೊಯ್ಲಿಗಾಗಿ ಬಳಸಲಾಗಿತ್ತು.  ಈ ವ್ಯವಸ್ಥೆಯು ನೀರಿನ ಸುರಕ್ಷತೆಯನ್ನು ಹೆಚ್ಚಿಸಿತ್ತಲ್ಲದೇ, ವ್ಯವಸಾಯಕ್ಕಾಗಿ ಅಥವಾ ತೋಟಗಾರಿಕೆಗಾಗಿ ಅವಕಾಶಗಳನ್ನು ಕಲ್ಪಿಸಿಕೊಟ್ಟಿತ್ತು.

ನೂರಾಮುವತ್ತೇಳು ಪುಟಗಳ ಈ ವರದಿಯಲ್ಲಿ, ನಗರೀಕರಣದ ಪರಿಣಾಮವಾಗಿ ಉಳಿದಿರುವ 386 ಕೆರೆಗಳ ಅಸ್ಥಿತ್ವದೊಂದಿಗೆ ರಾಜಿಯಾಗಿರುವುದು ಅವುಗಳ ಧೃಡತೆಗೆ ಕಂಟಕ ತಂದಿದೆ, 121 ಕೆರೆಗಳ ಸ್ಥಿತಿ ತಿಳಿಯುತ್ತಿಲ್ಲ. ವರದಿಯಲ್ಲಿ ಒಪ್ಪಿಕೊಂಡಿರುವ ಹಾಗೆ 100 ಕೆರೆಗಳು ಮಾಯವಾಗಿವೆ. ಅವುಗಳ ಜಾಗದಲ್ಲಿ ನಗರ ಬಳಕೆಗಳಾದ ಬಸ್ ನಿಲ್ದಾಣಗಳು, ರಸ್ತೆಗಳು, ಲೇಔಟ್ ಗಳು, ತ್ಯಾಜ್ಯ ಸಂಗ್ರಹಗಳಾಗಿ, ಟ್ರಕ್ ನಿಲ್ದಾಣಗಳಾಗಿ ಬದಲಾಯಿಸಿವೆ. ಉಳಿದಿರುವ ಕೆರೆಗಳ ಸ್ಥಿತಿ; ಅತಿಕ್ರಮಣಗೊಂಡಿರುವ, ಮಾಲಿನ್ಯಗೊಂಡಿರುವ, ಉಳಿದುಕೊಂಡಿರುವ ಕೆರೆಯ ಪ್ರಮಾಣ ಹಾಗು ಅದರ ನಿಗಾವಹಿಸುವ ಜವಾಬ್ದಾರಿಯನ್ನು ಯಾರು ಪಡೆದಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ನೀಡಲಾಗಿದೆ. ಈ ಎಲ್ಲಾ ಮಾಹಿತಿಯನ್ನು ಮೊದಲ ಬಾರಿಗೆ ಸಾರ್ವಜನಿಕರಿಗೆ ಲಭ್ಯಗೊಳಿಸಲಾಗಿದೆ. 

ಈ ಪ್ರಕ್ರೀಯೆಯಲ್ಲಿ ಬೆಂಗಳೂರು ಅಭಿವೃದ್ಧಿ ನಿಗಮ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಕರ್ನಾಟಕ ರೆವಿನ್ಯೂ ಇಲಾಖೆ, ಕಿರು ನೀರಾವರೀ ಇಲಾಖೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ನಿಗಮ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕರ್ನಾಟಕ ಹಳ್ಳಿ ಮತ್ತು ನಗರ ಯೋಜನಾ ನಿಗಮ. ಕೆರೆಗಳ ರಕ್ಷಣೆಗೆ ಸಂಬಂಧಿಸಿದಂತೆ ಪ್ರತಿಯೊಂದು ನಿಗಮ ಮಂಡಳಿಗಳಿಗೆ ಸ್ಪಷ್ಟ ಜವಾಬ್ದಾರಿಗಳನ್ನು ವರದಿಯಲ್ಲಿ ನೀಡಲಾಗಿದೆ.

ಕೆರೆಗಳ ರಕ್ಷಣೆ ಮತ್ತು ಪುರ್ನಬಳಕೆಗೆ ವ್ಯಾಪಕ ಪ್ರಯತ್ನಗಳು :

ಈ ಗುರಿಯನ್ನು ಸಾಧಿಸುವ ಸಲುವಾಗಿ ನ್ಯಾ|| ಎನ್. ಕೆ. ಪಾಟೀಲ್ ಸಮಿತಿಯು ಅನೇಕ ಸಲಹೆಗಳನ್ನು ನೀಡಿತು. ತಕ್ಷಣವೇ ಜಾರಿಗೆ ಬರುವಂತೆ ಕೆರೆಗಳು ಮತ್ತು ರಾಜಾ ಕಾಲುವೆಗಳಲ್ಲಿ ಆಗಿರುವ ಒತ್ತುವರಿಗಳನ್ನು ತೆರವು ಗೊಳಿಸುವುದಾಗಿದೆ. ಇದಕ್ಕಾಗಿ ಎಲ್ಲಾ ಕೆರೆ ಕಾಲುವೆಗಳ ಕಾನೂನು ಮಿತಿಯಲ್ಲಿ ಒಳಪಡುವ ಪ್ರದೇಶವನ್ನು ಅಳತೆ ಮಾಡಿ ಗುರುತು ಮಾಡಬೇಕು. ಇಡೀ ಜಲನಾಯನ ಭೂಮಿಯ ರಕ್ಷಿಸಬೇಕು. ವರದಿಯು ಪ್ರಸ್ತಾಪಿಸಿದ ವ್ಯವಸ್ಥೆಯ ಪ್ರಕಾರ, “ಅಳತೆ, ಒತ್ತುವರಿಗಳ ನಿವಾರಣೆ, ಬೇಲಿ ನಿರ್ಮಾಣ, ಒಡ್ಡು ನಿರ್ಮಾಣ, ಪಹರೆ, ಚರಂಡಿ, ರಾಜಾಕಾಲುವೆಗಳಿಗಿರುವ ಅಡೆ-ತಡೆ ಮತ್ತು ಒತ್ತುವರಿಗಳ ನಿವಾರಣೆ, ಒಡ್ಡುಗಳ ರಿಪೇರಿ, ಹೂಳು ತೆಗೆಯುವುದು ಅನಿವಾರ್ಯವಾಗಿ ಆಗಬೇಕಿದೆ. ಅಲ್ಲದೆ, ಕೆರೆಗಳ ಪರಿಷ್ಕರಣೆಯನ್ನು ಮಾಡುವಾಗ  ಕೇವಲ ಕೆರೆಗಳನಷ್ಟೇ ಅಲ್ಲದೇ ಕೆರೆಗೆ ಬರುವ ಮಳೆ ನೀರು ಬಿದ್ದ ಪ್ರದೇಶ ಮತ್ತು ಮಳೆನೀರು ತರುವ ಕಾಲುವೆಗಳ ಪರಿಷ್ಕರಣೆಯೂ ಸೇರಿರುತ್ತದೆ.” ಕೆರೆಗಳಿಗೆ ಯಾವುದೇ ರೀತಿಯಲ್ಲಿ ಚರಂಡಿಯ ನೀರಾಗಲೀ ಅಥವಾ ಯಾವುದೇ ಕಲ್ಮಶವಾಗಲೀ ಸೇರಕೂಡದೆಂದು ವಿಶೇಷವಾಗಿ ತಿಳಿಸಲಾಗಿದೆ. ವರದಿಯಲ್ಲಿ ಯಾವ ಕೆರೆಗಳಲ್ಲಿ ಜೀವವೈವಿದ್ಯತೆಯು ಅಧಿಕವಾಗಿರುತ್ತದೆಯೂ, ಮುಖ್ಯವಾಗಿ ನೀರು ಕೋಳಿಗಳು ವಲಸೆ ಹೋಗುವಂತಹ ಕೆರೆಗಳಿದ್ದರೆ, ತರೀಜಮೀನು (ರಕ್ಷಣೆ, ಪಾಲನೆ)ಕಾಯಿದೆ 2010ರ ಅನ್ವಯ ಪರಿಸರ ರಕ್ಷಣೆ ಕಾಯಿದೆ 1986 ಅಡಿಯಲ್ಲಿ  ಅವುಗಳನ್ನು ರಕ್ಷಿಸತಕ್ಕದ್ದೆಂದು ತಿಳಿಸಲಾಗಿದೆ.

ಕೆರೆಗಳ ರಕ್ಷಣೆ ಮತ್ತು ಜೀರ್ಣೋದಾರ ಹಾಗು ರಕ್ಷಣೆಯಲ್ಲಿ ಸ್ಥಳೀಯ ಸಮುದಾಯಗಳ ಒಳಗೊಳ್ಳುವಿಕೆಯ ಕುರಿತಾಗಿ ವರದಿಯಲ್ಲಿ ಸ್ಥಳೀಯ ವಾಸಿಗಳ ಮತ್ತು ಸ್ವಯಂ ಸೇವಾಸಂಸ್ಥೆಗಳ ನೆರವನ್ನು ಪಡೆಯಬಹುದೆಂದು ಸಲಹೆನೀಡುತ್ತದೆ. ಪಾರಂಪರಿಕ ಕೆರೆ ಬಳಕೆದಾರರಾದ ದೋಬಿಗಳ ಮತ್ತು ಮೀನುಗಾರರ ಆಸಕ್ತಿಗಳನ್ನು ರಕ್ಷಿಸಬೇಕೆಂದು ಹೇಳಿರುತ್ತದೆ.
ನ್ಯಾಯಲಯವು ಮಾರ್ಚ 3, 2011 ರಂದು ವರದಿಯನ್ನು ಒಪ್ಪಿರುತ್ತದೆ. ನ್ಯಾಯಾಲಯವು ಗಮನಿಸಿದ ಹಾಗೆ ವರದಿಯಲ್ಲಿ ಎಲ್ಲಾ ಪಿರ್ಯಾದುದಾರರ ಪ್ರಾರ್ಥನೆಗೆ ಸಾಂತ್ವಾನ ದೊರೆತಿದೆ ಆದರೆ ಕೆರೆಯ ಹೊರಮೈಯಲ್ಲಿ ಈಗಾಗಲೇ ಕಟ್ಟಡಗಳನ್ನು ಕಟ್ಟಿರುವ ಮತ್ತು ಕಟ್ಟುವ ಪ್ರಯತ್ನದಲ್ಲಿರುವ ಭೋಗ್ಯದಾರರ ಹಕ್ಕು ಮತ್ತು ಕರಾರನ್ನು ಕುರಿತಂತೆ ಚರ್ಚೆಗಳು ನಡೆಯ ಬೇಕಿದೆ. ಈ ವಿಷಯವನ್ನು ಗಮನಿಸಿದ ನ್ಯಾಯಾಲಯವು 7 ಜುಲೈ 2011ರಂದು ಖಾಸಗೀಕರಣವೆಂಬ ಕ್ಲಿಷ್ಟ ವಿಷಯದ ಬಗ್ಗೆ ಈ ರೀತಿಯಾಗಿ ನಿಯಮಗಳನ್ನು ತಿಳಿಸಿತು:

ಆಧುನಿಕ ಕಾಲಘಟ್ಟದಲ್ಲಿ ಸರ್ಕಾರಿ-ಖಾಸಗೀ ಹೊಂದಾಣಿಕೆ ಅನಿವಾರ್ಯವೇ ಆದರೂ ಕೆಲವೊಂದು ಮಿತಿಗಳನ್ನು ನ್ಯಾಯಾಲಯವು ಗುರುತಿಸುತ್ತದೆ. ಖಾಸಗೀ ಸಂಸ್ಥೆಯು ಯಾವುದೇ ಆರ್ಥಿಕ ಲಾಭದ ದೃಷ್ಟಿ ಇಲ್ಲದೇ ಸರ್ಕಾರಿ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದರೂ ಸಹ ಸಂಬಂಧಪಟ್ಟ ಖಸಗೀ ವ್ಯಾವಸ್ಥಾಪಕರ ಮನಸ್ಸಿನಲ್ಲಿ ವಾಣಿಜ್ಯ ಆಸಕ್ತಿಗಳಿದ್ದರೆ ಸಾಕು ಸಾರ್ವಜನಿಕ ಆಸಕ್ತಿಗಳು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರಕ್ಕೆ ಹೊರೆಯಾಗದಂತೆ ಅನುಕೂಲವಾದ, ಯುಕ್ತಾಯುಕ್ತವಾದ ನೀತಿಯೊಂದನ್ನು ರೂಪಿಸುವ ಸಲುವಾಗಿ , ಪಿರ್ಯಾದುದಾರರ ಅಹವಾಲುಗಳಿಗೆ ಕಿವಿಕೊಡುವ ಸಲುವಾಗಿ ಹಾಗು ವಾಣಿಜ್ಯ ಭಾಗೀದಾರಿಕೆಯ ಮಿತಿಗಳನ್ನು ವ್ಯಾಖ್ಯಾನಿಸಿಕೊಳ್ಳುವ ಸಲುವಾಗಿ ಸಭೆ ನಡೆಸಲು ಸಮಿತಿಯು ನಿಶ್ಚಯಿಸಿತು.

ಕೆರೆಗಳ ವಾಣಿಜ್ಯೀಕರಣ ಮತ್ತು ಖಾಸಗೀಕರಣ ಒಪ್ಪಿತವಲ್ಲ: ನ್ಯಾ|| ಎನ್. ಕೆ. ಪಾಟೀಲ್

ನ್ಯಾಯಾಲಯದ ನಿರ್ದೆಶನಾನುಸಾರವಾಗಿ ನ್ಯಾ|| ಪಾಟೀಲ್ ಸಮಿತಿಯು ಕೆರೆ ವ್ಯವಸ್ಥೆಯ ಧೀರ್ಘಾವಧಿ ಪೋಷಣೆಗಾಗಿ ರೂಪಿಸಲು ಬೇಕಾದ ನೀತಿಯ ರೂಪುರೇಶೆಗಳನ್ನು ಚರ್ಚಿಸುವ ಸಲುವಾಗಿ 5ಭಾರಿ ಸಭೆ ಸೇರಿತು. ತನ್ನ ವರದಿಯನ್ನು 12 ಅಕ್ಟೋಬರ್ 2011ರಂದು ವರದಿಯನ್ನು ಸಲ್ಲಿಸಿತು. ಖಾಸಗೀ-ಸರ್ಕಾರೀ ಸಹಭಾಗಿತ್ವದ ವಿಷಯವನ್ನು ವ್ಯಾಪಕವಾಗಿ ಉದ್ದೇಶಿಸಿದ ಮೇಲೆ 10 ಸಲಹೆಗಳನ್ನು ನೀಡಿತು. ಅದರಲ್ಲಿ ಮುಖ್ಯವಾದದ್ದು “ ಯಾವುದೇ ಸನ್ನಿವೇಶದಲ್ಲಾದರೂ ಸರಿ ಕೆರೆಗಳ ವಾಣಿಜ್ಯ ದೃಷ್ಟಿಯಿಂದ ದುರುಪಯೋಗವಾಗುವುದನ್ನು ಒಪ್ಪಿಕೊಳ್ಳಲಾಗದು”. ಈ ಸಲಹೆಗೆ ಪೂರಕವಾಗಿ ಸಮಿತಿಯು ಈ ವಿಷಯವನ್ನು ಗಮನಿಸಿತು:

“ಯಾರ ಪಾಲನೆಗೆಂದು ಕೆರೆಗಳನ್ನು ಒಪ್ಪಿಸಲಾಗಿತ್ತೋ ಆ ಖಾಸಗೀ ವ್ಯವಸ್ಥಾಪಕರು ಅಲ್ಲಿನ ಜೀವವೈವಿಧ್ಯವ್ಯವಸ್ಥೆಗಾಗಲೀ, ಜೀವನ ರೀತಿಗಾಗಲೀ ನ್ಯಾಯ ಒದಗಿಸಿಲ್ಲ. “ಲಾಭ ಪ್ರೇರಣೆ” ಯು “ಸಾರ್ವಜನಿಕ ಆಸಕ್ತಿ” ಮತ್ತು “ಸಾರ್ವಜನಿಕ ನಂಬಿP”É ಯನ್ನು ಮೀರಿ ನಿಂತಿದೆ.

“ಯಾವುದೇ ರೀತಿಯ ಸರ್ಕಾರಿ-ಖಾಸಗೀ ಭಾಗೀದಾರಿಕೆಯ ಮಾದರಿಯಲ್ಲಿ ರಾಜ್ಯದ ಪ್ರಕೃತಿ ಸಂಪನ್ಮೂಲಗಳ ನಿರ್ವಹಣೆಯ/ಪಾಲನೆಯ ಅಧಿಪತ್ಯವನ್ನು  ಖಾಸಗೀ ವ್ಯವಸ್ಥಾಪಕರಿಗೆ ವಹಿಸಿದ್ದೇ ಆದರೆ ರಾಜ್ಯ ಮತ್ತು ಅದರ ಸಿಬ್ಬಂದಿಯು ರಾಜ್ಯ ನೀತಿ ಮತ್ತು ಮಾದರಿಯಿಂದ ವ್ಯವಸ್ಥಾಪಕರು ದೂರ ಸರಿಯದಂತೆ ನಿರಂತರವಾಗಿ ನಿಗಾ ಇಟ್ಟಿರಬೇಕಾದ ಅಸಂಬದ್ದ ಸನ್ನಿವೇಶ ಸೃಷ್ಠಿಯಾಗಿರುತ್ತದೆ. ಕೆಲವೊಮ್ಮೆ ರಾಜ್ಯ ಮತ್ತು ಅಧಿಕಾರೀವರ್ಗಕ್ಕೆ ಕಾರ್ಯಸಾಧ್ಯವಾಗುವಂತಹ ಯಾವುದೇ ಪರಿಹಾರವನ್ನು ಸೂಚಿಸಲಾಗದೆ ಸಾರ್ವಜನಿಕರ ಹಿತಾಸಕ್ತಿಯನ್ನು ಮತ್ತು ಪ್ರಕೃತಿ ಸಂಪನ್ಮೂಲಗಳನ್ನು ಬಲಿಕೊಡುತ್ತಲೇ ಖಾಸಗೀ ವ್ಯವಸ್ಥಾಪಕನನ್ನು ಅನ್ಯಾಯವಾಗಿ ಐಶ್ವರ್ಯವಂತನನ್ನಾಗಿ ಮಾಡಲಾಗುತ್ತಿದೆ.

ಈ ತತ್ವಾಧಾರದ ಮೇಲೆ ವರದಿಯು ಸೂಚಿಸುವುದೇನಂದರೆ , “ಬೆಂಗಳೂರಿನ ಸುತ್ತಮುತ್ತ ಇರುವ ಕೆರೆ-ಕಟ್ಟೆಗಳ ಅಭಿವೃದ್ಧಿಗೆ ಖಾಸಗೀಯವರ ಸಹಾಯವನ್ನು ತಳ್ಳಿಹಾಕದೇ ಇದ್ದರೂ ಪ್ರೂತ್ಸಹಿಸುವುದರಲ್ಲಿ ಯಾವುದೇ ನ್ಯಾಯ ಅಥವಾ ಅವಶ್ಯಕತೆ ಇರುವುದಿಲ್ಲ”

ಈ ವರದಿಯಲ್ಲಿ ಯಾವುದೇ ಮುಚ್ಚುಮರೆಯಿಲ್ಲದೇ ತಿಳಿಸಿರುವಂತೆ  ಖಾಸಗೀ ನಿರ್ವಹಣೆಯಲ್ಲಿ ಕೆರೆಗಳು ತಮ್ಮ ಜೀವವೈವಿಧ್ಯತೆಯ ಅವನತಿಯನ್ನು ಕಂಡಿರುತ್ತವೆ. ಖಾಸಗೀಕರಣ ಮತ್ತು ವಾಣಿಜ್ಯೀಕರಣವು ಅಸಮರ್ಥ ಮತ್ತು ಅವ್ಯವಸ್ಥೆ ಮಾದರಿಯಾಗಿರುತ್ತದೆ. ಖಾಸಗೀ ಅಭಿವೃದ್ಧಿವಾಹಕರು ಮಾತ್ರ ತಾವು ಕೆರೆಗಳನ್ನು ಹಾಳುಮಾಡುತ್ತಿಲ್ಲವೆಂದು ಬೇರೆದಾರಿಯಿಲ್ಲದೆ ರಕ್ಷಣಾತ್ಮಕವಾಗಿ ಮಾತಾಡುತ್ತಾರೆ.

ಕರ್ನಾಟಕದ ಉಚ್ಚನ್ಯಾಯಾಲಯದ ಅಂತಿಮ ತೀರ್ಪು :

ನಾಲ್ಕು ವರುಷದ ನಂತರ ಅಂತಿಮ ವರದಿಯನ್ನು ಮುಖ್ಯ ನ್ಯಾಯಾಧಿಶರನ್ನು ಒಳಗೊಂಡ ಮುಖ್ಯ ಪೀಠದ ಎದುರು ಓದಬೇಕಾಗಿತ್ತು ಆದರೆ ಮುಖ್ಯ ನ್ಯಾ|| ವಿಕ್ರಂಜಿತ್ ಸೆನ್ ಮತ್ತು ನ್ಯಾ|| ಶ್ರೀಮತಿ ಬಿ.ವಿ. ನಾಗರತ್ನ ರವರನ್ನು ಒಳಗೊಂಡ ಪೀಠದಲ್ಲಿ ನ್ಯಾ|| ಬಿ.ವಿ. ನಾಗರತ್ನ ಅವರು ಇದೇ ಕೇಸಿಗೆ ಸಂಬಂಧಪಟ್ಟಂತೆ  ತಮ್ಮ ಕಕ್ಷೀದಾರರ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕಾಗಿ ಬಂದದ್ದರಿಂದ ನ್ಯಾ|| ಶ್ರೀಧರ್ ರಾವ್ ಹಾಗು ನ್ಯಾ|| ಇಂದ್ರಕಲಾರವರನ್ನು ಒಳಗೊಂಡ ಪೀಠಕ್ಕೆ ಸದರಿ ಕೇಸನ್ನು ವರ್ಗಾಯಿಸಲಾಯಿತು. ಈ ಪೀಠವು ನಂತರದ ತಿಂಗಳುಗಳಲ್ಲಿ ವಿಚಾರಣೆ ನಡೆಸಿ  11 ಎಪ್ರಿಲ್ 2012ರಂದು ಅಂತಿಮ ತೀರ್ಪನ್ನು ನೀಡಿತು.

ಸಾರ್ವಜನಿಕ ಹಿತಾಸಕ್ತಿಯ ಮೂಲಾಂಶವಾದ ಕೆರೆಗಳ ಖಾ¸ಗೀಕರÀಣಕ್ಕೆ ಸಂಬಂಧಿಸಿದಂತೆ “ನಮ್ಮ ಎದುರಿಗಿರುವ ಭೋಗ್ಯಕ್ಕೆ ಸಂಬಂಧಿಸಿದಂತೆ, ಈ ಭೋಗ್ಯದಿಂದ ಕೆರೆಗಳ ಪರಿಸರಕ್ಕೆ ಹಾನಿಯಾಗಿದೆ ಎಂಬ ವಾದವಿಷಯವು ಆಧಾರರಹಿತವಾದ ಆರೋಪವಾಗಿರುತ್ತದೆ.” ಎಂದು ಅಭಿಪ್ರಾಯಪಟ್ಟಿರುತ್ತದೆ. ಇಂತಹ ನಿರ್ಣಯವು ನ್ಯಾ|| ಎನ್. ಕೆ. ಪಾಟೀಲ್ ರವರು ಖಾಸಗೀಕರಣದಿಂದ ಪ್ರಸ್ತುತ ಕೆರೆಗಳಿಗೆ ಆಗುತ್ತಿರುವ ಹಾನಿಗೆ ಸಂಬಂಧಿಸಿದ ವಿಚಾರವನ್ನು ಸಂಪೂರ್ಣವಾಗಿ  ಅಲಕ್ಷಿಸಿತ್ತು. ಕೆರೆಗಳ ಖಾಸಗೀಕರಣವನ್ನು ಒಪ್ಪಿತ್ತು. “ಭೋಗ್ಯೀದಾರರು ಒದಗಿಸಿರುವ ದಾಖಲೆಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗು ಮಾಲಿನ್ಯ ನಿಯಂತ್ರಣ ಮಂಡಳಿಯ ನೀಡಿರುವ ಕ್ಲಿಯರೆನ್ಸ್ ಪತ್ರಗಳು ಹಾಗು ವರ್ಷ ವರ್ಷವೂ ಮನರಂಜನಾ ಚಟುವಟಿಕೆಗಳನ್ನು ಮುಂದುವರಿಸಲು ನೀಡಿರುವ ಪರವಾನಿಗೆಗಳು ಸ್ಪಷ್ಟವಾಗಿ  ಅವರುನಮಾಡುತ್ತಿರುವ ಯಾವ ಕೆಲಸವೂ ಅನ್ಯಾಯವಲ್ಲ ಎಂದು ತೋರಿಸುತ್ತವೆ. ವಾದ ವಿಷಯದಲ್ಲಿ ತಿಳಿಸಿರುವ ಹಾಗೆ ಬೋಟಿಂಗ್ ಸೌಲಭ್ಯದಿಂದ ವಾತಾವರಣಕ್ಕೆ ಯಾವುದೇ ಹಾನಿಯಾಗುವುದಿಲ್ಲ; ಶ್ರೀ ಲಕ್ಷ್ಮಣ್ ರಾವ್ ರವರ ವರದಿಯಲ್ಲಿ ಕೆರೆಗಳಿಗೆ ಬೋಟಿಂಗ್ ಸೌಲಭ್ಯ ಒದಗಿಸಲು ಪ್ರಸ್ತಾಪಿಸಲಾಗಿತ್ತು.” ಆದರೆ ಮುಖ್ಯ ಪೀಠವು ಲಕ್ಷ್ಮಣ್ ರಾವ್ ವರದಿಯು ಬಂದಿದ್ದು 1980ರಲ್ಲಿ ಮತ್ತು ಆವತ್ತು ಇದ್ದದಕ್ಕಿಂತ ನಗರೀಕರಣವು ಇಂದು ಮೂರು ಪಟ್ಟು ಹೆಚ್ಚಾಗಿದೆ ಎಂಬ ವಿಷಯದ ಬಗ್ಗೆ ಯಾವ ಸ್ಪಷ್ಟನೆಯನ್ನೂ ನೀಡಲಿಲ್ಲ. ಈ ವಿಷಯವನ್ನು ತುಂಬಾ ಸೂಕ್ಷ್ಮವಾಗಿ ನಿಭಾಯಿಸಬೇಕು ಎಂಬ ಲಕ್ಷ್ಮಣ್ ರಾವ್ ಅವರ ಸಲಹೆಯನ್ನು ಗಂಬೀರವಾಗಿ ಪರಿಗಣೆಸಿದಂತೆ ತೋರಲಿಲ್ಲ. ತನ್ನ ತೀರ್ಪನ್ನು ಮುಂದುವರಿಸಿದ ಪೀಠವು, “ನ್ಯಾ|| ಎನ್.ಕೆ ಪಾಟೀಲ್ ಸಮಿತಿಯು ಸಹ ಮಾಲಿನ್ಯ ಮುಕ್ತವಾಗಿರುವ ಕಾಲ್ದೋಣಿ ಹಾಗು ಬ್ಯಾಟರೀ ಚಾಲಿತ ಬೋಟಿಂಗ್ ಅನ್ನು ಒಪ್ಪುತ್ತದೆ.”

ಅನೇಕ ಬರವಣಿಗೆಗಳ ಮೂಲಕ ಹಾಗು ವಾದಗಳ ಮೂಲಕ ಖಾಸಗೀಕರಣ ಮತ್ತು ವಾಣಿಜ್ಯೀಕರಣವು  ಕೆರೆ ವ್ಯವಸ್ಥೆಯ ಜೀವ ರೀತಿ, ಪ್ರಾಕೃತಿಕ ಹಾಗು ಸಾಮಾಜಿಕ ಪರಿಸರಕ್ಕೆ ಹೊಂದಿಕೆ ಯಾಗುವುದಿಲ್ಲವೆಂದು ಇ.ಎಸ್.ಜಿಯು ಸ್ಪಷ್ಟನೆ ಒದಗಿಸಿತು. ಈಗಾಗಲೇ ಇರುವ ಜನಪರ ನೀತಿ ಮತ್ತು ಸರ್ವೋಚ್ಛ ನ್ಯಾಯಾಲಯವು ಸಾರ್ವಜನಿಕ ಸ್ವತ್ತು ಮತ್ತು ಪರಿಸರವನ್ನು ರಕ್ಷಿಸುವ ಸಲುವಾಗಿ ಹೇಳಿರುವ ಜನಪರ ನಂಬಿಕೆಯ ತಾತ್ವಿಕತೆಯು ರಾಜ್ಯ, ಸಾರ್ವಜನಿಕ ಸ್ವತ್ತು, ಮತ್ತು ಜನರ ನಡುವಿನ ಸಂಬಂಧವನ್ನು ಅಳೆಯಲು ಇರುವ ಮಾಪನವೆಂದು ತಿಳಿಸಿತು. ಆದರೆ ಕರ್ನಾಟಕ ಮುಖ್ಯ ನ್ಯಾಯಲಯದ ವಿಭಾಗೀಯ ಪೀಠವು, “ಕೆರೆಯ ಪರಿಸರಕ್ಕಾಗಲೀ, ಜೀವವೈವಿಧ್ಯತೆಗಾಗಲೀ ಇಲ್ಲಿ ನಡೆಯುವ ಮನರಂಜನಾ ಕಾರ್ಯಕ್ರಮಗಳು ಹಾನಿ ಮಾಡಿವೆ ಎಂದು ತೋರಿಸುವ ಯಾವ ದಾಖಲೆಗಳು ಇಲ್ಲ.” ಮತ್ತೂ ಮುಂದುವರೆದ ಪೀಠವು, “ 15ರಿಂದ 17ರ ಪ್ರತಿವಾದಿಗಳಿಗೆ ನೀಡಿರುವ ಬೋಗ್ಯವು ಕಾನೂನನ್ನು ಉಲ್ಲಂಘಿಸಿದೆ ಎಂಬ ವಾದ ವಿಷಯದಲ್ಲಿ ಯಾವುದೇ ಹುರುಳಿಲ್ಲ. ಕೆರೆಯ ಅಬಿವೃದ್ಧಿಯಲ್ಲಿ ಸಾರ್ವಜನಿಕರ (ಪಬ್ಲಿಕ್) ಭಾಗೀದಾರಿಕೆಯು ರಾಷ್ಟ್ರೀಯ ಹಾಗು ರಾಜ್ಯ ಜಲನೀತಿಗಳಿಗನುಗುಣವಾಗಿಯೇ ಇದೆ.” ಇಲ್ಲಿ ‘ಪಬ್ಲಿಕ್’ ಅಂದರೆ ಯಾರೆಂದು ಸ್ಪಷ್ಟವಾಗಿ ತಿಳಿಸಲಾಗಿಲ್ಲ. ಉಚ್ಚನ್ಯಾಯಾಲಯದಲ್ಲಿನ ಎಂ.ಸಿ ಮೆಹತಾ ವಿರೋಧ ಕಮಲನಾಥ ವಿಚಾರಣೆಯಲ್ಲಿ ಸಾರ್ವಜನಿಕ ಸ್ವತ್ತುಗಳ ನಿರ್ವಹಣೆ ಮತ್ತು ಆಡಳಿತವನ್ನು Doctrine of Public Trust ಮುಖ್ಯವಾಗಿ ನಿರ್ಧರಿಸಬೇಕೆಂದು ತೀರ್ಪು ನೀಡಲಾಗಿದೆ. ಆದರೆ ನ್ಯಾ|| ಶ್ರೀಧರ್ ರಾವ್ ವಿಭಾಗೀಯ ಪೀಠವು ಈ ತೀರ್ಪನ್ನು ಪರಿಗಣಿಸಿಲ್ಲ.

ಬೊಗ್ಯಾಂಶಗಳ ಕಾನೂನು ವಿಷಯಕ್ಕೆ ಸಂಬಂಧಿಸಿದಂತೆ ಪೀಠವು, “ಲೀಸ್ ಎಂಬುದು ತಪ್ಪು ಪದ ಪ್ರಯೋಗವಾಗಿದೆ, ಯಾಕೆಂದರೆ ಬೊಗ್ಯದಾರರ ಹಕ್ಕು ಮತ್ತು ಕರಾರಿನಲ್ಲಿ ಅವರ ಪರವಾಗಿ ಯಾವುದೇ ಭೂಹಕ್ಕನ್ನು ನೀಡಲಾಗಿಲ್ಲ. ಇಲ್ಲಿ ಲೀಸ್ ಗಿಂತ ಯಾವದೇ ಹಕ್ಕುಗಳಿಲ್ಲದ ಲೈಸನ್ಸ್‍ನ್ನು ನಿರ್ದಿಷ್ಠವಾದ ಅವಧಿಗೆ ನೀಡಲಾಗಿದೆ. ಮೀನುಗಾರಿಕೆಯ ಹಕ್ಕನ್ನು ಬೇರೆ ಸಂಸ್ಥೆಗಳಿಗೆ ನೀಡಿರುವುದು ಲೀಸ್ ದಾರರಿಗೆ ಕೆರೆಗಳ ಅಥವಾ ಕೆರೆ ಜಾಗಗಳ ಮೇಲೆ ಯಾವುದೇ ರೀತಿಯ ಅಧಿಕಾರವಿಲ್ಲವೆಂದು ತೋರಿಸುತ್ತದೆ. ಮನರಂಜನಾ ಚಟುವಟಿಕೆಗಳಿಂದ ಕೆರೆಗೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಎನ.ಕೆ.ಪಾಟೀಲ್ ವರದಿಯು ವಿವರವಾದ ತನಿಕೆಯ ಮೂಲಕ ತಿಳಿಸಿದೆ.”

ಕೆರೆಗಳನ್ನು ಲೀಸ್ ಗೆ ಕೊಟ್ಟಿರುವುದನ್ನು ಸಮರ್ಥಿಸಿಕೊಂಡಿರುವ ವಿಭಾಗೀಯ ಪೀಠವು, ಈ ಸಂದರ್ಭದಲ್ಲಿ  ಎನ್.ಕೆ ಪಾಟೀಲ್ ವರದಿಯು ಕೆರೆಗಳ ಖಾಸಗೀಕರಣ ಮತ್ತು ವಾಣಿಜ್ಯೀಕರಣವನ್ನು ವ್ಯಾಪಕವಾಗಿ ತಿರಸ್ಕರಿಸಿರುತ್ತದೆ ಎಂಬುದನ್ನು ಮರೆತು ಮೇಲುನೋಟಕ್ಕೆ ಸಮಂಜಸವಾಗಿ ತೋರುವಂತೆ ಸಂಶಯಾಸ್ಪದವಾದ ವಿವೇಚನೆಯ ಮೂಲಕ ಅಂಕಿ-ಅಂಶಗಳನ್ನು ಗೋಜಲುಗೊಳಿಸಲು ಯತ್ನಿಸುತ್ತಿದೆ. ಆದ್ದರಿಂದ ಈ ಭಾಗದ ನ್ಯಾಯವನ್ನು ಪ್ರಶ್ನಿಸಿ ಉಚ್ಚನ್ಯಾಯಾಲಯಕ್ಕೆ ಮರುಮನವಿ ಸಲ್ಲಿಸಲಾಗಿದೆ. ಸಾರ್ವಜನಿಕ ಸ್ವತ್ತು ಗಳಿಗೆ ಸಂಬಂಧಿಸಿದ ನೀತಿ ಕಾನೂನುಗಳ ಅಸಂಬದ್ಧ ವ್ಯಾಖ್ಯಾನತಡೆಯಲು, ಇವುಗಳ ನಿರ್ವಹಣೆ, ಆಡಳಿತ, ಹಾಗು ಯಜಮಾನಿಕೆಯಂತಹ ಸಂದಿಗ್ಧ ವಿಷಯಗಳ ವ್ಯಾಪಕಚರ್ಚೆ ಯಾಗ ಬೇಕೆಂಬ ಆಶಯದಿಂದ ಈ ವಿಷಯವನ್ನು ದೇಶದ ಸರ್ವೋಚ್ಛನ್ಯಾಯಾಲಯದ ಎದುರು ಮಂಡಿಸಲಾಗುತ್ತದೆ. 

ಕೆರೆಗಳ ಆಡಳಿತ ಮತ್ತು ನಿರ್ವಹಣೆ ಕುರಿತಂತೆ  ಅಂತಿಮ ಆದೇಶದ ಕಾರ್ಯಕಾರಿ ಭಾಗ :

ಉಚ್ಛನ್ಯಾಯಾಲಯದ ಕಾನೂನು ಸೇವೆಗಳ ಪ್ರಾಧಿಕಾರವನ್ನು ಒಳಗೊಂಡಂತೆ ಕಾನೂನುಬದ್ದವಾದ ಮೇಲ್ವಿಚಾರಣೆ ವ್ಯವಸ್ಥೆಯನ್ನು ಆಧರಿಸಿ ನ್ಯಾಯಾಲಯದ ತೀರ್ಪು ಕೆರೆಗಳ ಆಡಳಿತ ಮತ್ತು ನಿರ್ವಹಣೆಗೆ ರೂಪುರೇಷೆ ಹಾಗು ಕಾರ್ಯವಿಧಾನಗಳನ್ನು ವ್ಯಾಖ್ಯಾನಿಸಿದೆ. ತನ್ನ ಅಂತಿಮ ಆದೇಶ WP ಓo.1841/2006    ಮತ್ತು ಮಧ್ಯಂತರ ಆದೇಶ  WP 817/2008 ದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಕೆರೆಗಳ ಆಡಳಿತ ಮತ್ತು ನಿರ್ವಹಣೆಗೆ ಅಗತ್ಯವಾದ ಈ ಕೆಳಕಂಡ ಸಲಹೆಗಳನ್ನು ನೀಡಿತು.

1. ತ್ಯಾಜ್ಯವಸ್ತು ಹಾಗು ಚರಂಡಿ ನೀರನ್ನು ಕೆರೆ-ಕಟ್ಟೆಗಳಿಗೆ ಹರಿಸಬಾರದು.

2. ರೆವಿನ್ಯು ದಾಖಲೆಗಳ ಪ್ರಕಾರ ಕೆರೆಗಳ ವ್ಯಾಪ್ತಿಯನ್ನು ಅಳೆದು ಅದರ ಸುತ್ತಲೂ ಪ್ರತಿವಾದಿಗಳ ಖರ್ಚಿನಲ್ಲಿ ಬೇಲಿಯನ್ನು ಹಾಕಿಸುವುದು.

3. ಸಂಬಂಧಿಸಿದ ತಜ್ಞರ ತಾಂತ್ರಿಕ ಅಭಿಪ್ರಾಯವನ್ನು ಪಡೆದು ಅರಣ್ಯ ಇಲಾಖೆಯು ಕೆರೆಯ ಸುತ್ತಲೂ ಸಸಿಗಳು ಹಾಗು ಮರಗಳನ್ನು ನೆಡಬೇಕು.

4. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯು  ಅರಣ್ಯ ಇಲಾಖೆ ಮತ್ತು ರೆವೆನ್ಯೂ ಇಲಾಖೆ ಯನ್ನು ಒಳಗೊಂಡಂತೆ ಇತರ ಪ್ರತಿಪಾದಕರರಿಗೆ ಕಾರ್ಯಕ್ರಮ ಸಂಘಟಕರಾಗಿರುತ್ತಾರೆ ಮತ್ತು ಕೆರೆ ಉಸ್ತುವಾರಿಯ ಜವಾಬ್ದಾರಿಯನ್ನು ಹೊತ್ತಿರುತ್ತಾರೆ.

ಈ ಎಲ್ಲಾ ಸೂಚನೆಗಳನ್ನು ಎನ್.ಕೆ.ಪಾಟೀಲ್ ಸಮಿತಿಯ ವರದಿಯು ನೀಡಿರುವ ಮಾರ್ಗದರ್ಶನ ಹಾಗು ಸಲಹೆಗಳನ್ನು ಅವಲಂಬಿಸಿರುತ್ತದೆ. 

ಕೆರೆ ಕಾಲುವೆಗಳನ್ನು ಈ ರೀತಿಯಾಗಿ ಪಲನೆ, ಅಭಿವೃದ್ಧಿ ಮಾಡುವಂತೆ ತಿಳಿಸಲಾಗಿದೆ:

1. ಕೆರೆಗಳ ರಕ್ಷಣೆ :
ಕೆರೆ ಜಾಗಗಳ ಸರ್ವೆ ಮಾಡಿ ಅವುಗಳ ವ್ಯಾಪ್ತಿಯನ್ನು ಗುರುತಿಸಿ ಸೂಕ್ತ ರಕ್ಷಣೆಯನ್ನು ಒದಗಿಸಬೇಕು. ಕೆರೆಗೆ ಹಾಕುವ ಬೇಲಿಯು ಸಿಮೆಂಟ್ ಅಥವಾ ಸ್ಟೀಲ್ನಿಂದ ಮಾಡಿರಬಾರದು.

2. ಕೆರೆಯ ಸುತ್ತಲೂ ಯಾವುದೇ ಅಬಿವೃದ್ಧಿ ಕಾರ್ಯಗಳು ನಡೆಯಬಾರದು :
ಕರ್ನಾಟಕ ಸರ್ಕಾರದ ನೀಡಿರುವ ಆದೇಶವನ್ನು ಎತ್ತಿ ಹಿಡಿದಿರುವ ನ್ಯಾಯಾಲಯವು ಯಾವುದೇ ಕಟ್ಟಡಗಳನ್ನು ಅಬಿವೃದ್ಧಿಯ ಹೆಸರಿನಲ್ಲಿ ಕಟ್ಟಬಾರದೆಂದು ಸೂಚಿಸಿದೆ. “ಕೆರೆಯ 30 ಮೀ ನಷ್ಟು ಹೊರಮೈಯಲ್ಲಿ ಯಾವುದೇ ಆಧಾರರಹಿತ ಕಟ್ಟಡಗಳು ಇರಬಾರದು.”

3. ಕೆರೆಗಳ ಸಮರ್ಪಕ ಪಾಲನೆ :
ಕೆರೆಗಳನ್ನು ಸರಿಯಾಗಿ ಪಾಲಿಸಬೇಕು. “ಕಾಲಕಾಲಕ್ಕೆ ಹೂಳು ತೆಗೆಯಬೇಕು. ಕಳೆಗಳಿಂದ ಮುಕ್ತವಾಗಿಡಬೇಕು. ಭದ್ರವಾದ ಒಡ್ಡುಗಳನ್ನು ಕಾಲಕಾಲಕ್ಕೆ ಹಾಕಬೇಕು.

4. ಕೆರೆ-ಕಾಲುವೆಗಳು ಮಾಲಿನ್ಯ ಮುಕ್ತವಾಗಿರಬೇಕು: ತ್ಯಾಜ್ಯ ನೀರು ಕೆರೆಗಳಿಗೆ ಹರಿಯುವುದನ್ನು ನಿಲ್ಲಿಸಬೇಕು. ಕೆರೆಗೆ ನೀರು ತುಂಬಿಸುವ ಕಾಲುವೆಗಳನ್ನು ಕಾಲಕಾಲಕ್ಕೆ ಸರಿಯಾಗಿ ಭದ್ರಪಡಿಸಬೇಕು.

5. ಕೆರೆ ಪ್ರದೇಶ ಹಸಿರೀಕರಣ :
ನ್ಯಾಯಲಯವು ಎನ್.ಕೆ.ಪಾಟೀಲ್ ವರದಿಯ ಪ್ರಮುಖ ಸಲಹೆಯನ್ನು ಎತ್ತಿಹಿಡಿಯುತ್ತದೆ. “ಅರಣ್ಯ ಇಲಾಖೆಯು ಕೆರೆಯ ಸುತ್ತ ಮತ್ತು ಜಲಾನಯನ ಪ್ರದೇಶದಲ್ಲಿ ಗಿಡ ಮರಗಳನ್ನು ನೆಡಬೇಕು.”

6. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆರೆಗಳ ರಕ್ಷಣೆ: “ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆರೆಗಳ ರಕ್ಷಣೆಯು ಅದಕ್ಕೆ ಸೇರಿರುತ್ತದೆ.”

7. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕೆರೆಗಳು: ಬೆಂಗಳುರು ಅಬಿವೃದ್ಧಿಯ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕರಗಳ ನಿರ್ವಹಣೆಯನ್ನುThe Commissioner, Bangalore Development Authority, The Chief Executive officer, Lake Development Authority and Deputy Conservator of Forest,  ಅವರು ನೋಡಿಕೊಳ್ಳಬೇಕು.

8. ಮುನ್ಸಿಪಲ್ ಕಾರ್ಪೊರೇಶನ್ ಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳ ರಕ್ಷಣೆ ಮತ್ತು ಪಾಲನೆ: ನಗರ ಮುನ್ಸಿಪಲ್ ಕಾರ್ಪೊರೇಶನ್ ಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು Deputy Commissioner of District, the Commissioner of City Muncipal Corporation and Commissioner of Urban Development Authority ಅವರು ನೋಡಿಕೊಳ್ಳಬೇಕು.

9. ಉಳಿದ ಮುನ್ಸ್ಸಿಪಲ್ ಭಾಗಗಳ ಮತ್ತು ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳ ನಿರ್ವಹಣೆ: ಈ ವ್ಯಾಪ್ತಿಯಲ್ಲಿ ಬರುವ ಕೆರೆಗಳ ರಕ್ಷಣಾ ಸಮಿತಿಯಲ್ಲಿ Deputy Commissioner of District, Commissioner of Muncipality and District Water Resources Officer ಅವರು ಇರುತ್ತಾರೆ.

10. ನ್ಯಾಯಾಲಯದ ನಿರ್ದೆಶನಗಳ ಆಜ್ಞಾನುವರ್ತಿ ಹಾಗು ಕಾನೂನು ಪಾಲಕನಾಗಿ ಅಪೆಕ್ಸ ಸಮಿತಿಯ ರಚನೆ: ಈ ಎಲ್ಲಾ ನಿರ್ದೆಶನಗಳು ಪರಿಪೂರ್ಣವಾಗಿ ಮತ್ತು ಸರಿಯಾಗಿ ಅನುಸರಿಸಲ್ಪಡುತ್ತಿದ್ದೆ ಎಂದು ನಿಗಾ ಇಡಲು ನ್ಯಾಯಾಲಯವು  Principal Secretary, Department of Revenue, Chief Executive Officer, Lake Development Authority and Member Secretary of State Legal Services Authority  ಇವರನ್ನು ಒಳಗೊಂಡ ಅಪೆಕ್ಸ್ ಸಮಿತಿಯನ್ನು ರಚಿಸಿದೆ. ಇವರು ತಮ್ಮ ವರದಿಯನ್ನು ಅಪೆಕ್ಸ್ ಸಮಿತಿಗೆ ನಾಲ್ಕು ತಿಂಗಳಿಗೊಮ್ಮೆ ವರದಿಯನ್ನು ಸಲ್ಲಿಸಬೇಕು. ಅಪೆಕ್ಸ್ ಸಮಿತಿಯು ಕೆರೆ ಸಮಿತಿಗಳಿಂದ ಯಾವುದೇ ಅಹವಾಲುಗಳನ್ನು ಸ್ವೀಕರಿಸುತ್ತಾವಲ್ಲದೇ ಕೆರೆಗಳಸಿಯಾದ ನಿರ್ವಹಣೆ ಮತ್ತು ಅಬಿವೃಧಿಗೆ ಅಗತ್ಯ ಕಾನೂನು ಸಲಹೆಗಳನ್ನು ನೀಡುತ್ತದೆ.

ಉಪಸಂಹಾರ :

ಇ.ಎಸ್.ಜಿ ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರೀಯಯಾಗಿ ಯಾವುದೇ ಪೂರ್ವನಿರ್ದೆಶನದ ಆಧಾರವಿಲ್ಲದೇ ಹೋದರೂ ಸಹ ಉಚ್ಚನ್ಯಾಯಾಲಯದ ಮೊದಲ ಹೆಜ್ಜೆಯ ಕ್ರಮದಿಂದ 38,000 ಕರೆ ಮತ್ತು ಜಲಾನಯನ ಪ್ರದೇಶಗಳ ರಕ್ಷಣೆ, ಪಾಲನೆ, ಹಾಗು ನಿರ್ವಹಣೆಗೆ ಸ್ಥಳೀಯ ಮಟ್ಟದಲ್ಲಿ  ಒಂದು ಸಾಂಸ್ಥಿಕ ರೂಪ ದೊರೆತಿದೆ. ಈ ಪ್ರಾರಂಭವು ಸಂಬಂಧಪಟ್ಟ ಸಂಸ್ಥೆಗಳು, ನ್ಯಾಯ ಪ್ರಾಧಿಕಾರಗಳು, ಚುನಾಯಿತ ಅಂಗಗಳು ಹಾಗು ಸಾಮನ್ಯಜನರಿಗೆ ಕ್ರೀಯಾತ್ಮಕವಾಗಿ ಪ್ರತಿಕ್ರೀಯಿಸಲು ಸಹಾಯ ನೀಡುತ್ತದೆ. ಜಲಸುರಕ್ಷತೆಯನ್ನು ಸಾಧಿಸಬೇಕಾದ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಜಲಾನಯನ ವ್ಯವಸ್ಥೆಯಲ್ಲಿ ಜೀವವ್ಯವಿಧ್ಯತೆಯನ್ನು ರಕ್ಷಿಸಲು, ಸಾರ್ವಜನಿಕ ಸ್ವತ್ತುಗಳನ್ನು ಉಳಿಸಿಕೊಳ್ಳಲು, ಜೀವನರೀತಿಗಳನ್ನು ಕಾಯ್ದುಕೊಳ್ಳಲು ಈ ಪ್ರಕ್ರೀಯೆಯು ದೇಶಕ್ಕೆ ಒಂದು ಮಾದರಿಯಾಗಿರುತ್ತದೆ. ಈಗ ಈ ಕಾನೂನಿನ ಪ್ರಗತಿಪರ ಲಕ್ಷಣಗಳು ಜಾರಿಗೊಳ್ಳುವಂತೆ ಪ್ರಯತ್ನಗಳಾಗ ಬೇಕಿದೆ. ಖಾಸಗೀಕರಣವನ್ನು ಒಪ್ಪುತ್ತಿರುವ ನ್ಯಾಯಾಲಯದ ಹಿಮ್ಮುಖ  ನಿರ್ಧಾರವನ್ನು ಸರ್ವೂಚ್ಛನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಸರ್ವಸ್ವತಂತ್ರ ಪ್ರಜಾಪ್ರಭುತ್ವ ಗಣರಾಜ್ಯವಾದ ಭಾರತದಲ್ಲಿ ಸಾರ್ವಜನಿಕ ಸ್ವತ್ತುಗಳನ್ನು ನಿಜವಾಗಿಯೂ ಯಾರು ಹೊಂದಿ, ಹತೋಟಿಯಲ್ಲಿ ಇಟ್ಟುಕೊಂಡು, ಆಳಬೇಕು ಎಂಬುದನ್ನು ನಿರ್ಧರಿಸಲು ಈ ಕ್ರಮ ಅನಿವಾರ್ಯವಾಗಿದೆ.

Source : ESG, Bengalooru, India
Translation: K B Saraswathi, Tiptur, Karnataka, India.

1 comment:

 1. ಶ್ರೀ ಮನೋಹರ್ ಪಾಟೀಲ್ ಅವರಿಗೆ ನಮಸ್ಕಾರ. ನಾನು ಬಹುದಿನಗಳ ಕಾಲ ನನ್ನ ಕಾರ್ಯ ಒತ್ತಡದಿಂದಾಗಿ ನನ್ನ ಬ್ಲಾಗ್ ನೋಡಲಾಗಿರಲಿಲ್ಲ. ಅದಕ್ಕಾಗಿ ನಿಮ್ಮ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಲು ತಡವಾಗಿತ್ತಿದೆ. ಅದಕ್ಕಾಗಿ ಮೊದಲು ಕ್ಷಮೆಯಿರಲಿ. ತಮ್ಮ ಬ್ಲಾಗನ್ನು ನಾನು ಈ ಮೊದಲೇ ನೋಡಿದ್ದೆ. ಅದ್ಭುತವಾದ ಕೆಲಸ ಮಾಡುತ್ತಿದ್ದೀರಿ. ನಾವು ಒಂದು ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವುದರಿಂದಾಗಿ ನಿಮ್ಮಷ್ಟು ಆಳವಾಗಿ ಮತ್ತು ನೇರವಾಗಿ ನಾವು ಕೆಲಸಮಾಡಲು ಸಾಧ್ಯವಾಗುತ್ತಿಲ್ಲ. ನೀವು ಪಶುಪಾಲನೆ, ಕೃಷಿ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೈಜ ದಾಖಲೆಗಳೊಂದಿಗೆ ಬರೆದಿರುವ ಲೇಖನಗಳು ನನಗೆ ಖಂಡಿತಾ ತುಂಬಾ ಉಪಯುಕ್ತವೆನಿಸಿದವು. ನಾನು ಚಿತ್ರದುರ್ಗ ಜಿಲ್ಲೆಯ ಪಶುಪಾಲನಾ ಸಂಸ್ಕೃತಿ ಮೇಲೆ ಒಂದು ಸಂಶೋಧನೆ ಯೋಜನೆಯ ಅಡಿಯಲ್ಲಿ ಕೆಲಸ ಮಾಡುತ್ತಿರುವೆ. ಈ ಸಂಬಂಧ ನಾನು ನಿಮ್ಮ ಹಲವಾರು ಲೇಖನಗಳನ್ನು ಬಳಸಿಕೊಂಡಿದ್ದೇನೆ.
  ಹಾಗೆಯೇ ಮ್ಯಾಸ ನಾಯಕರ ದೇವರ ದನಗಳ ಮೇಲೆ ಏನಾದರೂ ಮಾಹಿತಿ ಇದೆಯೇ ಎಂದು ಕೇಳಿದ್ದೀರಿ. ಈ ಬಗ್ಗೆ ಇನ್ನೂ ಸಾಕಷ್ಟು ಕೆಲಸ ಮಾಡಬೇಕಾದುದು ಇದೆ. ಆದರೆ ಸಧ್ಯಕ್ಕೆ ದೇವರ ಎತ್ತಿನ ಕಿಲಾರಿಯೊಬ್ಬರ ಆತ್ಮಕಥನವನ್ನು ನಾನು ಕಿಲಾರಿ ಎನ್ನುವ ಹೆಸರಿನಲ್ಲಿ 2009ರಲ್ಲಿ ಪ್ರಕಟಿಸಿರುವೆ. ಇದನ್ನು ಹೊರೆತು ಪಡಿಸಿದರೆ ಈ ಸಮುದಾಯದ ಸಾಂಸ್ಕೃತಿಕ ಅಧ್ಯಯನಗಳ ಸಂದರ್ಭದಲ್ಲಿ ಈ ಕುರಿತು ಸ್ವಲ್ಪ ಮಾಹಿತಿ ದೊರೆಯುತ್ತದೆ. ಉಳಿದಂತೆ ನಾನು ಈಗ ನಡೆಸಿರುವ ಸಂಶೋಧನಾ ಅಧ್ಯಯನದಲ್ಲಿ ಇನ್ನೂ ಕೆಲವು ಮಾತುಗಳು ಸಿಗಲಿವೆ. ಇವೆಲ್ಲವೂ ಬಹಳ ಸೂಕ್ಷ್ಮವಾದ ಅಧ್ಯಯನಗಳಾಗದೆ ಮೇಲ್ನೋಟಕ್ಕೆ ಇವೆ ಎಂದೆನಿಸದು.
  ನಿಮ್ಮ ಬರೆಹಗಳನ್ನು ಮುಂದುವರೆಸಿ ಸಮಾಜವು ಜಾಗೃತವಾಗಿರಲು ಇಂಥ ಕೆಲಸಗಳ ಅನಿವಾರ್ಯತೆ ಇದೆ.
  ದನ್ಯವಾದಗಳು

  ಡಾ.ಎಸ್.ಎಂ.ಮುತ್ತಯ್ಯ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ

  ReplyDelete